ಪ್ರತ್ಯಕ್ಷ ಆಹಾರಸೇವನೆಯಲ್ಲಿ ಶಾಕಾಹಾರ ಮತ್ತು ಮಾಂಸಾಹಾರ ಎಂಬ ೨ ವಿಧಗಳಿವೆ. ಉದಾಹರಣೆ ಆಹಾರದ ಶುದ್ಧತೆ, ಸಾತ್ತ್ವಿಕತೆ ಇತ್ಯಾದಿ ವಿಷಯಗಳನ್ನು ಕೇವಲ ಶಾಕಾಹಾರಿ ಆಹಾರದ ವಿಷಯದ ವಿಚಾರದಲ್ಲಿ ತೆಗೆದುಕೊಳ್ಳಲು ಸಾಧ್ಯ. ಮಾಂಸಾಹಾರದ ವಿಚಾರತತ್ತ್ವವು ಪೂರ್ಣತಃ ಬೇರೆ ಹಾಗೂ ವಿರುದ್ಧವಿರುತ್ತದೆ. ಭಾರತದಲ್ಲಿ ಶಾಕಾಹಾರಕ್ಕೆ ಅನನ್ಯ ಸಾಧಾರಣ ಮಹತ್ವವಿದೆ. ಅದರ ಜೊತೆಗೆ ಜಗತ್ತಿನಲ್ಲಿ ಎಲ್ಲ ದೇಶಗಳಲ್ಲಿ ಭಾರತವೊಂದೇ ಶಾಕಾಹಾರಿ ದೇಶವಾಗಿದೆ. ಯಾವುದು ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಕಾಹಾರಕ್ಕೆ ಪ್ರಾಧಾನ್ಯತೆ ನೀಡುತ್ತದೆ ಮತ್ತು ಮಾಂಸಹಾರ ವರ್ಜ್ಯ ಎಂದು ನಂಬುತ್ತದೆ. ಅಧ್ಯಾತ್ಮದ ದೃಷ್ಟಿಕೋನದಲ್ಲಿ ವಿಚಾರ ಮಾಡಿದರೆ, ಮಾಂಸಾಹಾರ ಅಂದರೆ ಅಭಕ್ಷ ಭಕ್ಷಣ ಎಂದು ಗೊತ್ತಾಗುತ್ತದೆ. ಯಾವುದು ಸೇವಿಸಲು ಯೋಗ್ಯವಿಲ್ಲವೋ ಅದು ಅಯೋಗ್ಯವೇಕೆ ಆಗಿದೆ ? ಅದರ ಸಾಧಾರಣ ಉತ್ತರ, ಅಂದರೆ ನಾವು ಯಾವ ಪ್ರಾಣಿಯ ಮಾಂಸ ತಿನ್ನುತ್ತೇವೋ ಆ ಪ್ರಾಣಿಯ ಸ್ವಭಾವ-ಗುಣಧರ್ಮ ನಮ್ಮಲ್ಲಿ ಬರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ವೃತ್ತಿಯಲ್ಲಿ ಬದಲಾವಣೆಯಾಗುತ್ತದೆ. ತಮೋಗುಣ ಅಥವಾ ರಜೋಗುಣ ಪ್ರವೃತ್ತಿ ಜೋಪಾಸನೆಯಾಗುತ್ತದೆ. ಪ್ರಾಣಿಯಲ್ಲಿ ಬುದ್ದಿ ಮತ್ತು ವಿವೇಕವಿರುವುದಿಲ್ಲ. ಹಾಗಾಗಿ ಮತ್ಸರ. ಸಂಘರ್ಷ ಎಂಬ ಅದರ ನೈಸರ್ಗಿಕ ಗುಣಗಳು ಮನುಷ್ಯನಲ್ಲಿಯೂ ಬರುತ್ತದೆ.
– ಓರ್ವ ಧರ್ಮಪ್ರೇಮಿ