೧. ಬೆಳಗ್ಗೆ ೬ ಗಂಟೆಯ ಒಳಗೆ ಏಳಬೇಕು. ಹೊಟ್ಟೆ ಸ್ವಚ್ಛವಾದ ನಂತರವೇ ಏನಾದರೂ ಆಹಾರ ಅಥವಾ ದ್ರವ ಪದಾರ್ಥ ಸೇವಿಸಬೇಕು.
೨. ಬೆಳಗಿನ ಉಪಾಹಾರ (ತಿಂಡಿ) ಎಲ್ಲರಿಗೂ ಕಡ್ಡಾಯವಾಗಿಲ್ಲ. ಕಫ ಪ್ರಕೃತಿ, ಅಜೀರ್ಣ, ಹಸಿವು ಆಗದಿದ್ದರೆ, ಬೇಸಿಗೆಕಾಲ-ಮಳೆಗಾಲ ಈ ಋತುಗಳಲ್ಲಿ ಉಪಾಹಾರವನ್ನು ಸೇವಿಸಬಾರದು; ಆದರೆ ಇಂತಹ ಸಮಯದಲ್ಲಿ ಊಟ ಮಾತ್ರ ಮಧ್ಯಾಹ್ನ ೧ ಗಂಟೆಯ ಒಳಗೆ ಮಾಡಬೇಕು.
೩. ಊಟ ಮಾಡಿದ ನಂತರ ಹೊಟ್ಟೆ ಉಬ್ಬುತ್ತಿದ್ದರೆ, ವಯಸ್ಸಿಗನುಸಾರ ಜೀರ್ಣಶಕ್ತಿಯು ಕಡಿಮೆ ಆಗಿದ್ದರೆ, ಮಲಬದ್ಧತೆಯ ತಕರಾರು ಇದ್ದರೆ ಊಟದ ಮೊದಲು ಹಸಿಶುಂಠಿ-ಸೈಂಧವ ಲವಣವನ್ನು ತಿನ್ನಬೇಕು.
೪. ಬಿಸಿ ಪದಾರ್ಥವನ್ನು ಸೇವಿಸಿದ ನಂತರ ತಣ್ಣನೆಯ ಪದಾರ್ಥ ಅಥವಾ ತಣ್ಣನೆಯ ಪದಾರ್ಥದ ನಂತರ ಬಿಸಿ ಪದಾರ್ಥ, ಮೊಸರು ಬಿಸಿ ಮಾಡಿ ಅಥವಾ ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸಬಾರದು.
೫. ಪ್ರತಿದಿನ ಕೀಲುಗಳ (Joints) ಮೇಲೆ ಮತ್ತು ಮೀನಖಂಡಗಳಿಗೆ (Calf Muscles) ಸ್ವಲ್ಪ ಎಣ್ಣೆಯನ್ನು ಹಚ್ಚಿ ಉಜ್ಜಬೇಕು.
೬. ಸದ್ಯ ಎಲ್ಲ ಕೆಲಸಗಳನ್ನು ನಿಂತುಕೊಂಡು ಅಥವಾ ಎತ್ತರದ ಮೇಲೆ (ಸ್ಟೂಲ ಮೇಲೆ) ಕುಳಿತುಕೊಂಡು ಮಾಡುವುದರಿಂದ ಸ್ವಲ್ಪ ಸಮಯ ಅವಶ್ಯ ನೆಲದ ಮೇಲೆ ಕುಳಿತುಕೊಳ್ಳಬೇಕು. ಮುಂದೆ-ಹಿಂದೆ ಬಗ್ಗುವುದು, ಸೂರ್ಯನಮಸ್ಕಾರ ಹಾಕುವುದು, ಮೊಣಕಾಲುಗಳು, ಬೆನ್ನುಮೂಳೆ ಇವುಗಳ ವ್ಯಾಯಾಮವನ್ನು ಅವಶ್ಯ ಮಾಡಬೇಕು.
೭. ಸಾಯಂಕಾಲದ ಊಟವನ್ನು ೭.೩೦ ಗಂಟೆಯ ಒಳಗೆ ಮಾಡುವುದು ಒಳ್ಳೆಯದು. ಆ ಊಟವು ಒಳ್ಳೆಯ ರೀತಿಯಲ್ಲಿ ಜೀರ್ಣವಾಗುತ್ತದೆ ಮತ್ತು ಗುಪ್ತರೋಗ (ಮೇಹರೋಗ), ಹೃದಯರೋಗ ಇಂತಹ ಆಹಾರ-ವಿಹಾರಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ.
೮. ಚಳಿಗಾಲದಿಂದ ಬೇಸಿಗೆಕಾಲಕ್ಕೆ ಹೋಗುವಾಗ ಅಥವಾ ಬೇಸಿಗೆಕಾಲದಿಂದ ಚಳಿಗಾಲಕ್ಕೆ ಹೋಗುವಾಗ ಮೊದಲಿನ ಋತುವಿನಲ್ಲಿ ಹೇಳಿದ ಆಹಾರ-ವಿಹಾರಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತ ಬರಬೇಕು ಮತ್ತು ಹೊಸ ಋತುವಿನ ಆಹಾರವನ್ನು ನಿಧಾನವಾಗಿ ಸೇವಿಸಲು ಪ್ರಾರಂಭಿಸಬೇಕು. ಒಮ್ಮಿಂದೊಮ್ಮೆಲೆ ತುಂಬಾ ಬಿಸಿ ಅಥವಾ ತಣ್ಣನೆ ನೀರು, ಮಸಾಲೆಯುಕ್ತ ಅಥವಾ ತಣ್ಣನೆ ಮತ್ತು ಸಿಹಿ ಪದಾರ್ಥಗಳನ್ನು ಇದ್ದಕ್ಕಿದ್ದಂತೆ ಬದಲಾಯಿಸಬಾರದು.
೯. ಎಲ್ಲ ‘ಪೌಷ್ಟಿಕ’ ಪದಾರ್ಥಗಳನ್ನು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿದರೆ ಆಯಿತು ಸ್ಮೂದಿ. ಒಂದೇ ಸಮಯಕ್ಕೆ ಎಲ್ಲ ಪೌಷ್ಟಿಕಾಂಶಗಳನ್ನು ಪಡೆಯುವ ವಿಚಾರದಲ್ಲಿ ಅನೇಕಬಾರಿ ಮನೆಯಲ್ಲಿರುವ ಹಣ್ಣು, ಸೊಪ್ಪು, ಹಾಲು, ಡ್ರೈಫ್ರುಟ್ಸ್ (ಒಣ ಹಣ್ಣುಗಳು) ಇವುಗಳನ್ನು ಸೇರಿಸಿ ಈ ಪದಾರ್ಥವನ್ನು ತಯಾರಿಸಲಾಗುತ್ತದೆ. ಇದರಲ್ಲಿ ಆಯುರ್ವೇದದಲ್ಲಿ ಹೇಳಿದ ಸಂಯೋಜಿತ ಮತ್ತು ಸಂಸ್ಕಾರದ ವಿಚಾರಗಳು ಇರುವುದಿಲ್ಲ. ಹಾಲು ಮತ್ತು ಹಣ್ಣುಗಳು ವಿರುದ್ಧ ಆಹಾರವಾಗಿವೆ. ಇದರಿಂದ ಚರ್ಮರೋಗಕ್ಕೆ ಸಂಬಂಧಿಸಿದ ರೋಗಗಳಾಗುವ ಸಾಧ್ಯತೆ ಹೆಚ್ಚುತ್ತದೆ. ಶರೀರದ ದಾಹಕತೆ ಹೆಚ್ಚುತ್ತದೆ ಇದರಿಂದ ದೇಹದ ದೀರ್ಘಕಾಲಿನ ದೊಡ್ಡ ಕಾಯಿಲೆಗಳು ಉದ್ಭವಿಸುತ್ತವೆ. ಬಿಸಿ ನೀರು ಮತ್ತು ಜೇನುತುಪ್ಪವೂ ಇದೇ ರೀತಿ ಕೆಲಸ ಮಾಡುತ್ತದೆ, ಅದನ್ನು ತಪ್ಪಿಸಬೇಕು.
೧೦. ಪ್ರತಿದಿನ ಸೌತೇಕಾಯಿ, ಗಜ್ಜರಿಯಂತಹ ಹಸಿ ತರಕಾರಿಗಳನ್ನು ತಿನ್ನಬಾರದು. ಭಾರತೀಯ ಆಹಾರ ಪದ್ಧತಿಯಲ್ಲಿ ಇಷ್ಟೊಂದು ಹಸಿ ಆಹಾರದ ಅವಶ್ಯಕತೆಯಿಲ್ಲ. ಇವು ವಾತವನ್ನು ಹೆಚ್ಚ್ಚಿಸುತ್ತವೆ ಮತ್ತು ತೇಗು, ಆಮ್ಲಪಿತ್ತದ ತೊಂದರೆಗಳು ಉದ್ಭವಿಸುತ್ತವೆ. ಸ್ವಲ್ಪ ಪ್ರಮಾಣದಲ್ಲಿ ಕೋಸಂಬರಿ ಒಗ್ಗರಣಿ ಅಥವಾ ಹುಳಿ (ಲಿಂಬೆ ಹಣ್ಣಿನ ರಸ ಅಥವಾ ದಾಳಿಂಬೆಹಣ್ಣು) ಇಂತಹ ಏನಾದರೂ ಹಾಕಿ ತಿನ್ನಬೇಕು. ಮಳೆಗಾಲದಲ್ಲಿ ಕೊಸಂಬರಿ ಮತ್ತು ತರಕಾರಿಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
೧೧. ವಾರ್ಷಿಕ ಪಂಚಕರ್ಮ, ಮಧ್ಯಮಧ್ಯದಲ್ಲಿ ಉಪವಾಸ, ಕಾಯಿಲೆಗಳು ಸ್ವಲ್ಪ ಪ್ರಮಾಣದಲ್ಲಿದ್ದಾಗಲೇ ಅವುಗಳನ್ನು ಹಿಡಿತ ದಲ್ಲಿಡುವುದು. ಇದಕ್ಕಾಗಿ ವೈದ್ಯಕೀಯ ಸಲಹೆಯನ್ನು ಅವಶ್ಯ ಪಡೆಯಬೇಕು.
– ವೈದ್ಯ (ಸೌ.) ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.