ಆಯುರ್ವೇದ ಮತ್ತು ಅಧ್ಯಾತ್ಮ ಇದರ ಅಡಿಪಾಯ ದೃಢವಾಗುತ್ತಿರುವ ಚಿಹ್ನೆಗಳು

‘ಐಟಿ ಇಂಡಸ್ಟ್ರಿ’ (ಮಾಹಿತಿ – ತಂತ್ರಜ್ಞಾನ ಕ್ಷೇತ್ರ) ಹೇಗೆ ಬೆಳೆಯುತ್ತಾ ಹೋದ ಹಾಗೆ ಆರೋಗ್ಯದ ಬಗ್ಗೆ ಆಯುರ್ವೇದ ಮತ್ತು ಆಧ್ಯಾತ್ಮದ ಅಡಿಪಾಯ ದೃಢವಾಗುತ್ತಿದೆ. ರೋಗಿಗಳಲ್ಲಿನ ಪ್ರತಿದಿನದ ಅನುಭವದಿಂದ ಗಮನಕ್ಕೆ ಬರುವುದು ಏನೆಂದರೆ,

೧. ‘ಐಟಿ’ದಲ್ಲಿನ ಜನರು ಅಂತಾರಾಷ್ಟ್ರೀಯ ಸಂಶೋಧನೆ ಅಥವಾ ಒಟ್ಟಾರೆ ಆರೋಗ್ಯದ ಸ್ಥಿತಿಯ ಬಗ್ಗೆ ಬಹಳಷ್ಟು ಅಪ್ಡೇಟೆಡ್‌ ಇರುತ್ತಾರೆ

೨. ಅವರಿಗೆ ಗಮನೀಯ ವಿಶ್ರಾಂತಿ ಮತ್ತು ರೋಗಮುಕ್ತವಾಗುವುದು ಇದರಲ್ಲಿನ ವ್ಯತ್ಯಾಸ ಗಮನಕ್ಕೆ ಬರುತ್ತದೆ.

೩. ಪಥ್ಯ ಪಾಲಿಸುವುದರ ಬಗ್ಗೆ ಅವರು ಹೆಚ್ಚು ಜಾಗರೂಕ, ಕಟ್ಟುನಿಟ್ಟು ಮತ್ತು ಸ್ವಯಂಶಿಸ್ತಿನಿಂದ ಇರುತ್ತಾರೆ.

೪. ಅವರಿಗೆ ಆಯುರ್ವೇದದ ಮೂಲಭೂತ ಪರಿಕಲ್ಪನೆ ತಿಳಿದು ಕೊಳ್ಳುವುದರಲ್ಲಿ ಆಸಕ್ತಿ ಇರುತ್ತದೆ.

ಇದೆಲ್ಲಾ ನಿರೀಕ್ಷಣೆ ತುಲನಾತ್ಮಕವಾಗಿದ್ದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. ಉಳಿದ ಎಲ್ಲಾ ಕ್ಷೇತ್ರದ ಜನರು ಇದನ್ನು ನಿರ್ಲಕ್ಷಿಸುತ್ತಾರೆ ಎಂದಲ್ಲ; ಆದರೆ ಇತರ ಕ್ಷೇತ್ರಗಳ ತುಲನೆಯಲ್ಲಿ ಐಟಿಯಲ್ಲಿ ಗಮನಕ್ಕೆ ಬರುವಷ್ಟು ಪ್ರಮಾಣ ಹೆಚ್ಚು ಇದೆ ಅಷ್ಟೇ !

ಜೇಬು ತುಂಬಾ ಸಂಬಳ ಗಳಿಸಿದರೂ ಮಾನಸಿಕ ಶಾಂತಿ ಕೊಂಡುಕೊಳ್ಳಲು ಸಾಧ್ಯವಿಲ್ಲ, ಇದರ ಅರಿವು ಆಗಿರುವುದರಿಂದ, ವಿಶೇಷವಾಗಿ ಈ ಕ್ಷೇತ್ರದ ಜನರ ಒಲವು ಅಧ್ಯಾತ್ಮ, ಧಾರ್ಮಿಕತೆಯ ಕಡೆಗೆ ಹೆಚ್ಚಾಗಿದೆ. ಬರುವ ಕಾಲದಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳ ಆಗುವ ಸ್ಫೋಟ ಗಮನಿಸಿದರೆ ಇದೆಲ್ಲವೂ ಬಹಳ ಸಕಾರಾತ್ಮಕ ಬದಲಾವಣೆಗಳೆನ್ನಬಹುದು.

– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ (೧೦.೨.೨೦೨೪)