ಸದ್ಯ ಬಿಸಿಲಿನ ತಾಪ ಹೆಚ್ಚಾಗಿರುವುದ ರಿಂದ ಶರೀರಕ್ಕೆ ಶೀತವೆಂದು ಅನೇಕ ಜನರು ಕಾಮಕಸ್ತೂರಿ ಬೀಜಗಳನ್ನು (ಸಬ್ಜಾ) ತಿನ್ನುತ್ತಿದ್ದಾರೆ.
ಸದ್ಯ ವಸಂತ ಋತು ಪ್ರಾರಂಭವಾಗಿದೆ. ಇದು ನಿಸರ್ಗತಃ ಕಫವನ್ನು ಹೆಚ್ಚಿಸುವ ಕಾಲವಾಗಿರುವುದರಿಂದ ನಿಯಮಿತವಾಗಿ ಸಬ್ಜಾ ತಿನ್ನುವವರಿಗೆ ಶೀತ-ಕೆಮ್ಮಿನ ತೊಂದರೆಗಳು ಹೆಚ್ಚಾಗಬಹುದು. ಕಾಮಕಸ್ತೂರಿ ಬೀಜಗಳು (ಸಬ್ಜಾ) ಜೀರ್ಣವಾಗಲು ಜಡವಾಗಿರುತ್ತವೆ.
ನಿಯಮಿತವಾಗಿ ತಿಂದರೆ ಬಿಸಿಲಿನಿಂದ ಮೊದಲೇ ಕಡಿಮೆಯಾಗಿರುವ ಹಸಿವು ಇನ್ನಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಯಾರು ನಿಯಮಿತವಾಗಿ ವ್ಯಾಯಾಮವನ್ನು ಮಾಡುತ್ತಾರೆಯೋ, ಯಾರಲ್ಲಿ ಹಸಿವು ಮತ್ತು ಜೀರ್ಣಶಕ್ತಿ ಉತ್ತಮವಾಗಿದೆಯೋ, ಅವರು ಮಾತ್ರ ಸಬ್ಜಾ ತಿನ್ನಬಹುದು. ಇತರರು ಮಾತ್ರ ಅಪರೂಪಕ್ಕೊಮ್ಮೆ ಮತ್ತು ಸ್ವಲ್ಪ ಮಟ್ಟಿಗೆ ತಿನ್ನುವುದು ಉತ್ತಮ !
– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೨.೪.೨೦೨೪)