‘ನಾವು ಒಂದು ವೇಳೆ ನಾಲಿಗೆಗೆ ಇಷ್ಟವಾಗುವ ಆಹಾರವನ್ನು ಸೇವಿಸಿದರೆ, ಅದು ಆರೋಗ್ಯವರ್ಧಕವಲ್ಲ; ಏಕೆಂದರೆ ಅದರಿಂದ ಸಮತೋಲನ ಆಹಾರ ಸಿಗುವುದಿಲ್ಲ. ಉದಾ. ಪಾನಿಪುರಿ, ಭೇಲಪುರಿ, ಚಾಟ್ ಪದಾರ್ಥಗಳು, ಮಸಾಲೆಯುಕ್ತ ಮತ್ತು ರುಚಿಕರ ಪದಾರ್ಥಗಳು, ಪನ್ನೀರ್, ಪಿಝಾ, ಬರ್ಗರ್, ಮ್ಯಾಗಿ, ನುಡಲ್ಸ್, ಐಸಕ್ರೀಮ್, ಕೇಕ್, ಪೇಸ್ಟ್ರೀ ಇತ್ಯಾದಿ ಇತ್ಯಾದಿ.
ಆಹಾರದಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಬಹುದು
ಇಂತಹ ಪದಾರ್ಥಗಳನ್ನು ಮೇಲಿಂದ ಮೇಲೆ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ, ನೈಸರ್ಗಿಕವಾಗಿ ಶರೀರದ ಮೇಲೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಅದರ ಪರಿಣಾಮಗಳು ಕಾಲಾಂತರದಿಂದ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ನಾವು ಎಲ್ಲಿ ಊಟವನ್ನು ಮಾಡುತ್ತೇವೆ ? ಹೇಗೆ ಮಾಡುತ್ತೇವೆ ? ಯಾವ ರೀತಿಯಲ್ಲಿ ಮಾಡುತ್ತೇವೆ ? ಎಂಬುದು ತುಂಬಾ ಮಹತ್ವದ್ದಾಗಿದೆ. ನಮ್ಮ ವರ್ತನೆಗಳಲ್ಲಿ ಅದರ ಪರಿಣಾಮವಾಗುತ್ತಿರುತ್ತದೆ. ಅಂತರಂಗದ ಶುದ್ಧತೆಯು ಆಹಾರದ ವಿವೇಚನೆ ಮತ್ತು ಶುದ್ಧತೆಯ ಮೇಲೆ ಅವಲಂಬಿಸಿರುತ್ತದೆ.
ಅಡುಗೆ ಮಾಡುವವರ ಅಂತಃಕರಣದಲ್ಲಿನ ಭಾವನೆ ಮತ್ತು ಶುದ್ಧತೆಯು ಆ ಆಹಾರದಲ್ಲಿ ಸೇರುತ್ತದೆ. ಇದರಿಂದ ಆ ಆಹಾರವು ಹೇಗಿದೆ, ಎಂದು ನಿರ್ಧರಿಸಲಾಗುತ್ತದೆ. ಅದರೊಂದಿಗೆ ಎದುರಿಗೆ ಇರುವ ವ್ಯಕ್ತಿಯು ಏನು ತಿನ್ನುತ್ತಾನೆ ? ಯಾವ ರೀತಿ ತಿನ್ನುತ್ತಾನೆ ಮತ್ತು ಎಷ್ಟು ತಿನ್ನುತ್ತಾನೆ ? ಇದರಿಂದ ವ್ಯಕ್ತಿತ್ವ ಮತ್ತು ಸ್ವಭಾವಗಳ ಅಂದಾಜು ಬರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಬಹುದು.
‘ಹರಿ ಚಿಂತನೆ’ ಮಾಡುತ್ತ ಆಹಾರವನ್ನು ಸೇವಿಸುವುದು ಇದು ಸಾರತತ್ತ್ವ !
ಎಷ್ಟು ಸಾತ್ತ್ವಿಕ, ಶುದ್ಧ ಆಹಾರವಿರುತ್ತದೆಯೋ, ಅಷ್ಟು ಸ್ವಭಾವ ಸಾತ್ತ್ವಿಕವಾಗಿರುತ್ತದೆ. ಸಾತ್ತ್ವಿಕ ಆಹಾರವೆಂದರೆ ಕೊಬ್ಬಿನ ಆಹಾರವಲ್ಲ. ಸಾತ್ತ್ವಿಕತೆಯು ಸಮರ್ಪಣೆ ಮತ್ತು ಭಕ್ತಿಪ್ರೀತಿಯನ್ನು ಒಳಗೊಂಡಿರುತ್ತದೆ. ಸಾತ್ತ್ವಿಕ ಆಹಾರವು ಶುದ್ಧ ಧನದ, ಶುದ್ಧ ಮನಸ್ಸಿನ ಮತ್ತು ಶುದ್ಧತೆಯ ಸಾರವಿರುತ್ತದೆ. ಆಹಾರದಿಂದ ಮನಸ್ಸು ಸಿದ್ಧವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರ ಸೇವನೆಯ ಬಗ್ಗೆ ಅಗತ್ಯವಿದ್ದಷ್ಟು ಎಚ್ಚರಿಕೆ ವಹಿಸುವುದು ಎಲ್ಲಿಯೂ ಕಂಡುಬರುವುದಿಲ್ಲ. ಬದಲಾಗಿ ಸ್ವೇಚ್ಛಾಚಾರವೇ ಹೆಚ್ಚು ಕಂಡುಬರುತ್ತದೆ. ಜೀರ್ಣವಾಗುವಷ್ಟೇ ತಿನ್ನಬೇಕು, ಇಂತಹ ಸಾದಾ ಸಂಯಮದಿಂದ ಪಾಲಿಸುವವರು ಬೆರಳಣಿಕೆಯಷ್ಟು ಕಂಡುಬರುತ್ತಾರೆ. ಒಂದು ವೇಳೆ ಆಹಾರ ಸೇವನೆಯ ಬಗ್ಗೆ ಮತ್ತು ಶುದ್ಧತೆಯ ಬಗ್ಗೆ ಯಾವಾಗಲೂ ವಿವೇಕ ಜಾಗರೂಕವಾಗಿದ್ದರೆ, ಆ ಆಹಾರಸೇವನೆಯಿಂದ ಆನಂದ ಸಿಗುತ್ತದೆ. ಮನಸ್ಸು ಆನಂದ ಮತ್ತು ಉತ್ಸಾಹವಾಗಿರುತ್ತದೆ. ಅದರೊಂದಿಗೆ ‘ಹರಿ ಸ್ಮರಣೆಯಿಂದ ಆಹಾರ ಸೇವಿಸಬೇಕು’, ಇದು ಸಂತರ ವಚನದ ಅನುಭೂತಿ ಪಡೆಯುತ್ತ ಆಹಾರವನ್ನು ಸೇವಿಸಿದರೆ ಬಂಗಾರಕ್ಕಿಂತಲೂ ಹಳದಿ ! ಇದೆಲ್ಲ ಆಹಾರ ಸೇವನೆಯ ಸಾರತತ್ತ್ವವಾಗಿದೆ.
– ಓರ್ವ ಧರ್ಮಪ್ರೇಮಿ