ಅಪರೇ ನಿಯತಾಹಾರಾಃ ಪ್ರಾಣಾನ್‌ಪ್ರಾಣೇಷು ಜುಹ್ವತಿ|
ಸರ್ವೇಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ||
– ಶ್ರೀಮದ್ ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೩೦
ಅರ್ಥ: ಮಿತವಾದ ಆಹಾರವನ್ನು ಸೇವಿಸುವವರು ಪ್ರಾಣವಾಯುಗಳ ಸ್ಥಾನದಲ್ಲಿ ಹವನವನ್ನು ಮಾಡುತ್ತಾರೆ, ಅಂದರೆ ಪ್ರಾಣಾಪಾನಾದಿ ಎಲ್ಲ ವಾಯುಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುತ್ತಾರೆ. ಈ ಎಲ್ಲ ಯಜ್ಞಕರ್ತರ ಪಾತಕಗಳು ಈ (ಬೇರೆಬೇರೆ) ಯಜ್ಞಗಳಿಂದ ನಾಶವಾಗಿವೆ ಎಂದು ಅರಿವಾಗುತ್ತದೆ.
ಸ್ಪಷ್ಟೀಕರಣ: ಕೆಲವು ಯೋಗಿಗಳು ಆಹಾರವನ್ನು ಸೇವಿಸದೇ ಪ್ರಾಣಶಕ್ತಿಯನ್ನೇ ಪ್ರಾಣವಾಯುವಿನಲ್ಲಿ ಹೋಮ ಮಾಡುತ್ತಾರೆ. ಈ ಯಜ್ಞಕರ್ತರು ಯಜ್ಞಗಳಿಂದ ನಿಷ್ಪಾಪರಾಗಿರುತ್ತಾರೆ. ಇತರ ಅನೇಕರು ತಮ್ಮ ಆಹಾರವನ್ನು ಮಿತಗೊಳಿಸಿ ಪ್ರಾಣಗಳನ್ನು ಪ್ರಾಣದಲ್ಲಿ ಹೋಮ ಮಾಡುತ್ತಾರೆ. ಪ್ರಾಣಾಪಾನಗಳ ಗತಿಯನ್ನು ನಿರೋಧರೂಪ ಕುಂಭಕವನ್ನು ಮಾಡಿ ಮತ್ತೆ ಮತ್ತೆ ವಾಯುವಿನ ಮೇಲೆ ವಿಜಯವನ್ನು ಪಡೆಯುತ್ತಾರೆ. ಅಂದರೆ ವಿಜಯ ಪಡೆದ ವಾಯುಭೇದದಲ್ಲಿ ವಿಜಯ ಪಡೆಯದೇ ಇರುವ ವಾಯುಭೇದವನ್ನು, ಪ್ರವೇಶಿಸುವಂತೆ ನೋಡಿಕೊಳ್ಳುತ್ತಾರೆ. ಇವರೆಲ್ಲರೂ ತಮ್ಮ ತಮ್ಮ ಸಾಧನೆಯಲ್ಲಿ ಯಜ್ಞದ ಕಲ್ಪನೆಯನ್ನು ಮಾಡುವ ಯಜ್ಞವೇತ್ತರು ಯಜ್ಞಗಳಿಂದ ನಿಷ್ಪಾಪರಾಗುತ್ತಾರೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!