|
ತಿರುವನಂತಪುರಂ (ಕೇರಳ) – ಹಿಂದೂಗಳಿಗೆ ಪವಿತ್ರವಾದ ತುಳಸಿ ವೃಂದಾವನವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಪೊಲೀಸರು ಅಬ್ದುಲ್ ಹಕೀಮ್ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮವನ್ನು ಏಕೆ ಕೈಗೊಂಡಿಲ್ಲ ಎಂದು ಕೇರಳ ಉಚ್ಚನ್ಯಾಯಾಲಯ ಪ್ರಶ್ನಿಸಿದೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಶ್ರೀರಾಜ್ ಎಂಬ ವ್ಯಕ್ತಿಗೆ ಜಾಮೀನು ನೀಡುವಾಗ ನ್ಯಾಯಾಧೀಶರು ಈ ಪ್ರಶ್ನೆಯನ್ನು ಕೇಳಿದರು. (ಕಳ್ಳನನ್ನು ಬಿಟ್ಟು ಸನ್ಯಾಸಿಗೆ ಶಿಕ್ಷೆ ನೀಡುವ ಕಾನೂನುಬಾಹಿರ ಕೇರಳ ಪೊಲೀಸರು! – ಸಂಪಾದಕರು) ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಅಬ್ದುಲ್ ಹಕೀಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. (ಈ ರೀತಿ ಆದೇಶ ನೀಡಬೇಕಾಗುತ್ತದೆ, ಇದನ್ನು ನೋಡಿದರೆ, ಕ್ರಮ ಕೈಗೊಳ್ಳದ ಸಂಬಂಧಪಟ್ಟ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕು! – ಸಂಪಾದಕರು)
1. ವಿಡಿಯೋ ಹಂಚಿಕೊಂಡಿದ್ದಕ್ಕಾಗಿ 32 ವರ್ಷದ ಶ್ರೀರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ಶ್ರೀರಾಜ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ತುಳಸಿ ವೃಂದಾವನಕ್ಕೆ ತನ್ನ ಗುಪ್ತಾಂಗದ ಕೂದಲನ್ನು ಹಾಕಿ ಆಕ್ಷೇಪಾರ್ಹ ಕೃತ್ಯ ಎಸಗಿದ ಅಬ್ದುಲ್ ಹಕೀಮ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲವೆಂದು ಹೇಳಿದರು.
2. ಈ ಕೃತ್ಯ ಎಸಗಿದ ಅಬ್ದುಲ್ ಹಕೀಮ್ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. (ಮುಸಲ್ಮಾನನಾಗಿರುವ ಮಾನಸಿಕ ಅಸ್ವಸ್ಥ ಯಾವಾಗಲೂ ಹಿಂದೂಗಳ ಪವಿತ್ರ ವಸ್ತುಗಳನ್ನು ಏಕೆ ಅಪವಿತ್ರಗೊಳಿಸುತ್ತಾನೆ? ಹಿಂದೂ ಮಾನಸಿಕ ಅಸ್ವಸ್ಥನು ಮುಸ್ಲಿಮರ ಪವಿತ್ರ ವಸ್ತುಗಳನ್ನು ಅಪವಿತ್ರಗೊಳಿಸುತ್ತಾನೆಯೇ? ಮುಸ್ಲಿಂ ಆರೋಪಿಯನ್ನು ಉದ್ದೇಶಪೂರ್ವಕವಾಗಿ ಮಾನಸಿಕ ಅಸ್ವಸ್ಥ ಎಂದು ತೋರಿಸಿ, ಪೊಲೀಸರು ಈ ಘಟನೆಯ ಗಂಭೀರತೆಯನ್ನು ಕಡಿಮೆ ಮಾಡಿ ಹಿಂದೂಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು! – ಸಂಪಾದಕರು)
3. ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಅವರು ಈ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಏಕೆಂದರೆ ಅಬ್ದುಲ್ ಹಕೀಮ್ ಗುರುವಾಯೂರಿನ ಹೋಟೆಲ್ ಮಾಲೀಕನಾಗಿದ್ದಾನೆ ಮತ್ತು ವಾಹನ ಚಾಲನಾ ಪರವಾನಗಿಯನ್ನು ಹೊಂದಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
4. ಆತ ಮಾನಸಿಕ ಅಸ್ವಸ್ಥನಾಗಿದ್ದರೆ ಹೋಟೆಲ್ ಮಾಲೀಕನಾಗಿ ಹೇಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಆತ ಮಾನಸಿಕ ಅಸ್ವಸ್ಥನಾಗಿದ್ದರೆ ವಾಹನ ಚಲಾಯಿಸಲು ಹೇಗೆ ಅವಕಾಶ ಸಿಕ್ಕಿತು ಎಂಬುದನ್ನು ಅಧಿಕಾರಿಗಳು ತನಿಖೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
5. ಶ್ರೀರಾಜ್ ಮೇಲೆ ಜನವರಿ 12, 2024 ರಂದು ಅಬ್ದುಲ್ ಹಕೀಮ್ ಎಂಬ ವ್ಯಕ್ತಿ ತುಳಸಿ ವೃಂದಾವನವನ್ನು ಅಪವಿತ್ರಗೊಳಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದನು ಎಂದು ಆರೋಪಿಸಲಾಗಿದೆ.
6. ಧಾರ್ಮಿಕ ದ್ವೇಷವನ್ನು ಸೃಷ್ಟಿಸುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಮತ್ತು ಶ್ರೀರಾಜ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
7. ಶ್ರೀರಾಜನು ಉಚ್ಚನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು.
ಸಂಪಾದಕೀಯ ನಿಲುವುಕೇರಳದ ಕಮ್ಯುನಿಸ್ಟ್ ಮೈತ್ರಿ ಸರಕಾರವು ಮತಾಂಧ ಮುಸ್ಲಿಮರನ್ನು ಅಳಿಯನಂತೆ ನೋಡಿಕೊಳ್ಳುತ್ತಿದೆ. ಕೇಂದ್ರ ಸರಕಾರವು ಇಂತಹ ಸರಕಾರವನ್ನು ವಿಸರ್ಜಿಸಿ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ರಕ್ಷಿಸುವುದು ಅಗತ್ಯವಾಗಿದೆ ! |