ಪಿತೃಪಕ್ಷ(ಮಹಾಲಯ ಪಕ್ಷ)
ಭಾದ್ರಪದ ಕೃಷ್ಣ ಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.
ಭಾದ್ರಪದ ಕೃಷ್ಣ ಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.
ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ.
ಶ್ರೀ ಗಣೇಶೋತ್ಸವದ ದಿನ ಗಣೇಶನ ತತ್ತ್ವವು ಪೃಥ್ವಿಯ ಮೇಲೆ ಎಂದಿಗಿಂತ ೧ ಸಾವಿರ ಪಟ್ಟು ಕಾರ್ಯ ನಿರತವಾಗಿರುತ್ತದೆ. ಈ ಅವಧಿಯಲ್ಲಿ ಮಾಡಿದಂತಹ ಶ್ರೀ ಗಣೇಶನ ಉಪಾಸನೆಯಿಂದ ಗಣೇಶ ತತ್ತ್ವದ ಲಾಭವು ಅಧಿಕ ಪ್ರಮಾಣದಲ್ಲಿ ಆಗುತ್ತದೆ.
ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶ ಮೂರ್ತಿಯಲ್ಲಿ ಶ್ರೀ ಗಣೇಶತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿತವಾಗಿ ಭಕ್ತರಿಗೆ ಅದರಿಂದ ಲಾಭವಾಗುತ್ತದೆ. ಅಂದರೆ ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಿದ ಯಾವುದೇ ವಿಷಯವು ನಿಸರ್ಗಕ್ಕೆ ಪೂರಕವಾಗಿರುವ ಅಂದರೆ ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ.
ಪ್ರತಿವರ್ಷ ದೊಡ್ಡ ಮೂರ್ತಿಯನ್ನು ತರುವ ರೂಢಿಯಿದ್ದರೂ, ಬರಗಾಲದಲ್ಲಿ ವಿಸರ್ಜನೆ ಸುಲಭವಾಗಿ ಆಗುವಂತಹ ಚಿಕ್ಕ (೬-೭ ಇಂಚು ಎತ್ತರದ) ಮೂರ್ತಿಯನ್ನು ಪೂಜಿಸಬೇಕು.
ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಅತ್ಯಧಿಕ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.
ಆವೆಮಣ್ಣು ಅಥವಾ ಜೇಡಿಮಣ್ಣನ್ನು ಬಿಟ್ಟು ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್, ಹಾಗೆಯೇ ಕಾಗದದ ಉಂಡೆ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತದೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ.
ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿಯನ್ನು ಬಿಡಿಸಬೇಕು
ಶ್ರೀಕೃಷ್ಣನಿಗೆ ಜೋಗುಳ ಹಾಡಿದ ನಂತರ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಬೇಕು.
ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ‘ಧರಣೆ-ಪಾರಣೆ’ ಎಂಬ ಹೆಸರಿನ ವ್ರತವನ್ನು ಮಾಡುತ್ತಾರೆ. ಈ ವ್ರತದಲ್ಲಿ ಒಂದು ದಿನ ಭೋಜನ ಮತ್ತು ಮರುದಿನ ಉಪವಾಸ ಹೀಗೆ ಸತತವಾಗಿ ನಾಲ್ಕು ತಿಂಗಳು ಮಾಡಬೇಕಾಗುತ್ತದೆ.