ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ | ನಿರ್ವಿಘ್ನಂ ಕುರು ಮೆ ದೇವ ಸರ್ವಕಾರ್ಯೇಷು ಸರ್ವದಾ ||

ಹಿಂದೂಗಳ ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಮತ್ತು ಈ ಹಬ್ಬದ ಇತರ ದಿನಗಳಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಇಂತಹ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ.

ಗಣೇಶಭಕ್ತರಿಗೆ ವಿಘ್ನಹರ್ತಾ, ಸಿದ್ಧಿದಾತಾ ಮತ್ತು ಅಷ್ಟ ದಿಕ್ಕುಗಳ ಅಧಿಪತಿಯಾದ ಶ್ರೀ ಗಣೇಶನ ಭಾವಪೂರ್ಣ ಪೂಜೆಯನ್ನು ಮಾಡಿ ಅವನ ಆಶೀರ್ವಾದವನ್ನು ಪಡೆಯುವ ಹಂಬಲ ಸದಾ ಇರುತ್ತದೆ. ‘ಗಣೇಶಭಕ್ತರು ಗಣೇಶಪೂಜೆಯನ್ನು ಭಾವಪೂರ್ಣವಾಗಿ ಮಾಡುವಂತಾಗಲಿ, ಮತ್ತು ಅವರ ಮೇಲೆ ಗಣಪತಿಯ ಕೃಪೆಯಾಗಲಿ ಎಂಬ ಉದ್ದೇಶದಿಂದ ಶ್ರೀ ಗಣೇಶ ಚತುರ್ಥಿಯನ್ನು ಶಾಸ್ತ್ರೀಯವಾಗಿ ಹೇಗೆ ಆಚರಿಸಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶ್ರೀ ಗಣೇಶೋತ್ಸವದ ದಿನ ಗಣೇಶನ ತತ್ತ್ವವು ಪೃಥ್ವಿಯ ಮೇಲೆ ಎಂದಿಗಿಂತ ೧ ಸಾವಿರ ಪಟ್ಟು ಕಾರ್ಯ ನಿರತವಾಗಿರುತ್ತದೆ. ಈ ಅವಧಿಯಲ್ಲಿ ಮಾಡಿದಂತಹ ಶ್ರೀ ಗಣೇಶನ ಉಪಾಸನೆಯಿಂದ ಗಣೇಶ ತತ್ತ್ವದ ಲಾಭವು ಅಧಿಕ ಪ್ರಮಾಣದಲ್ಲಿ ಆಗುತ್ತದೆ. ‘ಓಂ ಗಂ ಗಣಪತಯೇ ನಮಃ | ಈ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು. ಈ ನಾಮಜಪವನ್ನು ಒಬ್ಬರೇ ಹಾಗೂ ಸಾಮೂಹಿಕವಾಗಿಯೂ ಮಾಡಬಹುದು.

‘ಹೇ ಶ್ರೀ ಗಣೇಶಾ, ನೀನು ಕಷ್ಟ ನಿವಾರಕ ಹಾಗೂ ಶುಭಕರವಾಗಿರುವುದರಿಂದ ಎಲ್ಲ ಕಾರ್ಯದ ಆರಂಭವು ನಿನ್ನ ಸ್ಮರಣೆಯಿಂದಲೇ ಆಗುತ್ತದೆ. ಯಾವುದೇ ರೀತಿಯ ಪೂಜೆ ಅಥವಾ ಅನುಷ್ಠಾನಗಳಲ್ಲಿ ಮೊದಲು ನಿನ್ನನ್ನು ಆವಾಹನೆ ಮಾಡಲಾಗುತ್ತದೆ. ದೇವರ ಕೋಣೆಯಲ್ಲಿಯೂ ನಿನ್ನನ್ನೇ ಮಧ್ಯದಲ್ಲಿ ಹಾಗೂ ಅಗ್ರಸ್ಥಾನದಲ್ಲಿಡಲಾಗುತ್ತದೆ. ಶುಭ ಕಾರ್ಯಾರಂಭದಲ್ಲಿ ನಿನ್ನ ಸ್ಮರಣೆ ಹಾಗೂ ವಂದನೆ ಅನಿವಾರ್ಯವಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಮಗೆ ಆಶಿರ್ವಾದವನ್ನು ನೀಡಿರಿ, ಎಂದು ನಿನ್ನ ಚರಣಗಳಲ್ಲಿ ಭಾವಪೂರ್ಣ ಪ್ರಾರ್ಥನೆ !

ಸೆಪ್ಟೆಂಬರ್ ೧೦ ರಂದು ಇರುವ ಶ್ರೀ ಗಣೇಶ ಚತುರ್ಥಿ ನಿಮಿತ್ತ ವಾಚಕರು, ಹಿತಚಿಂತಕರು ಮತ್ತು ಜಾಹೀರಾತುದಾರರಿಗೆ ಶುಭಾಶಯಗಳು ಶ್ರೀ ಗಣೇಶನ ಕೃಪಾದೃಷ್ಟಿಯು ಎಲ್ಲರ ಮೇಲಿರಲಿ ಎಂದು ಶ್ರೀ ಗಣೇಶನ ಚರಣಗಳಲ್ಲಿ ಪ್ರಾರ್ಥನೆ.