ಚಾತುರ್ಮಾಸ

ವ್ರತಗಳು

ಸಾಮಾನ್ಯ ಜನರು ಚಾತುರ್ಮಾಸದಲ್ಲಿ ಯಾವುದಾದರೊಂದು ವ್ರತವನ್ನು ಮಾಡುತ್ತಾರೆ. ಪರ್ಣಭೋಜನ (ಎಲೆಯಲ್ಲಿ ಊಟ ಮಾಡುವುದು), ಏಕಭೋಜನ (ಒಪ್ಪೊತ್ತು ಊಟ ಮಾಡುವುದು), ಅಯಾಚಿತ (ಯಾಚಿಸದೇ ಸಿಕ್ಕಷ್ಟು ಊಟ ಮಾಡುವುದು), ಏಕವಾಡಿ (ಒಂದೇ ಬಾರಿ ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಊಟ ಮಾಡುವುದು), ಮಿಶ್ರಭೋಜನ (ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಅವೆಲ್ಲವನ್ನೂ ಕಲಸಿ ತಿನ್ನುವುದು) ಮುಂತಾದ ಭೋಜನದ ನಿಯಮಗಳನ್ನು ಪಾಲಿಸಬಹುದು.

ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ‘ಧರಣೆ-ಪಾರಣೆ’ ಎಂಬ ಹೆಸರಿನ ವ್ರತವನ್ನು ಮಾಡುತ್ತಾರೆ. ಈ ವ್ರತದಲ್ಲಿ ಒಂದು ದಿನ ಭೋಜನ ಮತ್ತು ಮರುದಿನ ಉಪವಾಸ ಹೀಗೆ ಸತತವಾಗಿ ನಾಲ್ಕು ತಿಂಗಳು ಮಾಡಬೇಕಾಗುತ್ತದೆ. ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ಒಂದು ಅಥವಾ ಎರಡು ಧಾನ್ಯಗಳ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಕೆಲವರು ಒಪ್ಪೊತ್ತು ಊಟ ಮಾಡುತ್ತಾರೆ. ನಾನಾ ಭಾಗಗಳಲ್ಲಿ ಚಾತುರ್ಮಾಸದಲ್ಲಿ ವಿವಿಧ ಆಚಾರಗಳು ಕಂಡು ಬರುತ್ತವೆ.(ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)