ವಿವಿಧ ರೀತಿಯ ಶ್ರೀ ಗಣೇಶಮೂರ್ತಿಗಳು ಮತ್ತು ಆ ಕುರಿತಾದ ಧರ್ಮಶಾಸ್ತ್ರ

ಜೇಡಿಮಣ್ಣು ಅಥವಾ ಆವೆ ಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿಧಿಯಿದೆ

ಪಾರ್ವತಿಯು ನಿರ್ಮಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ ಅವಳು ಮಣ್ಣಿನಿಂದ ಆಕಾರ ಮಾಡಿ ಅದರಲ್ಲಿ ಶ್ರೀ ಗಣೇಶನನ್ನು ಆವಾಹನೆ ಮಾಡಿದಳು (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ಆಗಿದ್ದಾನೆ ಎಂದು ಹೇಳಲಾಗಿದೆ.) ‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಮಣ್ಣಿನ ಗಣೇಶಮೂರ್ತಿಯನ್ನು ತಯಾರಿಸಬೇಕು ಎಂದು ಶಾಸ್ತ್ರವಿಧಿಯಿದೆ (ನಿಯಮವಿದೆ).

ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶಮೂರ್ತಿಯು ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ !

ಅಧ್ಯಾತ್ಮಶಾಸ್ತ್ರಕ್ಕನುಸಾರ, ಅಂದರೆ ಮೂರ್ತಿಶಾಸ್ತ್ರಕ್ಕನುಸಾರ ಶ್ರೀ ಗಣೇಶನ ಮೂರ್ತಿಯು ಜೇಡಿಮಣ್ಣಿನಿಂದ ತಯಾರಿಸಿದ್ದು ಮತ್ತು ನೈಸರ್ಗಿಕ ಬಣ್ಣಗಳನ್ನು ಹಚ್ಚಿದ್ದಿರಬೇಕು. ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶ ಮೂರ್ತಿಯಲ್ಲಿ ಶ್ರೀ ಗಣೇಶತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿತವಾಗಿ ಭಕ್ತರಿಗೆ ಅದರಿಂದ ಲಾಭವಾಗುತ್ತದೆ. ಅಂದರೆ ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಿದ ಯಾವುದೇ ವಿಷಯವು ನಿಸರ್ಗಕ್ಕೆ ಪೂರಕವಾಗಿರುವ ಅಂದರೆ ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ.

‘ಗಣೇಶಮೂರ್ತಿ ಜೇಡಿಮಣ್ಣಿನದ್ದೇ ಏಕೆ ಇರಬೇಕು ? ಈ ಕುರಿತು ಧರ್ಮಶಾಸ್ತ್ರದಲ್ಲಿನ ಉಲ್ಲೇಖ

೧. ತತ್ರ ಮೃನ್ಮಯಾದಿಮೂರ್ತೌ ಪ್ರಾಣಪ್ರತಿಷ್ಠಾ ಪೂರ್ವಕಂ ವಿನಾಯಕಂ ಷೋಡಷೋಪಚಾರೈಃ ಸಂಪೂಜ್ಯ … – ಧರ್ಮಸಿಂಧು

ಅರ್ಥ : ಈ ದಿನ (ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ) ಮಣ್ಣು ಇತ್ಯಾದಿಗಳಿಂದ ತಯಾರಿಸಿದ ಶ್ರೀ ಗಣೇಶನ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಸ್ಥಾಪನೆಯನ್ನು ಮಾಡಿ ಷೋಡಶೋಪಚಾರ ಪೂಜೆಯನ್ನು ಮಾಡಿ …

೨. ಸ್ವಶಕ್ತ್ಯಾಯ ಗಣನಾಥಸ್ಯ ಸ್ವರ್ಣರೌಪ್ಯಮ ಯಾಕೃತಿಮ್ | ಅಥವಾ ಮೃನ್ಮಯಿ ಕಾರ್ಯಾ ವಿತ್ತಶಾಠ್ಯಂ ನ ಕಾರಯೇತ್ || – ಸ್ಮೃತಿಕೌಸ್ತುಭ

ಅರ್ಥ : ಈ (ಸಿದ್ಧಿವಿನಾಯಕನ) ಪೂಜೆಗಾಗಿ ತಮ್ಮ ಕ್ಷಮತೆಗನುಸಾರ ಬಂಗಾರ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು. ಇದರಲ್ಲಿ ಜಿಪುಣತನ ಮಾಡಬಾರದು. (ಇದರಲ್ಲಿ ಇತರ ಧಾತುಗಳ ಮೂರ್ತಿಯ ಬಗ್ಗೆ ಉಲ್ಲೇಖವಿಲ್ಲ.)

ಗಣೇಶ ಮೂರ್ತಿಯನ್ನು ಸ್ಥಾಪಿಸಿದ ನಂತರ ಪ್ರತಿ ದಿನ ಮಾಡಬೇಕಾದ ಪಂಚೋಪಚಾರ ಪೂಜೆ

ಸಂಜೆ ಏಳು ಏಳುವರೆಗೆ ದೇವರಿಗೆ ಅರ್ಪಿಸಿದ ಹೂವು ತೆಗೆದು ಗಂಧ, ಹೂವು, ದೂರ್ವೆ, ಧೂಪ, ದೀಪ ಮತ್ತು ನೈವೇದ್ಯವನ್ನು ಅರ್ಪಿಸಬೇಕು. ಆರತಿಯನ್ನು ಬೆಳಗಬೇಕು. ಇದನ್ನು ಪಂಚೋಪಚಾರ ಪೂಜೆ ಎನ್ನುತ್ತಾರೆ. ಪ್ರತಿ ದಿನವೂ ಷೋಡಶೋಪಚಾರ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಮೇಲೆ ನೀಡಿರುವಂತೆ ಪಂಚೋಪಚಾರ ಪೂಜೆಯನ್ನು ಮಾಡಬೇಕು. ಪೂಜೆಯ ನಂತರ ಸಮಯವಿದ್ದಲ್ಲಿ ಗಣೇಶ ಸ್ತೋತ್ರ, ಅಥರ್ವಶೀರ್ಷ, ಗಣೇಶ ಸಹಸ್ರನಾಮಾವಳಿ ಇವುಗಳನ್ನು ಪಠಿಸಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪಂಚೋಪಚಾರ ಪೂಜೆ ಮಾಡಬೇಕು.

ಶ್ರೀ ಗಣೇಶಮೂರ್ತಿ ಹೇಗಿರಬೇಕು ?

  • ಮೂರ್ತಿಯು ಆಕಾರದಲ್ಲಿ ಚಿಕ್ಕ (ಒಂದರಿಂದ ಒಂದೂವರೆ ಅಡಿ ಎತ್ತರ)ದಾಗಿರಬೇಕು.
  • ಮೂರ್ತಿ ಮಣೆಯ ಮೇಲೆ ಕುಳಿತುಕೊಂಡಿರಬೇಕು.
  • ಆದಷ್ಟು ಮೂರ್ತಿಯ ಸೊಂಡಿಲು ಎಡಬದಿಗೆ ಹೊರಳಿರಬೇಕು.
  • ಮೂರ್ತಿಗೆ ನೈಸರ್ಗಿಕ ಬಣ್ಣಗಳನ್ನು ಬಳಿದಿರಬೇಕು.