ಗಲ್ವಾನ್ ಕಣಿವೆಯಲ್ಲಿನ ಸಂಘರ್ಷದ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಉತ್ತಮವಾದ ತರಬೇತಿಯ ಅವಶ್ಯಕತೆ ಇದೆ ! – ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್

ನವ ದೆಹಲಿ – ಪ್ರತ್ಯಕ್ಷ ಗಡಿರೇಖೆಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಹಾಗೂ ಇತರ ಸ್ಥಳಗಳಲ್ಲಾದ ಚಕಮಕಿಯ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಸಿದ್ಧತೆಯ ಹಾಗೂ ಒಳ್ಳೆಯ ತರಬೇತಿಯ ಅವಶ್ಯಕತೆ ಇದೆ, ಎಂಬುದು ಅರಿವಾಯಿತು, ಎಂದು ಭಾರತದ ಚೀಫ್ ಆಫ್ ಡಿಫೆನ್ಸ್ ಜನರಲ್ ಬಿಪಿನ ರಾವತ್ ಹೇಳಿದರು. ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ಭಾರತ ಮತ್ತು ಚೀನಾದ ನಡುವಿನ ಉದ್ವಿಗ್ನ ಸ್ಥಿತಿ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದರು.

ಜನರಲ್ ರಾವತ್ ತಮ್ಮ ಮಾತನ್ನು ಮುಂದುವರೆಸುತ್ತಾ, ಚೀನಾದ ಸೈನಿಕರಿಗೆ ಹಿಮಾಲಯದಲ್ಲಿ ಹೋರಾಡಲು ಸದೃಢರಿಲ್ಲ ಹಾಗೂ ಅವರಿಗೆ ದೀರ್ಘ ಕಾಲದವರೆಗೆ ಹೋರಾಡಲು ಆಗುವುದಿಲ್ಲ. ಭಾರತಕ್ಕೆ ತಾಗಿರುವ ಗಡಿಯಲ್ಲಿ ಚೀನಾದ ಸೈನಕರನ್ನು ಬದಲಾಯಿಸಲಾಗಿದೆ. ಚೀನಾದ ಸೈನಿಕರು ಸಣ್ಣಪುಟ್ಟ ಯುದ್ಧ ಮಾಡಬಹುದು. ಅವರಿಗೆ ಈ ಪ್ರದೇಶದ ಯುದ್ಧದ ಅನುಭವವಿಲ್ಲ. ಭಾರತವು ಚೀನಾದ ಮೇಲೆ ನಿಗಾವನ್ನಿರಿಸಿದೆ. ಭಾರತೀಯ ಸೈನಿಕರು ಯಾವಾಗಲೂ ಸಿದ್ಧರಾಗಿದ್ದಾರೆ. ಭಾರತೀಯ ಸೈನಿಕರು ಉತ್ತಮ ಸಿದ್ಧತೆಯನ್ನು ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಭಾರತೀಯ ಸೈನ್ಯವು ಚೀನಾದ ಸೈನ್ಯದ ತುಲನೆಯಲ್ಲಿ ಉತ್ತಮವಾಗಿದೆ. ಸೈನ್ಯಕ್ಕಾಗಿ ಪಶ್ಚಿಮ ಮತ್ತು ಉತ್ತರದ ನೇತೃತ್ವದ ಅವಶ್ಯಕತೆ ಇದೆ. ಉತ್ತರದ ಗಡಿಯಲ್ಲಿ ಸಧ್ಯ ಕೆಲವು ಪ್ರಮಾಣದಲ್ಲಿ ಚಲನವಲನ ಹೆಚ್ಚಾಗಿದೆ, ಎಂಬ ಮಾಹಿತಿಯನ್ನು ರಾವತರು ನೀಡಿದರು.