ಸನಾತನದ ಆಯುರ್ವೇದಿಕ ಔಷಧಗಳು
ಇಲ್ಲಿ ಪ್ರಾಥಮಿಕ ಉಪಚಾರವನ್ನು ಕೊಟ್ಟಿದೆ. ೭ ದಿನಗಳಲ್ಲಿ ಕಡಿಮೆಯಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು. ಸನಾತನ ಸಂಸ್ಥೆಯ ಯಷ್ಟಿಮಧ (ಜೇಷ್ಠ ಮಧ) ಚೂರ್ಣ ಲಭ್ಯವಿದೆ. ಇದರ ಇತರ ರೋಗಗಳ ಮೇಲಿನ ಉಪಯೋಗವನ್ನು ಆ ಡಬ್ಬಿಯ ಜೊತೆಗಿರುವ ಚೀಟಿಯಲ್ಲಿ ಕೊಡಲಾಗಿದೆ.
ಇಲ್ಲಿ ಪ್ರಾಥಮಿಕ ಉಪಚಾರವನ್ನು ಕೊಟ್ಟಿದೆ. ೭ ದಿನಗಳಲ್ಲಿ ಕಡಿಮೆಯಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು. ಸನಾತನ ಸಂಸ್ಥೆಯ ಯಷ್ಟಿಮಧ (ಜೇಷ್ಠ ಮಧ) ಚೂರ್ಣ ಲಭ್ಯವಿದೆ. ಇದರ ಇತರ ರೋಗಗಳ ಮೇಲಿನ ಉಪಯೋಗವನ್ನು ಆ ಡಬ್ಬಿಯ ಜೊತೆಗಿರುವ ಚೀಟಿಯಲ್ಲಿ ಕೊಡಲಾಗಿದೆ.
ಬೆಲ್ಲದ ಪದಾರ್ಥಗಳನ್ನು ಮೇಲಿಂದ ಮೇಲೆ ತಿನ್ನುತ್ತಿದ್ದರೆ ಪ್ರತಿದಿನವೂ ಆ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತಿರುತ್ತದೆ. ಆದುದರಿಂದ ಶರಬತ್ತಿನ ಬದಲಾಗಿ ಸಾಮಾನ್ಯ ನೀರನ್ನೇ ಕುಡಿಯಬೇಕು.
ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಖಾರಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ಪಿತ್ತದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ.
ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳನ್ನು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು. ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.
ಶರೀರದ ಕಾರ್ಯ ಸರಿಯಾಗಿ ನಡೆಯಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆವಶ್ಯಕವಾಗಿದೆಯೋ, ಹಾಗೆಯೇ ಯೋಗ್ಯ ಪ್ರಮಾಣದಲ್ಲಿ ನಿದ್ದೆಯನ್ನು ಮಾಡುವುದೂ ಆವಶ್ಯಕವಾಗಿದೆ. ರಾತ್ರಿ ತುಂಬಾ ಸಮಯ ಜಾಗರಣೆ ಮಾಡಿದರೆ ಪಿತ್ತ ಹೆಚ್ಚಾಗುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ, ಪಚನಕ್ಕೆ ಸಂಬಂದಿಸಿದ ರೋಗಗಳು ಆರಂಭವಾಗುತ್ತವೆ.
‘ಆಹಾರಪದಾರ್ಥಗಳ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಅವುಗಳಲ್ಲಿನ ಒಂದು ತಪ್ಪುಕಲ್ಪನೆ ಎಂದರೆ ‘ಬದನೆಕಾಯಿ ವಾತಜನಕವಾಗಿದೆ ಎಂದು ತಿಳಿಯುವುದು. ಬದನೆಕಾಯಿ ವಾತಜನಕವಂತೂ ಅಲ್ಲವೇ ಅಲ್ಲ. ಬದಲಾಗಿ ಅದು ವಾತ ಮತ್ತು ಕಫದ ಮೇಲೆ ಒಂದು ಒಳ್ಳೆಯ ಔಷಧಿಯಾಗಿದೆ.
‘ಇತ್ತೀಚೆಗೆ ಅನೇಕ ಜನರು ನಡೆಯುವ ವ್ಯಾಯಾಮನ್ನು ಮಾಡುತ್ತಾರೆ; ಆದರೆ ಕೆಲವರು ಮೋಜು ಮಜಾ ಮಾಡುತ್ತ ನಡೆಯುತ್ತಾರೆ. ಅನೇಕರು ನಡೆಯುವಾಗ ಪರಸ್ಪರ ಮಾತನಾಡುತ್ತಾರೆ. ಇದರಿಂದ ವ್ಯಾಯಾಮದ ಲಾಭವಾಗುವುದಿಲ್ಲ. ‘ಶರೀರ-ಆಯಾಸ-ಜನಕಂ ಕರ್ಮ ವ್ಯಾಯಾಮಃ |’ ಅಂದರೆ ‘ಶರೀರಕ್ಕೆ ಶ್ರಮವಾಗುವ, ಹಾಗೆ ಕರ್ಮವನ್ನು ಮಾಡುವುದೆಂದರೆ ವ್ಯಾಯಾಮ’, ಹೀಗೆ ವ್ಯಾಯಾಮದ ಅರ್ಥವಾಗಿದೆ.
‘ಚಾಕಲೇಟ್, ಬಿಸ್ಕತ್ತು, ಚಿಪ್ಸ್, ಖಾರಾಸೇವು (ಫರಸಾಣ), ಸೇವು, ಚೂಡಾ ಇತ್ಯಾದಿ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ, ಉತ್ತತ್ತಿ, ಗೋಡಂಬಿ, ಅಂಜೂರ, ಅಕ್ರೋಡ ಇಂತಹ ಒಣ ಹಣ್ಣುಗಳನ್ನು ತಿನ್ನಬೇಕು.