ನೀರಿನ ಬದಲು ಶರಬತ್ತು ಕುಡಿಯಬಹುದೇ ?

ವೈದ್ಯ ಮೇಘರಾಜ ಪರಾಡಕರ್

‘ಕೆಲವೊಮ್ಮೆ ಮೋಜಿಗಾಗಿ ಶರಬತ್ತನ್ನು ಕುಡಿಯಬಹುದು; ಆದರೆ ಪ್ರತಿದಿನ ಶರಬತ್ತನ್ನು ಕುಡಿಯುವ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಶರಬತ್ತು ಕುಡಿಯುವುದರಿಂದ ಅನಾವಶ್ಯಕವಾಗಿ ಸಕ್ಕರೆಯು ಹೊಟ್ಟೆಯಲ್ಲಿ ಹೋಗುತ್ತದೆ. ಸಕ್ಕರೆಯು ಆರೋಗ್ಯಕ್ಕೆ ಹಾನಿಕರವಾಗಿದೆ. ಸಕ್ಕರೆಯ ಬದಲು ಬೆಲ್ಲವನ್ನು ಹಾಕಿದರೂ, ಬೆಲ್ಲವು ಸಹ ಹೆಚ್ಚು ಪ್ರಮಾಣದಲ್ಲಿ ಪ್ರತಿದಿನ ತಿನ್ನುವುದು ಒಳ್ಳೆಯದಲ್ಲ. ಬೆಲ್ಲದ ಪದಾರ್ಥಗಳನ್ನು ಮೇಲಿಂದ ಮೇಲೆ ತಿನ್ನುತ್ತಿದ್ದರೆ ಪ್ರತಿದಿನವೂ ಆ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತಿರುತ್ತದೆ. ಆದುದರಿಂದ ಶರಬತ್ತಿನ ಬದಲಾಗಿ ಸಾಮಾನ್ಯ ನೀರನ್ನೇ ಕುಡಿಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧೧.೨೦೨೨)