ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಪ್ರಾಕ್ಶಿರಃ ಶಯನೇ ವಿದ್ಯಾತ್ ಧನಮ್ ಆಯುಶ್ಚ ದಕ್ಷಿಣೇ |
ಪಶ್ಚಿಮೇ ಪ್ರಬಲಾ ಚಿನ್ತಾ ಹಾನಿಮೃತ್ಯುರಥೋತ್ತರೇ ||
– ಆಚಾರಮಯೂಖ
ಅರ್ಥ : ‘ಪೂರ್ವದಿಕ್ಕಿಗೆ ತಲೆ ಇಟ್ಟು ಮಲಗಿದರೆ ಧನ, ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಆಯುಷ್ಯ ಪ್ರಾಪ್ತಿಯಾಗುತ್ತದೆ. ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಚಿಂತೆ ಹೆಚ್ಚುತ್ತದೆ, ಉತ್ತರದಿಕ್ಕಿಗೆ ತಲೆ ಇಟ್ಟು ಮಲಗಿದರೆ ಹಾನಿಯಾಗುತ್ತದೆ ಅಥವಾ ಮೃತ್ಯುವನ್ನು ಬರಮಾಡಿಕೊಳ್ಳುತ್ತೇವೆ.
ತಾತ್ಪರ್ಯ : ಪಶ್ಚಿಮ ಅಥವಾ ಉತ್ತರ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬಾರದು. (೨.೧೧.೨೦೨೨)
‘ಉತ್ತಮ ಪಚನಕ್ರಿಯೆ’, ಇದು ಕೇವಲ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಮನಸ್ಸಿನ ಆರೋಗ್ಯಕ್ಕೂ ಅಗತ್ಯ !
‘ನನ್ನ ಓರ್ವ ವೈದ್ಯಸ್ನೇಹಿತನು ಹೇಳಿದ ಒಂದು ಪ್ರಸಂಗವನ್ನು ಅವನ ಮಾತುಗಳಲ್ಲಿ ನೀಡುತ್ತಿದ್ದೇನೆ –
‘ಒಮ್ಮೆ ನನಗೆ ತುಂಬಾ ನಿರಾಶೆಯಾಗಿತ್ತು. ದಿನನಿತ್ಯದ ಓಡಾಟದಿಂದ ನಾನು ಎಷ್ಟು ಬೇಸತ್ತಿದ್ದೆ ಎಂದರೆ ನನಗೆ ‘ಮನೆ ಬಿಟ್ಟು ದೂರ ಹೋಗೋಣ’, ಎಂದೆನಿಸುತ್ತಿತ್ತು. ಆ ಸಮಯದಲ್ಲಿ ನಾನು ಸಹಜವಾಗಿ ನನ್ನ ಆಯುರ್ವೇದದ ಗುರುಗಳಾದ ವೈದ್ಯ ಅನಂತ ಧರ್ಮಾಧಿಕಾರಿ ಇವರನ್ನು ಭೇಟಿಯಾಗಿ ನನ್ನ ಮನಸ್ಸಿನ ಸ್ಥಿತಿಯನ್ನು ಹೇಳಿದೆನು. ಅದಕ್ಕೆ ಅವರು, “ಅರೇ ಏನು ಆಗಿಲ್ಲ ! ನಿನ್ನ ಅಗ್ನಿಯು ಮಂದವಾಗಿದೆ. ಒಂದು ಹೊತ್ತು ಉಪವಾಸವನ್ನು ಮಾಡು” ಎಂದು ಹೇಳಿದರು …. ಮತ್ತು ಏನು ಆಶ್ಚರ್ಯ ! ಹಾಗೆ ಮಾಡಿದ ನಂತರ ನನ್ನ ಮನಸ್ಸಿನ ಆ ವಿಚಾರವು ಸಂಪೂರ್ಣ ಹೊರಟು ಹೋಯಿತು ಮತ್ತು ನನಗೆ ಉತ್ಸಾಹವೆನಿಸಿತು.’
ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ ಔಷಧಿಗಳ ಸಮಾಪ್ತಿ ದಿನಾಂಕದ ಬಗ್ಗೆ (ಎಕ್ಸಪೈರಿ ಡೇಟ್ ಬಗ್ಗೆ) ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತದ ಅಧ್ಯಯನ
‘ಆಪತ್ಕಾಲೀನ ಸಹಾಯಕ್ಕಾಗಿ ಅಮೇರಿಕಾದ ಸೈನ್ಯದ ಬಳಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳ ಸಂಗ್ರಹವಿರುತ್ತದೆ. ಸೈನ್ಯವು ಇದರಲ್ಲಿನ ಕೋಟಿಗಟ್ಟಲೆ ಡಾಲರ್ಸ್‌ನ ಔಷಧಿಗಳನ್ನು ಕೇವಲ ಸಮಾಪ್ತಿ ದಿನಾಂಕ (ಎಕ್ಸಪೈರಿ ಡೇಟ್) ಮುಗಿದಿದೆಯೆಂದು ಎಸೆದು ಹೊಸ ಔಷಧಿಗಳನ್ನು ಖರೀದಿಸಬೇಕಾಗುತ್ತದೆ. ಈ ಅಪವ್ಯಯವನ್ನು ತಡೆಗಟ್ಟಲು ಅಮೇರಿಕಾದ ಸೈನ್ಯವು ಅಮೇರಿಕಾದ ಆಹಾರ ಮತ್ತು ಔಷಧೀಯ ಆಡಳಿತಕ್ಕೆ ಔಷಧಿಗಳ ಕಾಲಬಾಹ್ಯತೆಯ ಬಗ್ಗೆ ಅಧ್ಯಯನ ಮಾಡಲು ಹೇಳಿತು.
ಈ ಅಧ್ಯಯನದಿಂದ ‘೧೦೦ ಕ್ಕಿಂತ ಹೆಚ್ಚು ಔಷಧಿಗಳ ಪೈಕಿ ಶೇ. ೯೦ ರಷ್ಟು ಔಷಧಿಗಳು ಅವುಗಳ ಸಮಾಪ್ತಿ ದಿನಾಂಕದ ನಂತರ ೧೫ ವರ್ಷಗಳ ವರೆಗೂ ಉಪಯೋಗಿಸಲು ಉತ್ತಮವಾಗಿದ್ದವು’, ಎಂದು ಕಂಡು ಬಂದಿತು. ‘ಗುಗಲ್’ ಜಾಲತಾಣದಲ್ಲಿ ‘federal shelf life extension program’ ಎಂದು ಶೋಧಿಸಿದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದು. (೨೩.೭.೨೦೨೨)
ಇಷ್ಟವಾದ ಯಾವುದೇ ಪದಾರ್ಥಗಳನ್ನು ಅವೇಳೆಯಲ್ಲಿ ಸೇವಿಸದೇ ಊಟದ ಸಮಯದಲ್ಲಿಯೇ ಸೇವಿಸಿ !
‘ಆಯುರ್ವೇದಕ್ಕೆ ಸ್ವಾದ ಮತ್ತು ರುಚಿಕರ ಪದಾರ್ಥಗಳಿಗೆ ಅಪಥ್ಯವಿದೆಯೇ ? ಇಲ್ಲವೇ ಇಲ್ಲ’. ಬದಲಾಗಿ ರುಚಿಯಿಂದ ಊಟ ಮಾಡಿದರೆ ಸಮಾಧಾನ ಸಿಗುತ್ತದೆ. ಆದುದರಿಂದ ಪದಾರ್ಥಗಳ ರುಚಿಯಲ್ಲಿ ವೈವಿಧ್ಯ ಇರಲೇಬೇಕು; ಆದರೆ ಯಾವುದಾದರೊಂದು ಪದಾರ್ಥವು ಎಷ್ಟೇ ಇಷ್ಟವಾಗುತ್ತಿದ್ದರೂ, ಅದು ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಸೇವಿಸುವುದು ತುಂಬ ಮಹತ್ವದ್ದಾಗಿದೆ. ಹೀಗೆ ಮಾಡದಿದ್ದರೆ, ಇಂದಲ್ಲ ನಾಳೆ ಅದರ ತೊಂದರೆಯಾಗುವುದು.
‘ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳನ್ನು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು. ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೯.೨೦೨೨)
ಸಾಧಕರೇ, ತಮ್ಮ ದೇಹದ ಬಗ್ಗೆ ನಿರ್ಲಕ್ಷ್ಯ ತೋರಬೇಡಿ !‘ಮನುಷ್ಯಜನ್ಮವು ತುಂಬ ಪುಣ್ಯದಿಂದ ಸಿಗುತ್ತದೆ. ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಂಡಾಗಲೇ ಈ ಮನುಷ್ಯಜನ್ಮವು ಸಾರ್ಥಕವಾಗುತ್ತದೆ. ದೇಹವು ಆರೋಗ್ಯಕರವಾಗಿದ್ದರೆ ಮಾತ್ರ ಸಾಧನೆಯನ್ನು ಮಾಡಲು ಸುಲಭವಾಗುತ್ತದೆ. ‘ಶರೀರವು ಆರೋಗ್ಯವಾಗಿಡಲು ಏನು ಮಾಡಬೇಕು ?’, ಎಂಬುದನ್ನು ಪ್ರತಿದಿನ ‘ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ’ ಇದು ‘ಸನಾತನ ಪ್ರಭಾತ’ದಲ್ಲಿನ ಲೇಖನಗಳಿಂದ ಹೇಳಲಾಗುತ್ತಿದ್ದರೂ, ಸಾಧಕರಲ್ಲಿ ಆರೋಗ್ಯದ ವಿಷಯದಲ್ಲಿ ಗಾಂಭೀರ್ಯವು ಕಂಡು ಬರುತ್ತಿಲ್ಲ. ಅವೇಳೆಯಲ್ಲಿ ಮಲಗುವುದು, ಅವೇಳೆ ಏಳುವುದು, ಅವೇಳೆಯಲ್ಲಿ ಊಟವನ್ನು ಮಾಡುವುದು ಇದು ಅತ್ಯಂತ ಅಯೋಗ್ಯ ರೂಢಿಯಾಗಿವೆ. ಇವುಗಳನ್ನು ಬಿಡಲೇಬೇಕು. ‘ನನಗೆ ಇದು ವರೆಗೆ ಏನೂ ಆಗಲಿಲ್ಲ’, ಎಂದು ಹೇಳಿ ಅಯೋಗ್ಯ ಅಭ್ಯಾಸಗಳನ್ನು ಹಾಗೆಯೇ ಮುಂದುವರೆಸುವರಿದ್ದರೆ, ನಿಲ್ಲಿ ! ವಿಚಾರ ಮಾಡಿ ! ದೂರದ ಪ್ರವಾಸಕ್ಕೆ ಹೋಗುವಾಗ ನಾವು ‘ನಮ್ಮ ವಾಹನವು ಉತ್ತಮ ಸ್ಥಿತಿಯಲ್ಲಿದೆಯಲ್ಲ’, ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ; ಏಕೆಂದರೆ ಅದು ಉತ್ತಮ ಸ್ಥಿತಿಯಲ್ಲಿರದಿದ್ದರೆ, ದಾರಿಯಲ್ಲಿ ಅಡಚಣೆಗಳು ಬರುತ್ತವೆ. ಈಶ್ವರಪ್ರಾಪ್ತಿಯು ನಮ್ಮ ಧ್ಯೇಯವಾಗಿದೆ. ಇದು ದೂರದ ಪ್ರವಾಸವಿದೆ. ಆದುದರಿಂದ ಅದಕ್ಕಾಗಿ ಅತ್ಯಾವಶ್ಯಕ ದೇಹದ ಕಾಳಜಿ ವಹಿಸಿ ! – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೯.೨೦೨೨) |