ತಡರಾತ್ರಿಯ ಜಾಗರಣೆಯಿಂದ ತೊಂದರೆಯಾಗಬಾರದೆಂದು, ಇದನ್ನು ಮಾಡಿರಿ !

ವೈದ್ಯ ಮೇಘರಾಜ ಮಾಧವ ಪರಾಡಕರ

‘ಕೆಲವೊಮ್ಮೆ ಸೇವೆಯ ನಿಮಿತ್ತ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಖಾರಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ಪಿತ್ತದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಶರೀರ ತನ್ನನ್ನು ಒಳ್ಳೆಯ ಸ್ಥಿತಿಯಲ್ಲಿಡಲು ತುಂಬಾ ಪ್ರಯತ್ನಿಸುತ್ತಿರುತ್ತದೆ. ಆದುದರಿಂದ ಪಿತ್ತ ತುಂಬಾ ಹೆಚ್ಚಾದರೂ ಒಂದೆರಡು ದಿನ ಅದರ ದುಷ್ಪರಿಣಾಮ ಕಂಡುಬರುವುದಿಲ್ಲ; ಆದರೆ ಮೇಲಿಂದ ಮೇಲೆ ಹೀಗೆ ಮಾಡಿದರೆ, ಆರೋಗ್ಯದ ಮೇಲೆ ಅದರ ವಿಪರೀತ ಪರಿಣಾಮವಾಗುತ್ತದೆ. ಜಾಗರಣೆಯನ್ನು ಮಾಡುವಾಗ ತೊಂದರೆಯಾಗಬಾರದೆಂದು, ತಮ್ಮ ಹತ್ತಿರ ತುಪ್ಪವನ್ನು ಇಟ್ಟುಕೊಳ್ಳಬೇಕು ಮತ್ತು ರಾತ್ರಿ ಅವೇಳೆಯಲ್ಲಿ ಹಸಿವಾದಾಗ ಹಸಿವಿನ ಪ್ರಮಾಣಕ್ಕನುಸಾರ ೧ ರಿಂದ ೪ ಚಮಚದಷ್ಟು ತುಪ್ಪವನ್ನು ಜಗಿದು ತಿನ್ನಬೇಕು. ಕೇವಲ ತುಪ್ಪವನ್ನು ತಿನ್ನಲು ಕಠಿಣವೆನಿಸಿದರೆ, ತುಪ್ಪದಲ್ಲಿ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬಹುದು. ತುಪ್ಪ ಪಚನವಾಗಲು ಅದರ ಮೇಲೆ ಅರ್ಧ ಬಟ್ಟಲು ಬಿಸಿ ನೀರು ಕುಡಿಯಬೇಕು. (ತುಪ್ಪವನ್ನು ಅಳತೆ ಮಾಡಲು ಚಹಾದ ಚಮಚವನ್ನು ಬಳಿಸಿರಿ. ೧ ರಿಂದ ೪ ಚಮಚ ಇದು ತೆಳು ತುಪ್ಪದ ಪ್ರಮಾಣವಾಗಿದೆ. ಆದುದರಿಂದ ತುಪ್ಪ ಗಟ್ಟಿಯಾಗಿದ್ದರೆ ಅದರ ಅಂದಾಜದಿಂದ ತೆಗೆದುಕೊಳ್ಳಬೇಕು.) ಹೆಚ್ಚಾಗಿರುವ ಪಿತ್ತವನ್ನು ಶಾಂತ ಮಾಡಲು ಇದು ಎಲ್ಲಕ್ಕಿಂತ ಒಳ್ಳೆಯ ಉಪಾಯವಾಗಿದೆ; ಆದರೆ ‘ಅನಗತ್ಯ ಜಾಗರಣೆಯನ್ನು ತಡೆಗಟ್ಟುವುದು’, ಮೂಲ ಉಪಾಯವಾಗಿದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೯.೨೦೨೨)