ರಾತ್ರಿಯ ಸಮಯದಲ್ಲಿ ಅನಾವಶ್ಯಕ ಜಾಗರಣೆಯನ್ನು ಮಾಡಬಾರದು !

ಶರೀರದ ಕಾರ್ಯ ಸರಿಯಾಗಿ ನಡೆಯಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆವಶ್ಯಕವಾಗಿದೆಯೋ, ಹಾಗೆಯೇ ಯೋಗ್ಯ ಪ್ರಮಾಣದಲ್ಲಿ ನಿದ್ದೆಯನ್ನು ಮಾಡುವುದೂ ಆವಶ್ಯಕವಾಗಿದೆ. ರಾತ್ರಿ ತುಂಬಾ ಸಮಯ ಜಾಗರಣೆ ಮಾಡಿದರೆ ಪಿತ್ತ ಹೆಚ್ಚಾಗುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ, ಪಚನಕ್ಕೆ ಸಂಬಂದಿಸಿದ ರೋಗಗಳು ಆರಂಭವಾಗುತ್ತವೆ. ಶರೀರ ದುರ್ಬಲ ಮತ್ತು ಕೃಶವಾಗುತ್ತದೆ. ಆವಶ್ಯಕವಿದ್ದಷ್ಟು ನಿದ್ದೆಯನ್ನು ಮಾಡದಿದ್ದರೆ, ಈ ರೋಗಗಳಿಗೆ ಎಷ್ಟು ಔಷಧಿಗಳನ್ನು ಮಾಡಿದರೂ ರಾತ್ರಿಯ ಜಾಗರಣೆ ಈ ಮೂಲ ಕಾರಣ ಎಲ್ಲಿಯವರೆಗೆ ದೂರವಾಗುವುದಿಲ್ಲವೋ, ಅಲ್ಲಿಯವರೆಗೆ ಔಷಧಗಳ ಉಪಯೋಗ ಆಗುವುದಿಲ್ಲ. ಆದುದರಿಂದ ರಾತ್ರಿ ಹೆಚ್ಚೆಂದರೆ ೧೧ ರಿಂದ ೧೧.೩೦ ರೊಳಗೆ ಮಲಗಬೇಕು. ತಡರಾತ್ರಿ ಜಾಗರಣೆ ಮಾಡಿ ಮಾಡುವ ಕೆಲಸಗಳನ್ನ ಬೆಳಗ್ಗೆ ೪ ಅಥವಾ ೫ ಗಂಟೆಗೆ ಎದ್ದು ಮಾಡಬೇಕು. ಯಾವಾಗಲಾದರೊಮ್ಮೆ ಜಾಗರಣೆಯಾದರೆ ನಡೆಯುತ್ತದೆ ಆದರೆ ಪ್ರತಿದಿನ ತಡರಾತ್ರಿಯ ಜಾಗರಣೆಯನ್ನು ತಡೆಯಬೇಕು.

ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೩೧.೭.೨೦೨೨)