ಸನಾತನ ಯಷ್ಟಿಮಧು (ಜೇಷ್ಠಮಧ) ಚೂರ್ಣದ ಔಷಧಿ ಉಪಯೋಗ

೧. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಧ್ವನಿ ಕೂಡುವುದು, ಗಂಟಲಿನಿಂದ ಕಫ ಹೊರಗೆ ಬರದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧ ಚೂರ್ಣವನ್ನು ದಿನದಲ್ಲಿ ೩-೪ ಬಾರಿ ಜಗಿದು ತಿನ್ನಬೇಕು. (೫ ದಿನ)
೨. ಮಲಬದ್ಧತೆ : ಎರಡೂ ಊಟಗಳ ಮೊದಲು ೧ ಚಮಚ ಜೇಷ್ಠಮಧ ಚೂರ್ಣ ಮತ್ತು ೧ ಚಿಟಿಕೆ ಉಪ್ಪನ್ನು ಅರ್ಧ ಬಟ್ಟಲು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು. (೧೫ ದಿನ)
೩. ಉಷ್ಣತೆಯ ರೋಗಗಳು (ಉಷ್ಣ ಪದಾರ್ಥಗಳನ್ನು ತಿಂದರೆ ತೊಂದರೆಯಾಗುವುದು, ಬಾಯಿ ಹುಣ್ಣು, ಮೈ ಉರಿಯುವುದು, ಮೂತ್ರಮಾರ್ಗ ಉರಿಯುವುದು, ಮೈ ಮೇಲೆ ಬೊಕ್ಕೆಗಳೇಳುವುದು, ತಲೆ ಸುತ್ತುವುದು ಇತ್ಯಾದಿ) : ದಿನದಲ್ಲಿ ೨-೩ ಬಾರಿ ೧ ಚಮಚ ಜೇಷ್ಠಮಧ ಚೂರ್ಣ ೧ ಚಮಚ ತುಪ್ಪದಲ್ಲಿ ಸೇರಿಸಿ ತಿನ್ನಬೇಕು. (೧೫ ದಿನ)
೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು.
೨. ಇಲ್ಲಿ ಪ್ರಾಥಮಿಕ ಉಪಚಾರವನ್ನು ಕೊಟ್ಟಿದೆ. ೭ ದಿನಗಳಲ್ಲಿ ಕಡಿಮೆಯಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.
೩. ಸನಾತನ ಸಂಸ್ಥೆಯ ಯಷ್ಟಿಮಧ (ಜೇಷ್ಠ ಮಧ) ಚೂರ್ಣ ಲಭ್ಯವಿದೆ. ಇದರ ಇತರ ರೋಗಗಳ ಮೇಲಿನ ಉಪಯೋಗವನ್ನು ಆ ಡಬ್ಬಿಯ ಜೊತೆಗಿರುವ ಚೀಟಿಯಲ್ಲಿ ಕೊಡಲಾಗಿದೆ.
೪. ಇಲ್ಲಿ ನೀಡಿದ ಮಾಹಿತಿ ಮತ್ತು ಚೀಟಿಯಲ್ಲಿ ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಇರಬಹುದು. ಎರಡರಲ್ಲಿನ ಯಾವುದೇ ಪದ್ದತಿಯಿಂದ ಔಷಧಿಯನ್ನು ಉಪಯೋಗಿಸಬಹುದು.
– ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೮.೨೦೨೨)
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?