‘ಚಾಕಲೇಟ್, ಬಿಸ್ಕತ್ತು, ಚಿಪ್ಸ್, ಖಾರಾಸೇವು (ಫರಸಾಣ), ಸೇವು, ಚೂಡಾ ಇತ್ಯಾದಿ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ, ಉತ್ತತ್ತಿ, ಗೋಡಂಬಿ, ಅಂಜೂರ, ಅಕ್ರೋಡ ಇಂತಹ ಒಣ ಹಣ್ಣುಗಳನ್ನು ತಿನ್ನಬೇಕು. ಒಣಹಣ್ಣುಗಳು ದುಬಾರಿ ಎನಿಸಿದರೆ ಬೆಲ್ಲ-ಶೇಂಗಾ, ಎಳ್ಳು-ಬೆಲ್ಲ, ಹುರಿದ ಪುಟಾಣಿ, ಅಂಟಿನ ಅಥವಾ ಮೆಂತೆಹಿಟ್ಟಿನ ಉಂಡೆ ಇವುಗಳಂತಹ ಪೌಷ್ಠಿಕ ಆಹಾರಗಳನ್ನು ಹಸಿವಾದಾಗ ತಿನ್ನಬೇಕು. ಪೌಷ್ಠಿಕವಲ್ಲದ, ಎಣ್ಣೆಯುಕ್ತ, ‘ಪ್ರಿಸರ್ವೇಟಿವ್ (ಆಹಾರ ಪದಾರ್ಥಗಳು ಹಾಳಾಗಬಾರದೆಂದು ಹಾಕಿದ ರಸಾಯನಿಕ ಪದಾರ್ಥ)’ ಹಾಕಿದ ಮತ್ತು ಆರೋಗ್ಯವನ್ನು ಹಾಳು ಮಾಡುವ ಪದಾರ್ಥಗಳನ್ನು ತಿನ್ನುವುದಕ್ಕಿಂತ ಪೌಷ್ಠಿಕ, ಸಾತ್ತ್ವಿಕ ಮತ್ತು ನೈಸರ್ಗಿಕ ಪದಾರ್ಥಗಳನ್ನು ತಿನ್ನಬೇಕು. ಚಾಕಲೇಟ್ ಇತ್ಯಾದಿ ಪದಾರ್ಥಗಳನ್ನು ಕೆಲವೊಮ್ಮೆ ಮೋಜಿಗಾಗಿ ತಿನ್ನಬಹುದು; ಆದರೆ ಅವುಗಳನ್ನು ಸತತವಾಗಿ ತಿನ್ನುವುದನ್ನು ತಡೆಯಬೇಕು.’ – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೮.೨೦೨೨)