ಬದನೆಕಾಯಿ ವಾತಜನಕವೇ ?

‘ಆಹಾರಪದಾರ್ಥಗಳ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಅವುಗಳಲ್ಲಿನ ಒಂದು ತಪ್ಪುಕಲ್ಪನೆ ಎಂದರೆ ‘ಬದನೆಕಾಯಿ ವಾತಜನಕವಾಗಿದೆ ಎಂದು ತಿಳಿಯುವುದು. ಬದನೆಕಾಯಿ ವಾತಜನಕವಂತೂ ಅಲ್ಲವೇ ಅಲ್ಲ. ಬದಲಾಗಿ ಅದು ವಾತ ಮತ್ತು ಕಫದ ಮೇಲೆ ಒಂದು ಒಳ್ಳೆಯ ಔಷಧಿಯಾಗಿದೆ. ಎದೆಯಲ್ಲಿ ಕಫವಾಗಿದ್ದರೆ ಬದನೆಕಾಯಿಯ ೫-೬ ಹೋಳುಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ದಿನದಲ್ಲಿ ೨-೩ ಬಾರಿ ೪-೫ ದಿನಗಳ ವರೆಗೆ ಕುಡಿದರೆ ಕಫ ಕಡಿಮೆಯಾಗುತ್ತದೆ.’ ಇಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲಾಗಿದೆ. ೫ ದಿನಗಳಲ್ಲಿ ಗುಣಮುಖವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೦.೨೦೨೨)