‘ಕೊರೋನಾ’ದ ಹೆಚ್ಚುತ್ತಿರುವ ಸೋಂಕಿನಿಂದ ಮೃತ್ಯುಭಯವು ನಿರ್ಮಾಣವಾದರೆ ಆ ಕುರಿತು ಶಾರೀರಿಕ, ಮಾನಸಿಕ, ಮತ್ತು ನಾಮಜಪಾದಿ ಉಪಾಯಗಳನ್ನು ಮಾಡಿ ಅದನ್ನು ದೂರ ಮಾಡಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ವಿನಂತಿ

ಕೊರೋನಾರೂಪಿ ಆಪತ್ಕಾಲಕ್ಕಾಗಿ ಮಾರ್ಗದರ್ಶಕ ಅಂಕಣ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಪ್ರಸ್ತುತ ಭಾರತ ಸಹಿತ ಇತರ ಕೆಲವು ದೇಶಗಳಲ್ಲಿ ‘ಕೊರೋನಾ’ ಈ ಸಾಂಕ್ರಾಮಿಕ ವಿಷಾಣುಗಳ ಸೋಂಕಾಗಿದೆ. ಇದರಿಂದ ಎಲ್ಲೆಡೆಯ ಜನಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣವು ಸೃಷ್ಟಿಯಾಗಿದೆ. ಸಮಾಜದಲ್ಲಿ ಅನೇಕರ ಮನಸ್ಸಿನಲ್ಲಿ ಮೃತ್ಯುಭಯವು ಸೃಷ್ಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಚಿಕ್ಕಪುಟ್ಟ ಕಾರಣಗಳಿಂದ ಮನಸ್ಸು ವಿಚಲಿತವಾಗುವುದು, ಕಾಳಜಿ ಎನಿಸುವುದು, ಹಾಗೆಯೇ ಭಯವೆನಿಸಿ ಅಸ್ವಸ್ಥವಾಗುವುದು’, ಇಂತಹ ಮನಸ್ಸಿನ ಸ್ಥಿತಿಯಾಗುತ್ತದೆ. ಶಾರೀರಿಕ, ಮಾನಸಿಕ ಮತ್ತು ನಾಮಜಪಾದಿ ಉಪಾಯಗಳನ್ನು ಮಾಡಿ ಈ ಪರಿಸ್ಥಿತಿಯನ್ನು ಎದುರಿಸಿ ಮನಸ್ಸನ್ನು ಸ್ಥಿರವಾಗಿಡುವುದು ಸಾಧ್ಯವಿದೆ.

೧. ಕೊರೋನಾದ ಸೋಂಕು ತಗಲಬಾರದೆಂದು ಶಾರೀರಿಕ ಸ್ತರದಲ್ಲಿ ಮಾಡಬೇಕಾದ ಉಪಾಯಗಳು

೧ ಅ. ಕೊರೋನಾ ವಿಷಾಣುವಿನ ಸೋಂಕು ತಗಲಬಾರದೆಂದು, ಸರಕಾರವು ಹೇಳಿದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು

೧ ಆ. ಕೊರೋನಾ ವಿಷಾಣುವಿನ ಸೋಂಕು ತಗುಲಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆಯನ್ನು ಪಡೆದು ಔಷಧೋಪಚಾರವನ್ನು ಆರಂಭಿಸಬೇಕು

೧ ಇ. ಪ್ರತಿಕಾರಶಕ್ತಿಯನ್ನು ಹೆಚ್ಚಿಸಲು ವೈದ್ಯರು ಸೂಚಿಸಿದ ಹೋಮಿಯೋಪಥಿ ಮತ್ತು ಆಯುರ್ವೇದಿಕ ಔಷಧಿಗಳನ್ನು, ಹಾಗೆಯೇ ಕಶಾಯ ಸೇವಿಸಬೇಕು

೨. ಮನೋಬಲವನ್ನು ಹೆಚ್ಚಿಸಲು ಮಾನಸಿಕ ಸ್ತರದಲ್ಲಿ ಮಾಡಬೇಕಾದ ಉಪಾಯಗಳು

ಕೊರೋನಾದಿಂದ ಉದ್ಭವಿಸಿದ ಸಾಮಾಜಿಕ ಪರಿಸ್ಥಿತಿಯಿಂದ ಮೃತ್ಯುಭಯವು ನಿರ್ಮಾಣವಾದರೆ ಆಯಾ ಪ್ರಸಂಗಗಳಲ್ಲಿ ಯೋಗ್ಯವಾದ ಸ್ವಯಂಸೂಚನೆಗಳನ್ನು ನೀಡಿದರೆ ಪ್ರಾಪ್ತ ಪರಿಸ್ಥಿತಿಯಿಂದ ಹೊರಗೆ ಬರಲು ಮತ್ತು ಮನಸ್ಸಿನ ಸ್ಥಿರತೆಯನ್ನು ಉಳಿಸಲು ಸಹಾಯವಾಗುತ್ತದೆ. ಈ ದೃಷ್ಟಿಯಿಂದ ಮನೋಬಲವು ಹೆಚ್ಚಾಗಿ ಸ್ಥಿರವಾಗಿರಲು ‘ಅಂತರ್ಮನಸ್ಸಿಗೆ ಯಾವ ಸ್ವಯಂಸೂಚನೆಗಳನ್ನು ನೀಡಬೇಕು ?’, ಎಂದು ಮುಂದೆ ಕೊಡಲಾಗಿದೆ.

೨ ಅ. ಅಯೋಗ್ಯ ವಿಚಾರ : ‘ನನಗೆ ಕೊರೋನಾ ವಿಷಾಣುವಿನ ಸೋಂಕಾಗುವುದು’, ಈ ವಿಚಾರದಿಂದ ಭಯವೆನಿಸುವುದು

೨ ಅ ೧. ಸ್ವಯಂಸೂಚನೆ : ಯಾವ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ವಿಷಾಣುವಿನ ಸೋಂಕಾಗುವುದು’, ಎಂಬ ವಿಚಾರದಿಂದ ಭಯವುಂಟಾಗುವುದೋ, ಆಗ ‘ನಾನು ಅಗತ್ಯವಿರುವ ಎಲ್ಲ ಕಾಳಜಿಯನ್ನು ತೆಗೆದುಕೊಳ್ಳುತ್ತಿರುವೆ’, ಎಂದು ನನಗೆ ನೆನಪು ಮಾಡಿ ಕೊಡುವೆನು ಮತ್ತು ದಿನವಿಡೀ ಹೆಚ್ಚೆಚ್ಚು ಸಮಯ ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಿ ನಾನು ಸತ್‌ನಲ್ಲಿರುವೆನು.

೨ ಆ. ಅಯೋಗ್ಯ ವಿಚಾರ : ‘ನನಗೆ ಕೊರೋನಾ ವಿಷಾಣುವಿನ ಸೋಂಕಾದರೆ ನನ್ನ ಮೃತ್ಯುವಾಗುತ್ತದೆ’, ಎಂದು ಭಯವಾಗುವುದು

೨ ಆ ೧. ಸ್ವಯಂಸೂಚನೆ ಕ್ರ. ೧ : ಯಾವ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ವಿಷಾಣುವಿನ ಸೋಂಕಾದರೆ ನನ್ನ ಮೃತ್ಯುವಾಗುತ್ತದೆ’, ಎಂಬ ವಿಚಾರ ಬರುವುದೋ, ಆಗ ‘ಈ ವಿಷಾಣುಗಳ ಸೋಂಕು ತಾಗಿದ ಶೇ. ೮೦ ರಷ್ಟು ರೋಗಿಗಳಲ್ಲಿ ಕಾಯಿಲೆಯ ಸ್ವರೂಪವು ಸೌಮ್ಯವಾಗಿರುತ್ತದೆ’, ಎಂದು ನನಗೆ ಅರಿವಾಗಿ ನಾನು ಸಕಾರಾತ್ಮಕವಾಗಿರುವೆನು ಮತ್ತು ಕುಟುಂಬದವರು, ಹಿತಚಿಂತಕರು ಮತ್ತು ಸರಕಾರಿ ವ್ಯವಸ್ಥೆಯು ನೀಡಿದ ಸೂಚನೆಗಳನ್ನು ಪಾಲಿಸಿ ಆರೋಗ್ಯದ ಬಗ್ಗೆ ಯೋಗ್ಯ ಕಾಳಜಿಯನ್ನು ತೆಗೆದುಕೊಳ್ಳುವೆನು.

೨ ಆ ೧. ಸ್ವಯಂಸೂಚನೆ ಕ್ರ. ೨ : ಯಾವಾಗ ನನ್ನ ಮನಸ್ಸಿನಲ್ಲಿ ‘ನನಗೆ ಕೊರೋನಾ ವಿಷಾಣುಗಳ ಸೋಂಕು ತಗುಲಿದರೆ ನನ್ನ ಮೃತ್ಯುವಾಗುವುದು’, ಎಂಬ ವಿಚಾರ ಬರುವುದೋ ಆಗ ‘ಪ್ರತಿಯೊಬ್ಬರ ಮೃತ್ಯುವಿನ ಸಮಯವನ್ನು ಭಗವಂತನು ನಿಶ್ಚಯಿಸಿರುತ್ತಾನೆ. ಆದುದರಿಂದ ಕೊರೋನಾದಿಂದಲೇ ಅಲ್ಲ, ಆದರೆ ಮನುಷ್ಯನಿಗೆ ಯಾವುದೇ ಕಾರಣದಿಂದ ಯಾವಾಗ ಬೇಕಾದರೂ ಮೃತ್ಯುವಾಗಬಹುದು’, ಎಂದು ನನಗೆ ಅರಿವಾಗಿ ನಾನು ಮನುಷ್ಯಜನ್ಮದ ಸಾರ್ಥಕವಾಗಲೆಂದು ಸಾಧನೆಯ ಕಡೆಗೆ ಗಮನ ಕೊಡುವೆನು.
(ಟಿಪ್ಪಣಿ : ಮೇಲಿನ ಎರಡು ಸೂಚನೆಗಳ ಪೈಕಿ ತಮ್ಮ ಪ್ರಕೃತಿಗೆ ಅನುಕೂಲವಾಗುವಂತಹ ಒಂದು ಸೂಚನೆಯನ್ನು ಆರಿಸಿಕೊಂಡು ಅದನ್ನು ತೆಗೆದುಕೊಳ್ಳಬೇಕು.)

೨ ಇ. ಅಯೋಗ್ಯ ವಿಚಾರ : ‘ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆವಶ್ಯಕವಾಗಿರುವ ಮನೋಬಲವು ನನ್ನಲಿಲ್ಲ’, ಎಂದೆನಿಸಿ ಒತ್ತಡವಾಗುವುದು

೨ ಇ ೧. ಸ್ವಯಂಸೂಚನೆ : ಯಾವ ಸಮಯದಲ್ಲಿ ‘ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆವಶ್ಯಕವಾಗಿರುವ ಮನೋಬಲವು ನನ್ನಲಿಲ್ಲ’, ಎಂದೆನಿಸಿ ನನಗೆ ಒತ್ತಡವಾಗುವುದೋ, ಆಗ ‘ದಯಾಮಯ ಭಗವಂತನು ಒಳ್ಳೆಯ ಮತ್ತು ಕೆಟ್ಟ ಇಂತಹ ಎರಡೂ ಪರಿಸ್ಥಿತಿಗಳಲ್ಲಿ ನನ್ನೊಂದಿಗಿದ್ದಾನೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ನಾನೇನು ಮಾಡುವುದು ಆವಶ್ಯಕವಾಗಿದೆ ?’, ಎಂದು ಸೂಚಿಸಿ ಅವನೇ ನನ್ನ ಮನೋಬಲವನ್ನು ಹೆಚ್ಚಿಸಲಿದ್ದಾನೆ’, ಎಂದು ನನಗೆ ಅರಿವಾಗಿ ನಾನು ಭಗವಂತನ ಮೇಲೆ ದೃಢ ಶ್ರದ್ಧೆಯನ್ನಿಡುವೆನು.

೨ ಈ. ಅಯೋಗ್ಯ ವಿಚಾರ : ಔಷಧೋಪಚಾರವನ್ನು ಮಾಡಿಯೂ ಮಗಳ ಶೀತ/ಜ್ವರ ಕಡಿಮೆಯಾಗದ ಕಾರಣ ಅವಳ ಬಗ್ಗೆ ಕಾಳಜಿ ಅನಿಸುವುದು

೨ ಈ ೧. ಸ್ವಯಂಸೂಚನೆ : ಯಾವಾಗ ಮಗಳಿಗೆ ಬಹಳ ದಿನಗಳಿಂದ ಶೀತ/ಜ್ವರವಿದ್ದಾಗ, ಆ ಸಮಯದಲ್ಲಿ ‘ಪ್ರತಿಯೊಂದು ಬಾರಿ ಶೀತ/ಜ್ವರ ಇದು ಕೊರೋನಾದ ವಿಷಾಣುಗಳ ಸೋಂಕಿನಿಂದಾಗಿ ಆಗಿರುವುದಿಲ್ಲ’, ಎಂದು ನನಗೆ ಅರಿವಾಗುವುದು ಮತ್ತು ದೇವರ ಮೇಲೆ ಶ್ರದ್ಧೆಯನ್ನಿಟ್ಟು ನಾನು ಆಧುನಿಕ ವೈದ್ಯರು ಹೇಳಿದಂತೆ ಅವಳಿಗೆ ಔಷಧಿಯನ್ನು ನೀಡುವೆನು ಮತ್ತು ಅವಳ ಸ್ಥಿತಿಯ ಬಗ್ಗೆ ಮೇಲಿಂದ ಮೇಲೆ ಅವರಿಗೆ ತಿಳಿಸುವೆನು.

೩. ಸ್ವಯಂಸೂಚನೆಯನ್ನು ಎಷ್ಟು ದಿನ ಮತ್ತು ಎಷ್ಟು ಬಾರಿ ಕೊಡಬೇಕು ?

ಮೇಲಿನ ಪೈಕಿ ಯಾವ ಅಯೋಗ್ಯ ವಿಚಾರಗಳ ಒತ್ತಡ ಅಥವಾ ಕಾಳಜಿ ಇರುವುದೋ, ಆ ವಿಚಾರಗಳಿಗೆ ೧೫ ದಿನ ಅಥವಾ ವಿಚಾರ ಕಡಿಮೆಯಾಗುವವರೆಗೆ ಸಂಬಂಧಿತ ಸ್ವಯಂಸೂಚನೆಯನ್ನು ನೀಡಬೇಕು. ಈ ಸ್ವಯಂಸೂಚನೆಗಳನ್ನು ದಿನವಿಡಿ ೫ ಅಭ್ಯಾಸಸತ್ರಗಳನ್ನು ಮಾಡಬೇಕು. ಒಂದು ಅಭ್ಯಾಸಸತ್ರದ ಸಮಯದಲ್ಲಿ ೫ ಬಾರಿ ಒಂದು ಸ್ವಯಂಸೂಚನೆಯನ್ನು ಅಂತರ್ಮನಸ್ಸಿಗೆ ನೀಡಬೇಕು. ಮೇಲಿನಂತೆ ಯಾವ ವಿಚಾರಗಳಿಂದಾಗಿ ಒತ್ತಡ, ಸಂಘರ್ಷ, ಕಾಳಜಿ ಮುಂತಾದವುಗಳು ನಿರ್ಮಾಣವಾಗುತ್ತಿದ್ದರೆ, ಅದಕ್ಕಾಗಿಯೂ ಸ್ವಯಂಸೂಚನೆಯನ್ನು ನೀಡಬಹುದು.

೪. ಮನಸ್ಸು ಏಕಾಗ್ರ ಮಾಡಿ ಸ್ವಯಂಸೂಚನೆಯ ಸತ್ರಗಳನ್ನು ಮಾಡಿರಿ ಮತ್ತು ಕಡಿಮೆ ಸಮಯದಲ್ಲಿ ಮನಸ್ಸಿನ ಅಯೋಗ್ಯ ವಿಚಾರಗಳು ಕಡಿಮೆಯಾಗುವುದನ್ನು ಅನುಭವಿಸಿ !

ಮನಸ್ಸನ್ನು ಏಕಾಗ್ರಗೊಳಿಸಿ ಸ್ವಯಂಸೂಚನೆಗಳ ಸತ್ರಗಳನ್ನು ಮಾಡಿದರೆ ಸೂಚನೆಗಳು ಅಂತರ್ಮನಸ್ಸಿನಲ್ಲಿ ಸಂಸ್ಕಾರವಾಗಿ ‘ಮನಸ್ಸಿನ ಒತ್ತಡ ಅಥವಾ ಕಾಳಜಿ ಇವುಗಳ ವಿಚಾರಗಳು ಅಲ್ಪಾವಧಿಯಲ್ಲಿಯೇ ಕಡಿಮೆಯಾಗುತ್ತವೆ’, ಎಂದು ಅನೇಕರು ಅನುಭವಿಸಿದ್ದಾರೆ. ಆದುದರಿಂದ ಮನಸ್ಸನ್ನು ಏಕಾಗ್ರಗೊಳಿಸಿ ಸ್ವಯಂಸೂಚನೆಯ ಸತ್ರಗಳನ್ನು ಮಾಡಬೇಕು. ಮನಸ್ಸಿನಲ್ಲಿ ಬರುವ ನಿರರ್ಥಕ ವಿಚಾರಗಳಿಂದ ಸತ್ರವು ಏಕಾಗ್ರತೆಯಿಂದ ಆಗದಿದ್ದರೆ ಸ್ವಲ್ಪ ದೊಡ್ಡ ಧ್ವನಿಯಲ್ಲಿ (ಗುಣುಗುಡುತ್ತಾ) ಸ್ವಯಂಸೂಚನೆಯ ಸತ್ರವನ್ನು ಮಾಡಬಹುದು ಅಥವಾ ಕಾಗದದ ಮೇಲೆ ಬರೆದ ಸ್ವಯಂಸೂಚನೆಯನ್ನು ಓದಬಹುದು. ಇದರಿಂದ ವಿಚಾರಗಳ ಕಡೆಗೆ ಗಮನ ಹೋಗದೇ ಅವು ತಮ್ಮಿಂದ ತಾವೇ ಕಡಿಮೆಂಯಾಗುವವು ಮತ್ತು ಸ್ವಯಂಸೂಚನೆಗಳ ಸತ್ರವು ಪರಿಣಾಮಕಾರಿಯಾಗಿ ಆಗುತ್ತದೆ. ದೊಡ್ಡ ಸ್ವರದಲ್ಲಿ ಸತ್ರವನ್ನು ಮಾಡುವಾಗ ‘ಇತರರಿಗೆ ತೊಂದರೆಯಾಗಬಾರದು ಎಂಬ ರೀತಿಯಲ್ಲಿ ಕಾಳಜಿ ವಹಿಸಿರಿ.

(ಮನಸ್ಸಿನ ಸಮಸ್ಯೆಯನ್ನು ದೂರ ಮಾಡಲು ‘ಮನಸ್ಸಿಗೆ ಯೋಗ್ಯವಾದ ಸ್ವಯಂಸೂಚನೆಯನ್ನು ನೀಡುವುದು’, ಇದು ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯ ಒಂದು ಭಾಗವಾಗಿದೆ. ಸಂಪೂರ್ಣ ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಸನಾತನದ ಗ್ರಂಥಮಾಲಿಕೆ ‘ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ (೭ ಖಂಡ)’ ಈ ಗ್ರಂಥದಲ್ಲಿ ನೀಡಲಾಗಿದೆ.)

೫. ಕೊರೋನಾ ಮಹಾಮಾರಿಯಿಂದ ರಕ್ಷಣೆಯಾಗಬೇಕೆಂದು ಈಶ್ವರನ ಬಲವು ದೊರಕಬೇಕೆಂದು ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಾದ ಉಪಾಯ

೫. ಅ. ಪ್ರತಿಕಾರಕ್ಷಮತೆ ಮತ್ತು ಆಧ್ಯಾತ್ಮಿಕ ಬಲವು ಹೆಚ್ಚಾಗಬೇಕೆಂದು ಮಂತ್ರಜಪವನ್ನು ಮಾಡಿರಿ ! : ‘ಈ ವಿಷಾಣುಗಳ ಸೋಂಕು ಆಗಬಾರದೆಂದು’, ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಪ್ರತಿಬಂಧಾತ್ಮಕ ಉಪಾಯವೆಂದು ಹಾಗೆಯೇ ತಮ್ಮ ಪ್ರತಿಕಾರ ಕ್ಷಮತೆ ಮತ್ತು ಆಧ್ಯಾತ್ಮಿಕ ಬಲವು ಹೆಚ್ಚಾಗಲು ಮಂತ್ರ-ಉಪಾಯವನ್ನೂ ಮಾಡಬೇಕು. ಇದಕ್ಕಾಗಿ ಮಹಾಮಾರಿಯ ಈ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರಿ ಗುರುದೇವ ದತ್ತ – ‘ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಓಂ ನಮಃ ಶಿವಾಯ |’ ಈ ನಾಮಜಪವನ್ನು ಮಾಡಬೇಕು.

೫ ಆ. ಆಪತ್ಕಾಲದಿಂದ ಪಾರಾಗಲು ಸಾಧನೆಯನ್ನು ಆರಂಭಿಸಿ ಮತ್ತು ಅದನ್ನು ಹೆಚ್ಚಿಸಿರಿ ! :
ಕೊರೋನಾದ ಮಹಾಮಾರಿಯು ಒಂದು ತುಣುಕಾಗಿದೆ. ಮುಂಬರುವ ಆಪತ್ಕಾಲದಲ್ಲಿ ಇದಕ್ಕಿಂತಲೂ ದೊಡ್ಡ ಆಪತ್ತುಗಳನ್ನು ಎದುರಿಸಬೇಕಾಗಲಿದೆ. ಅಂದರೆ ಆಪತ್ತು ಎಷ್ಟೇ ದೊಡ್ಡದ್ದಾಗಿದ್ದರೂ, ಈಶ್ವರನ ಭಕ್ತಿಯ ಆಧಾರದಿಂದ ಅದರಿಂದ ಪಾರಾಗಿ ಹೋಗಲು ಬರುತ್ತದೆ, ಎಂಬ ಆದರ್ಶವನ್ನು ಭಕ್ತ ಪ್ರಹ್ಲಾದನ ರೂಪದಿಂದ ನಮ್ಮೆದುರಿಗಿದೆ. ಆದುದರಿಂದ ಎಲ್ಲ ಆಪತ್ತುಗಳಿಂದ ಪಾರಾಗಲು ಸಾಧನೆಯನ್ನು ಮಾಡುವವರು ಅದನ್ನು ಹೆಚ್ಚಿಸುತ್ತಾ ಹೋಗಬೇಕು ಮತ್ತು ಮಾಡದಿರುವವರು ಇಂದಲ್ಲ, ಆದರೆ ಈಗಲೇ ಸಾಧನೆಯನ್ನು ಆರಂಭಿಸಬೇಕು !

ಸಾಧನೆಯ ಮಹತ್ವ ಮತ್ತು ಸಾಧನೆಯನ್ನು ಹೇಗೆ ಮಾಡಬೇಕು, ಎಂಬುದನ್ನು ತಿಳಿದುಕೊಳ್ಳಿ ! ಇದಕ್ಕಾಗಿ ಸನಾತನದ ಆನ್ ಲೈನ್ ‘ಸಾಧನಾ ಸಂವಾದ’ಕ್ಕಾಗಿ ನೋಂದಾಯಿಸಿ !
https://events.hindujagruti.org/

‘ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ದೇವರೇ ನಮ್ಮ ರಕ್ಷಣೆಯನ್ನು ಮಾಡಲಿದ್ದಾನೆ’, ಎಂಬ ಶ್ರದ್ಧೆಯನ್ನಿಟ್ಟು ಸಾಧನೆಯನ್ನು ಆರಂಭಿಸಿ ಮತ್ತು ಅದನ್ನು ಹೆಚ್ಚಿಸಿ !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೬.೨೦೨೧)