ಸಾಧಕರೇ, ‘ಕೊರೊನಾ’ ಮಹಾಮಾರಿಯ ಕಾಲವಾಧಿಯಲ್ಲಿ, ಹಾಗೆಯೇ ಮುಂಬರುವ ಭೀಕರ ಆಪತ್ಕಾಲದಲ್ಲಿ ಮೃತವ್ಯಕ್ತಿಯ ಮೇಲೆ ಅಗ್ನಿಸಂಸ್ಕಾರ ಮಾಡುವ ಸಂದರ್ಭದಲ್ಲಿ ಮುಂದಿನ ಅಂಶಗಳನ್ನು ಗಮನದಲ್ಲಿಡಿ !

ಸಾಧಕರಿಗೆ ಸೂಚನೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ವ್ಯಕ್ತಿ ಮೃತನಾದ ಬಳಿಕ ಧರ್ಮಶಾಸ್ತ್ರಕ್ಕನುಸಾರ ಸ್ಮಶಾನದಲ್ಲಿ ಅವನ ಶವದ ಮೇಲೆ ಮಂತ್ರೋಚ್ಚಾರಪೂರ್ವಕ ಅಗ್ನಿಸಂಸ್ಕಾರವಾಗುವುದು ಆವಶ್ಯಕವಾಗಿರುತ್ತದೆ. ಸದ್ಯ ‘ಕೊರೊನಾ’ ಮಹಾಮಾರಿಯ ಜಾಗತಿಕ ಸಂಕಟದಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನರು ಮರಣಹೊಂದುತ್ತಿದ್ದಾರೆ. ಇಂತಹ ಸಮಯದಲ್ಲಿ ‘ಕೊರೊನಾ’ದ ಸೋಂಕನ್ನು ತಡೆಗಟ್ಟಲು ಸರಕಾರವು ಕೆಲವು ನಿಯಮಗಳನ್ನು ಹಾಕಿಕೊಟ್ಟಿದೆ. ಆ ದೃಷ್ಟಿಯಿಂದ ವ್ಯಕ್ತಿಯ ಮೃತ್ಯುವು ಕೊರೊನಾದಿಂದಾಗಿದ್ದರೆ ಮೃತನ ಸಂಬಂಧಿಕರಿಗೆ ಶವವನ್ನು ಕೊಡುವುದಿಲ್ಲ, ಇದರಿಂದ ಅವನ ಮೇಲೆ ಅಂತ್ಯವಿಧಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಈ ಕಠಿಣ ಸಮಯದಲ್ಲಿ ‘ಮೃತ ವ್ಯಕ್ತಿಯ ಮೇಲೆ ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ?’, ಎಂಬುದರ ಬಗ್ಗೆ ಸಮಾಜದಲ್ಲಿ ಗೊಂದಲದ ವಾತಾವರಣವಿದೆ. ಇದಕ್ಕಾಗಿ ಸದ್ಯದ ಕಾಲಕ್ಕೆ ಸಮಂಜಸವಾದ ಆಪತ್ಕಾಲೀನ ಉಪಾಯವನ್ನು ಮುಂದೆ ಕೊಡಲಾಗಿದೆ.

ಮೃತ ವ್ಯಕ್ತಿಯ ಮೇಲೆ ಅಗ್ನಿಸಂಸ್ಕಾರ ಮಾಡುವುದು

೧. ‘ಕೊರೊನಾ’ದಿಂದ ಮೃತ್ಯು ಬಂದಿದ್ದರೆ ಅವನ ಮೇಲೆ ಮಂತ್ರಪೂರ್ವಕ ಅಗ್ನಿಸಂಸ್ಕಾರವನ್ನು ಮಾಡಲು ಬರುವುದಿಲ್ಲ ಮತ್ತು ವಿದ್ಯುತ್‌ಚಿತಾಗಾರದಲ್ಲಿ ಶವದ ದಹನವನ್ನು ಮಾಡಿದರೆ (ಸುಟ್ಟರೆ) ಅಗ್ನಿಸಂಸ್ಕಾರವಾಗುವುದಿಲ್ಲ. ಇಂತಹ ಸಮಯದಲ್ಲಿ ಮೃತನ ಸಂಬಂಧಿಕರು ಮೃತ ವ್ಯಕ್ತಿಯ ಅಸ್ಥಿಗಳನ್ನು ಪಡೆಯಲು ಪ್ರಯತ್ನಿಸಬೇಕು. ಅಸ್ಥಿಗಳು ದೊರಕಿದರೆ ಮೃತ್ಯುನಂತರದ ೯ ನೇ ಅಥವಾ ೧೦ ನೇ ದಿನ ಅಸ್ಥಿಗಳ ಮೇಲೆ ‘ಅಗ್ನಿಸಂಸ್ಕಾರ ವಿಧಿ’ಯನ್ನು ಮಾಡಬೇಕು. ಇದರ ನಂತರ ದಶಕ್ರಿಯಾ ಮುಂತಾದ ವಿಧಿಗಳನ್ನು ಎಂದಿನಂತೆ ಮಾಡಬೇಕು.

೨. ಮೃತನ ಅಸ್ಥಿಗಳು ಸಿಕ್ಕವು; ಆದರೆ ಪುರೋಹಿತರು ಸಿಗದಿದ್ದರೆ, ಮೃತನ ಸಂಬಂಧಿಕರು ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಮಾಡುತ್ತಾ ಅಸ್ಥಿಗಳ ವಿಸರ್ಜನೆಯನ್ನು ಮಾಡಬೇಕು.

೩. ‘ಕೊರೊನಾಪೀಡಿತರಾಗಿರುವುದು, ಪ್ರತ್ಯೇಕೀಕರಣದಲ್ಲಿ (ಕ್ವಾರನಟೈನ್‌ನಲ್ಲಿ) ಇರುವುದು, ಎಲ್ಲಿಯಾದರು ದೂರದಲ್ಲಿರುವುದು, ಸಂಚಾರಸಾರಿಗೆ ನಿರ್ಬಂಧದ ನಿಯಮಗಳು’ ಇತ್ಯಾದಿ ಕಾರಣಗಳಿಂದ ಮೃತನ ಮನೆಯಲ್ಲಿ ಎಲ್ಲ ಸಂಬಂಧಿಕರು ವಿಧಿಗಾಗಿ ಬರಲು ಸಾಧ್ಯವಾಗದಿರುವುದರಿಂದ ಮೇಲಿನಂತೆ ವಿಧಿಯನ್ನು ಮಾಡಲು ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೃತನ ಬಳಿಯಿರುವ ಸಂಬಂಧಿತ ವ್ಯಕ್ತಿಯು ಅಸ್ಥಿಗಳ ವಿಸರ್ಜನೆಯನ್ನು ಮಾಡಬೇಕು ಮತ್ತು ಮೃತನ ಸಂಬಂಧಿಕರು ಲಭ್ಯವಾದಾಗ ಮೃತನಿಗಾಗಿ ‘ಪಾಲಾಶ ವಿಧಿ’ಯನ್ನು ಮಾಡಬೇಕು.
– ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ. ಗೋವಾ. (೩೧.೫.೨೦೨೧)

ಮೃತ ವ್ಯಕ್ತಿಗೆ ಉತ್ತಮ ಗತಿ ಪ್ರಾಪ್ತವಾಗಬೇಕೆಂದು’, ಮಾಡಬೇಕಾದ ನಾಮಜಪಾದಿ ಉಪಾಯಗಳು !

ಮುಂಬರುವ ಭೀಕರ ಆಪತ್ಕಾಲದಲ್ಲಿ ಮೃತ ವ್ಯಕ್ತಿಗೆ ಧಾರ್ಮಿಕ ವಿಧಿಗಳನ್ನು ಮಾಡಲು ಪುರೋಹಿತರು ಸಿಗುವರು, ಎಂದು ಹೇಳಲು ಆಗುವುದಿಲ್ಲ, ಹಾಗೆಯೇ ‘ಮೃತ ವ್ಯಕ್ತಿಗೆ ಅಗ್ನಿಯನ್ನು ನೀಡಲಾಗುವುದೋ ಅಥವಾ ಇಲ್ಲವೋ ? ಅವನ ಅಸ್ಥಿಗಳು ಸಿಗುವವೋ ಅಥವಾ ಇಲ್ಲವೋ ?’, ಎಂದೂ ಸಹ ಹೇಳಲು ಆಗುವುದಿಲ್ಲ. ಇಂತಹ ಸಮಯದಲ್ಲಿ ‘ಮೃತ ವ್ಯಕ್ತಿಗೆ ಉತ್ತಮ ಗತಿ ಸಿಗಬೇಕು’ ಎಂಬುದಕ್ಕಾಗಿ ಮೃತ ವ್ಯಕ್ತಿಯ ಕುಟುಂಬದಲ್ಲಿನ ಎಲ್ಲರೂ ಮುಂದಿನಂತೆ ನಾಮಜಪಾದಿ ಉಪಾಯಗಳನ್ನು ಮಾಡಬೇಕು.

ಅ. ಧರ್ಮಶಾಸ್ತ್ರಕ್ಕನುಸಾರ ಮೃತ ವ್ಯಕ್ತಿಯ ಛಾಯಾಚಿತ್ರ ಮನೆಯಲ್ಲಿರಬಾರದು. ಒಂದು ವೇಳೆ ಇದ್ದರೆ ಅದನ್ನು ವಿಸರ್ಜನೆ ಮಾಡಬೇಕು. ಮೃತನ ಕುಟುಂಬದವರಿಗೆ ಆ ರೀತಿ ಮಾಡಲು ಇಚ್ಛೆ ಇಲ್ಲದಿದ್ದರೆ ಮೃತನ ಛಾಯಾಚಿತ್ರವನ್ನು ಮನೆಯಲ್ಲಿ ಗೋಡೆಯ ಮೇಲೆ ಹಾಕದೇ ಅದನ್ನು ದತ್ತಗುರುಗಳ ಚಿತ್ರಕ್ಕೆ ಅಥವಾ ದತ್ತಗುರುಗಳ ನಾಮಪಟ್ಟಿಗೆ ಕಟ್ಟಿಡಬೇಕು. ಹೀಗೆ ಮಾಡಿದರೆ ದೇವತೆಯ ಚಿತ್ರದಲ್ಲಿನ ಸಾತ್ತ್ವಿಕತೆಯು ಆ ಲಿಂಗದೇಹಕ್ಕೆ ಸಿಗುತ್ತಲಿರುವುದು. ಕೆಲವು ಕಾಲಾವಧಿಯ ನಂತರ ಮೃತ ವ್ಯಕ್ತಿಯ ಛಾಯಾಚಿತ್ರ ಅಥವಾ ದತ್ತಗುರುಗಳ ಚಿತ್ರವು ಹಾಳಾದರೆ ಅದನ್ನು ವಿಸರ್ಜಿಸಬಹುದು.

ಆ. ವ್ಯಕ್ತಿಯು ಮೃತಹೊಂದಿದ ಮೊದಲನೆಯ ದಿನದಿಂದ ಮುಂದಿನ ೧೪ ದಿನಗಳ ವರೆಗೆ ಕುಟುಂಬದಲ್ಲಿನ ಎಲ್ಲರೂ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಪ್ರತಿದಿನ ೯ ಮಾಲೆಯಷ್ಟು ಮಾಡಬೇಕು. ಈ ನಾಮಜಪವನ್ನು ಮಾಡಲು ಕುಳಿತುಕೊಳ್ಳುವಾಗ ಸಾಧ್ಯವಿದ್ದರೆ ಶ್ರೀ ದತ್ತಾತ್ರೇಯ ಅಥವಾ ಶ್ರೀವಿಷ್ಣುವಿನ ಚಿತ್ರದೆದುರು ಕುಳಿತುಕೊಳ್ಳಬೇಕು. ಇದು ಸಾಧ್ಯವಿಲ್ಲದಿದ್ದರೆ ತಮ್ಮ ಗುರುಗಳ ಛಾಯಾಚಿತ್ರವನ್ನು ಎದುರಿಟ್ಟುಕೊಂಡು ನಾಮಜಪವನ್ನು ಮಾಡಬೇಕು.

ಮೃತನ ಕುಟುಂಬದವರಿಗೆ ಸೂತಕವಿರುವುದರಿಂದ ಅವರು ಆರಾಧ್ಯದೇವತೆಯ ಚಿತ್ರದ ಪೂಜೆಯನ್ನು ಮಾಡಬಾರದು ಮತ್ತು ಅದಕ್ಕೆ ಹೂವುಗಳನ್ನೂ ಅರ್ಪಿಸಬಾರದು.

ಇ. ದೇವತೆಯ ಅಥವಾ ಗುರುಗಳ ಯಾವುದೇ ಚಿತ್ರವು ಲಭ್ಯವಾಗದಿದ್ದರೂ, ಮೃತನ ಕುಟುಂಬದವರು ಕುಳಿತುಕೊಂಡು ನಾಮಜಪವನ್ನು ಮಾಡಬೇಕು. ಈ ನಾಮಜಪವನ್ನು ಮಾಡುವಾಗ ‘ಮೃತ ವ್ಯಕ್ತಿಗೆ ಉತ್ತಮ ಗತಿ ಪ್ರಾಪ್ತವಾಗಲಿ. ಮೃತ ವ್ಯಕ್ತಿಯ ಕುಟುಂಬದವರೊಂದಿಗಿರುವ ಅವನ ಆಸಕ್ತಿಯು ದೂರವಾಗಲಿ. ಮೃತ್ಯುವಿನ ನಂತರ ಲಿಂಗದೇಹದ ಪ್ರವಾಸವು ಉತ್ತಮ ರೀತಿಯಲ್ಲಾಗಲಿ’, ಎಂದು ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡಬೇಕು. ಮಧ್ಯಾಹ್ನ ೧೨ ಗಂಟೆಗೆ ಮೃತ ವ್ಯಕ್ತಿಯ ಉದ್ದೇಶದಿಂದ ಮನೆಯ ಹೊರಗೆ ಅಥವಾ ಉಪ್ಪರಿಗೆಯ (ಟೆರೇಸ್) ಮೇಲೆ ಮೊಸರನ್ನ ಅಥವಾ ಸಾದಾ ಅನ್ನವನ್ನು ಇಡಬೇಕು.

ಈ. ಯಾವ ತಿಥಿಗೆ ವ್ಯಕ್ತಿಯ ಮರಣವಾಗಿದೆಯೋ, ಆ ಪ್ರತಿಯೊಂದು ಮಾಸದ ತಿಥಿಗೆ ಕುಟುಂಬದಲ್ಲಿನ ಎಲ್ಲರೂ ಮೇಲಿನಂತೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ೯ ಮಾಲೆ ಮಾಡಬೇಕು, ಉದಾ. ಚೈತ್ರ ಮಾಸದ ಕೃಷ್ಣ ಪಕ್ಷದಲ್ಲಿನ ಪಂಚಮಿ ತಿಥಿಗೆ ವ್ಯಕ್ತಿಯು ಮೃತ ಹೊಂದಿದ್ದರೆ ವೈಶಾಖ ಮಾಸದಲ್ಲಿನ ಕೃಷ್ಣ ಪಕ್ಷದಲ್ಲಿನ ಪಂಚಮಿ ತಿಥಿಗೆ, ಆ ಮುಂದಿನ ಮಾಸದಲ್ಲಿ ಜ್ಯೇಷ್ಠ ಕೃಷ್ಣ ಪಕ್ಷ ಪಂಚಮಿಗೆ ಇತ್ಯಾದಿ, ಈ ರೀತಿ ಪ್ರತಿಯೊಂದು ಮಾಸದ ಕೃಷ್ಣ ಪಕ್ಷ ಪಂಚಮಿಗೆ ಕುಟುಂಬದಲ್ಲಿನ ಎಲ್ಲರೂ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ೯ ಮಾಲೆಗಳಷ್ಟು ಮಾಡಬೇಕು. ಈ ರೀತಿ ವರ್ಷ ಪೂರ್ಣವಾಗುವವರೆಗೆ ಮಾಡಬೇಕು, ಅಂದರೆ ಚೈತ್ರ ಕೃಷ್ಣ ಪಕ್ಷ ಪಂಚಮಿಯ ತಿಥಿಗೆ ವ್ಯಕ್ತಿಯು ಮರಣ ಹೊಂದಿದ್ದರೆ ಮುಂದಿನ ವರ್ಷ ಇದೇ ತಿಥಿಯವರೆಗೆ ನಾಮಜಪವನ್ನು ಮಾಡಬೇಕು.’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೫.೨೦೨೧