ಸಾಧಕರೇ, ಪ್ರತಿಕ್ಷಣವನ್ನು ಸಾಧನೆಗಾಗಿಯೇ ಉಪಯೋಗಿಸಿ ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ ಮತ್ತು ಆಧ್ಯಾತ್ಮಿಕ ಉನ್ನತಿಯ ಧ್ಯೇಯವನ್ನು ಶೀಘ್ರದಲ್ಲಿ ಸಾಧ್ಯಮಾಡಿಕೊಳ್ಳಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಪರಾತ್ಪರ ಗುರು ಡಾ. ಆಠವಲೆ ಯವರ ಕೃಪೆಯಿಂದ ಎಲ್ಲ ಸಾಧಕರಿಗೆ ಸದ್ಯದ ಭೀಕರ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡಿ ಜೀವನ್ಮುಕ್ತ ವಾಗುವ ಅಮೂಲ್ಯ ಅವಕಾಶವು ಲಭಿಸಿದೆ. ಆಧ್ಯಾತ್ಮಿಕ ಉನ್ನತಿಯ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವ ಧ್ಯೇಯವನ್ನು ಗಮನದಲ್ಲಿಟ್ಟು ‘ತಮ್ಮ ಪ್ರತಿಯೊಂದು ಕ್ಷಣವನ್ನು ವ್ಯಷ್ಟಿ-ಸಮಷ್ಟಿ ಸಾಧನೆಗಾಗಿ ಕೊಡುತ್ತಿದ್ದೇವಲ್ಲ, ಎಂದು ಪ್ರತಿಯೊಬ್ಬ ಸಾಧಕನು ಅಂತರ್ಮುಖನಾಗಿ ವಿಚಾರ ಮಾಡಬೇಕು. ‘ಸಮಯವು ಅಮೂಲ್ಯ ವಿದೆ. ಒಂದು ಬಾರಿ ಹೋದ ಸಮಯವು ಮತ್ತೊಮ್ಮೆ ಸಿಗುವುದಿಲ್ಲ, ಈ ತತ್ತ್ವಕ್ಕನುಸಾರ ಸಾಧಕರು ಒಂದೇಒಂದು ಕ್ಷಣವನ್ನೂ ವ್ಯರ್ಥಗೊಳಿಸದೇ ಕ್ಷಮತೆಮೀರಿ ಪ್ರಯತ್ನಿಸುವುದು ಅಪೇಕ್ಷಿತವಿದೆ.

೧. ಸಾಮಾಜಿಕ ಮಾಧ್ಯಮಗಳ ಅನಾವಶ್ಯಕ ಬಳಕೆಯನ್ನು ಮಾಡಿ ಸಮಯವನ್ನು ವ್ಯರ್ಥ ಕಳೆಯಬೇಡಿರಿ !

‘ಕೆಲವು ಸಾಧಕರು ‘ವಾಟ್ಸ್‌ಆಪ್, ಫೆಸ್‌ಬುಕ್, ‘ಟ್ವಿಟರ್, ಟೆಲಿಗ್ರಾಮ್, ‘ಇನ್ಸ್ಟಾಗ್ರಾಮ್ ಇತ್ಯಾದಿಗಳಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ‘ವಾಟ್ಸ್‌ಆಪ್ನಲ್ಲಿ ‘ಕುಟುಂಬದವರ ಗುಂಪು’, ‘ಶಾಲೆ-ಮಹಾವಿದ್ಯಾಲಯದಲ್ಲಿನ ಗೆಳೆಯ-ಗೆಳತಿಯರ ಗುಂಪು’, ‘ಕಾರ್ಯಾಲಯದಲ್ಲಿನ ಸಹೋದ್ಯೋಗಿಗಳ ಗುಂಪು’, ‘ಗೃಹನಿರ್ಮಾಣ ವಸಾಹತುವಿನಲ್ಲಿನ ಸದಸ್ಯರ ಗುಂಪು’ ಮುಂತಾದ ಅನೇಕ ಗುಂಪುಗಳನ್ನು ಮಾಡಲಾಗುತ್ತದೆ. ಇಂತಹ ಗುಂಪು ಗಳಲ್ಲಿ ಸ್ವಲ್ಪ ಸ್ವಲ್ಪ ಹೊತ್ತು ಬಿಟ್ಟು ‘ಯಾವುದಾದರೂ ಸಂದೇಶ ಬಂದಿದೆಯೇ ?’, ಎಂದು ನೋಡಲು ಸಮಯವನ್ನು ನೀಡಲಾಗುತ್ತದೆ. ಕೆಲವು ಸಾಧಕರು ಇಂತಹ ಗುಂಪುಗಳಲ್ಲಿ ‘ಸುಪ್ರಭಾತ’, ‘ಶುಭ ರಾತ್ರಿ, ಸುವಚನಗಳು’, ‘ಹಾಸ್ಯ, ‘ವಿಡಿಯೋ’, ಇತ್ಯಾದಿ ಗಳನ್ನು ಕಳುಹಿಸಿ ತಾವು ಸಹ ಇತರರಿಗಾಗಿ ಸಮಯವನ್ನು ವ್ಯರ್ಥ ಕಳೆಯುತ್ತಾರೆ. ‘ವಾಟ್ಸ್‌ಆಪ್ನೊಂದಿಗೆ ಫೆಸ್‌ಬುಕ್, ‘ಟ್ವಿಟರ್, ಟೆಲಿಗ್ರಾಮ್, ‘ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಧಕರ ಬಹಳಷ್ಟು ಸಮಯವು ವ್ಯರ್ಥವಾಗುತ್ತದೆ. ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ಸಾಧನೆಯಲ್ಲಾಗುವ ಹಾನಿಯನ್ನು ತಡೆಗಟ್ಟಲು ಕೆಳಗಿನ ದೃಷ್ಟಿಕೋನವನ್ನು ಗಮನದಲ್ಲಿಡಿ.

ಅ. ಸಾಧಕರು ಅನಾವಶ್ಯಕ ಸಂದೇಶ-ವಿಡಿಯೋ, ಹಾಗೆಯೇ ಸ್ಟೆಟಸ್ ನೋಡಲು ಸಮಯವನ್ನು ಕಳೆಯುವುದರಿಂದ ಅವರ ಬಹಿರ್ಮುಖತೆಯು ಹೆಚ್ಚಾಗುತ್ತದೆ. ಸಾಧನೆಗಾಗಿ ಆವಶ್ಯಕವಿಲ್ಲದ ಮಾಯೆಯ ವಿಚಾರಗಳು ಹೆಚ್ಚಾಗಿ ಸಾಧನೆಯು ಖರ್ಚಾಗುತ್ತದೆ. ಸಂದೇಶವನ್ನು ಕಳುಹಿಸುವ ಸಾಧಕನು ತನ್ನೊಂದಿಗೆ ಇತರ ಸಾಧಕರ ಸಾಧನೆಯಲ್ಲಿನ ಸಮಯವನ್ನು ವ್ಯರ್ಥ ಕಳೆಯುವುದ ರಿಂದ ಅವನ ಸಾಧನೆಯಲ್ಲೂ ಹಾನಿಯಾಗುತ್ತದೆ. ಹಾಗೆಯೇ ಸಂದೇಶವನ್ನು ಓದುವ ಸಾಧಕನು ತನ್ನ ಸಾಧನೆಯ ಅಮೂಲ್ಯ ಸಮಯ ವ್ಯರ್ಥ ಮಾಡುವುದರಿಂದ ಅವನ ಸಾಧನೆಯಲ್ಲೂ ಹಾನಿಯಾಗುತ್ತದೆ.

ಆ. ಸಾಧಕನು ಸಾಧನೆಯಲ್ಲಿ ಉನ್ನತಿಯನ್ನು ಮಾಡಿಕೊಂಡು ಮನಸ್ಸಿನಲ್ಲಿನ ಸಂಸ್ಕಾರಗಳನ್ನು ಕಡಿಮೆ ಮಾಡುವುದು ಅಪೇಕ್ಷಿತ ವಿರುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿನ ಹಾಸ್ಯ, ಮನೋರಂಜನೆ, ವಾರ್ತೆಗಳು ಇತ್ಯಾದಿಗಳನ್ನು ನೋಡಿದರೆ ಸಾಧಕನ ಮನಸ್ಸಿನಲ್ಲಿ ಹೊಸ ಸಂಸ್ಕಾರಗಳು ಹೆಚ್ಚಾಗುತ್ತವೆ.

ಇ. ಕೆಲವು ಸಾಧಕರು ರಾತ್ರಿಯ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅನಾವಶ್ಯಕ ಸಂದೇಶಗಳನ್ನು ಓದುವುದು ಅಥವಾ ವಿಡಿಯೋ ನೋಡುವುದು ಇವುಗಳಲ್ಲಿ ಕೆಲವು ಗಂಟೆ ಸಮಯವನ್ನು ಕಳೆಯುತ್ತಾರೆ. ಹಾಗಾಗಿ ಅವರ ಸಾಧನೆಯೂ ಖರ್ಚಾಗುತ್ತದೆ. ಹಾಗೆಯೇ ರಾತ್ರಿಯ ವೇಳೆ ಇಂತಹ ಸಂದೇಶಗಳನ್ನು ಓದುವುದ ರಿಂದ ಮಲಗುವವರೆಗೆ ಮನಸ್ಸಿನಲ್ಲಿ ಅದರ ಪ್ರಭಾವವಿರುತ್ತದೆ ಮತ್ತು ಕೆಟ್ಟ ಶಕ್ತಿಗಳ ಆವರಣವೂ ಬರುತ್ತದೆ. ಇದರಿಂದ ಬೆಳಗ್ಗೆ ಎದ್ದಾಗಿನಿಂದ ದಿನವಿಡಿ ಮಾಡುವ ಸೇವೆಗಳ ಮೇಲೆಯೂ ಪರಿಣಾಮವಾಗುತ್ತದೆ.

ಈ. ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ, ಇದು ಒಂದು ರೀತಿಯ ವ್ಯಸನವೇ ಆಗಿದೆ. ವಾಸ್ತವದಲ್ಲಿ ಸತತ ಸಂಚಾರವಾಣಿಯ ಬಳಕೆಯಿಂದ ತಲೆನೋವು, ಕುತ್ತಿಗೆನೋವು, ಕಣ್ಣುಗಳ ಕಾಯಿಲೆ ಇತ್ಯಾದಿ ಶಾರೀರಿಕ ಕಾಯಿಲೆಗಳು, ಹಾಗೂ ಅನೇಕ ಮಾನಸಿಕ ಕಾಯಿಲೆಗಳಾಗುತ್ತವೆ. ಸಾಮಾಜಿಕ ಮಾಧ್ಯಮಗಳ ಸತತ ಬಳಕೆಯಿಂದ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ.

೨. ಸಾಮಾಜಿಕ ಮಾಧ್ಯಮಗಳ ಅತಿಬಳಕೆಯನ್ನು ತಡೆಗಟ್ಟಲು ಕೃತಿ ಸ್ತರದ ಪ್ರಯತ್ನಗಳನ್ನು ಮಾಡಿರಿ !

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯನ್ನು ತಡೆಗಟ್ಟಲು ಸಾಧಕರು ಕೃತಿಶೀಲರಾಗಿ ಪ್ರಯತ್ನಿಸಬೇಕು. ಅನಾವಶ್ಯಕ ವಾಗಿರುವ ಎಲ್ಲ ಗುಂಪುಗಳಿಂದ ಹೊರಗೆ ಬರುವುದು, ಅನಾವಶ್ಯಕ ಸಂದೇಶ-ವಿಡಿಯೋಗಳನ್ನು ನೋಡದಿರುವುದು, ಅವುಗಳೊಂದಿಗೆ ವಿನಿಮಯ ಮಾಡದಿರುವುದು, ಸಮಷ್ಟಿ ಸಾಧನೆಗೆ ಪೂರಕವಾಗಿರುವ ಸಾಮಾಜಿಕ ಮಾಧ್ಯಮಗಳನ್ನಷ್ಟೇ ಉಪಯೋಗಿಸುವುದು ಮತ್ತು ಅನಾವಶ್ಯಕ ಬಳಕೆಯನ್ನು ತಡೆಗಟ್ಟಲು ಸ್ವಯಂಸೂಚನೆ ಕೊಡುವುದು ಅಥವಾ ಆವಶ್ಯಕತೆಗನುಸಾರ ಶಿಕ್ಷಾಪದ್ಧತಿ ಅವಲಂಬಿಸುವುದು, ಇದಕ್ಕಾಗಿ ಸಾಧಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

೩. ದೂರದರ್ಶನ, ಯು-ಟ್ಯೂಬ್‌ನ ಕಾರ್ಯಕ್ರಮಗಳನ್ನು ನೋಡುವುದರಲ್ಲಿ ಸಮಯವನ್ನು ಕಳೆಯಬೇಡಿ !

ಕೆಲವು ಸಾಧಕರು ಕೊರೊನಾ ಮಹಾಮಾರಿಯ ಕಾಲದಲ್ಲಿ, ರಜೆ ತೆಗೆದುಕೊಂಡಾಗ ಸಮಯವನ್ನು ಕಳೆಯುವಂತೆ ಸಮಯ ವನ್ನು ವ್ಯರ್ಥ ಕಳೆಯುವುದು ಗಮನಕ್ಕೆ ಬಂದಿದೆ. ಕೆಲವು ಸಾಧಕರು ದೂರದರ್ಶನ, ಹಾಗೆಯೇ ಯು ಟ್ಯೂಬ್ ಇವುಗಳಲ್ಲಿನ ವಿವಿಧ ಕಾರ್ಯಕ್ರಮಗಳು, ಮಾಲಿಕೆಗಳು, ಪ್ರವಚನಗಳು ಇತ್ಯಾದಿಗಳನ್ನು ನೋಡಲು ವಿನಾಕಾರಣ ಸಮಯವನ್ನು ಕೊಡುತ್ತಾರೆ. ಕೆಲವು ಸಾಧಕರು ಯು-ಟ್ಯೂಬ್‌ನಲ್ಲಿ ಅಡುಗೆ ಮಾಡುವ ಹೊಸ ವಿಧಾನವನ್ನು ನೋಡಿ ಅದನ್ನು ತಯಾರಿಸಲು ಸಮಯವನ್ನು ಕೊಡುತ್ತಾರೆ. ನಿಜವಾಗಿಯೂ ಆಪತ್ಕಾಲದ ತೀವ್ರತೆಯು ಹೆಚ್ಚಾಗಿರುವಾಗ ಸಾಧನೆಯ ವೇಗವನ್ನು ಹೆಚ್ಚಿಸುವುದು ಅಪೇಕ್ಷಿತವಾಗಿದೆ. ಸಾಧಕರೇ. ಆಪತ್ಕಾಲದಲ್ಲಿ ಜೀವಂತವಾಗಿರಲು ಸಾಧನೆಯನ್ನು ಮಾಡುವುದು ಆವಶ್ಯಕ ವಾಗಿರುವಾಗ ಈ ರೀತಿ ಸಮಯವನ್ನು ವ್ಯರ್ಥ ಕಳೆಯಬೇಡಿರಿ !

೪. ಸಾಧನೆಗಾಗಿ ಪ್ರತಿಯೊಂದು ಕ್ಷಣವು ಉಪಯುಕ್ತವಾಗಲು ಮಾಡಬೇಕಾದ ಪ್ರಯತ್ನಗಳು

ಅ. ಈ ಆಪತ್ಕಾಲದಲ್ಲಿ ಪರಿಣಾಮಕಾರಿ ಸಾಧನೆ ಮಾಡುವುದರ ಅನನ್ಯ ಸಾಧಾರಣ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಎಲ್ಲೆಡೆಯ ಸಾಧಕರು ತಮ್ಮ ಕ್ಷಮತೆ, ಪ್ರಕೃತಿ, ಕೌಟುಂಬಿಕ ಜವಾಬ್ದಾರಿ ಇತ್ಯಾದಿ ಗಮನದಲ್ಲಿಟ್ಟು ೨೪ ಗಂಟೆಗಳ ದಿನಕ್ರಮವನ್ನು ಗೊತ್ತುಪಡಿಸಬೇಕು.

ಆ. ಈ ದಿನಕ್ರಮದಲ್ಲಿ ದೈನಂದಿನ ವೈಯಕ್ತಿಕ ಕೃತಿ, ವ್ಯಷ್ಟಿ ಸಾಧನೆ ಮತ್ತು ಸತ್ಸೇವೆ ಇವುಗಳಿಗಾಗಿ ನೀಡಬೇಕಾದ ಸಮಯವನ್ನು ಈಶ್ವರನಿಗೆ ಅಪೇಕ್ಷಿಸಿದ ರೀತಿಯಲ್ಲಿ ನಿಯೋಜನೆ ಮಾಡಿ ಅದನ್ನು ತಮ್ಮ ಜವಾಬ್ದಾರ ಸಾಧಕರಿಗೆ ತೋರಿಸಬೇಕು.

ಇ. ‘ಈ ಆಯೋಜನೆಯಂತೆ ಕೃತಿಯಾಗುತ್ತಿದೆಯಲ್ಲ ?’, ಎಂಬುದರ ನಿಯಮಿತವಾಗಿ ಪ್ರಾಮಾಣಿಕವಾಗಿ ದೈನಂದಿನಿಯನ್ನು ಬರೆದು ಗುರುಚರಣಗಳಲ್ಲಿ ಆತ್ಮನಿವೇದನೆಯನ್ನು ಮಾಡಬೇಕು ಮತ್ತು ಅದರ ವರದಿಯನ್ನು ಜವಾಬ್ದಾರ ಸಾಧಕರಿಗೆ ನೀಡಬೇಕು.

೫. ಆಪತ್ಕಾಲದ ತೀವ್ರತೆಯನ್ನು ಗಮನದಲ್ಲಿಟ್ಟು ಸಾಧನೆಗಾಗಿ ಸಮಯವನ್ನು ನೀಡಿರಿ !

ಸಾಧಕರೇ, ‘ಭೀಕರ ಆಪತ್ಕಾಲವು ಪ್ರಾರಂಭವಾಗಿದ್ದು ಸಂತರು-ಭವಿಷ್ಯಕಾರರು ಹೇಳಿದಂತೆ ಸಂಪೂರ್ಣ ವಿಶ್ವವು ಮೂರನೇಯ ಮಹಾಯುದ್ಧದ ಹೊಸ್ತಿಲಿನಲ್ಲಿದೆ. ಮುಂಬರುವ ಭೀಕರ ಕಾಲ ದಲ್ಲಿ ಸಾಧನೆಯನ್ನು ಮಾಡುವುದು ಸಹ ದಿನದಿಂದ ದಿನಕ್ಕೆ ಕಠಿಣವಾಗಲಿದೆ, ಎಂದು ಗಮನದಲ್ಲಿಟ್ಟು ಜಾಗೃತಾವಸ್ಥೆಯಲ್ಲಿ ಪ್ರತಿ ಕ್ಷಣವನ್ನು ಸಾಧನೆಗಾಗಿ ಹೇಗೆ ಉಪಯೋಗಿಸಬಹುದು’, ಎಂಬುದಕ್ಕಾಗಿ ತಳಮಳದಿಂದ ಪ್ರಯತ್ನಿಸಿ ! ಈ ಆಪತ್ಕಾಲದಲ್ಲಿ ತಮ್ಮ ಸಾಧನೆಯ ಫಲಶ್ರುತಿಯು ಹೆಚ್ಚಾದರೆ ಆಧ್ಯಾತ್ಮಿಕ ಉನ್ನತಿಯು ಬೇಗನೆ ಆಗುವುದು, ಎಂಬುದನ್ನು ಖಚಿತಪಡಿಸಿಕೊಳ್ಳಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೯.೬.೨೦೨೧)

ಸಾಧಕರ ಸಮಯದ ನಿಯೋಜನೆಯ ವಿಷಯದಲ್ಲಿ ಜವಾಬ್ದಾರ ಸಾಧಕರ ಜವಾಬ್ದಾರಿ

೧. ‘ಪ್ರತಿಯೊಬ್ಬ ಸಾಧಕನ ವೈಯಕ್ತಿಕ ಕೃತಿ, ವ್ಯಷ್ಟಿ ಸಾಧನೆ ಮತ್ತು ಸತ್ಸೇವೆ ಇವುಗಳ ೨೪ ಗಂಟೆಗಳ ಆಯೋಜನೆಯು ಯೋಗ್ಯರೀತಿಯಲ್ಲಿ ಆಗಿದೆಯೇ ?’, ಎಂದು ನೋಡುವುದು ಜವಾಬ್ದಾರ ಸಾಧಕರ ಹೊಣೆಯಾಗಿದೆ.

೨. ಜವಾಬ್ದಾರ ಸಾಧಕರು ಸಹಸಾಧಕರಿಗೆ ದೈನಂದಿನ ನಿಯೋಜನೆಯಲ್ಲಿರುವ ಅಡಚಣೆಗಳನ್ನು ದೂರ ಮಾಡಲು ಮತ್ತು ಅವರನ್ನು ಸಾಧನೆಯ ಮುಂದಿನ ಹಂತಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಬೇಕು.

೩. ಜವಾಬ್ದಾರ ಸಾಧಕರು ಸಾಧಕರ ದೈನಂದಿನಿಯನ್ನು ನಿಯಮಿತವಾಗಿ ನೋಡಬೇಕು. ಹಾಗೆಯೇ ಸಾಧಕರ ಕ್ಷಮತೆ, ಕೌಶಲ್ಯ ವನ್ನು ನೋಡಿ ‘ಅವರ ಫಲಶ್ರುತಿ ಮತ್ತು ಸಾಧನೆಯ ವೇಗವನ್ನು ಹೇಗೆ ಹೆಚ್ಚಿಸಬಹುದು’, ಎಂಬುದರ ಅಧ್ಯಯನ ಮಾಡಬೇಕು, ಉದಾ, ‘ಮನೆಯಲ್ಲಿನ ಸೇವೆಯನ್ನು ಮಾಡಲು ಎಷ್ಟು ಸಮಯದ ಆವಶ್ಯಕತೆ ಇದೆ’, ‘ನಿಯತಕಾಲಿಕೆಗಳನ್ನು ವಿತರಿಸಲು ಎಷ್ಟು ಸಮಯವು ಬೇಕಾಗುತ್ತದೆ’, ‘ಸತ್ಸಂಗದ ಪೂರ್ವತಯಾರಿಗಾಗಿ ಎಷ್ಟು ಸಮಯದ ಆವಶ್ಯಕತೆ ಇದೆ’, ಒಂದು ಗಂಟೆಯಲ್ಲಿ ಎಷ್ಟು ‘ಕೆಬಿ’ ಬರವಣಿಗೆಯ ಬೆರಳಚ್ಚು ಆಗುವುದು ಅಪೇಕ್ಷಿತವಿದೆ’ ಮುಂತಾದವುಗಳ ಅಭ್ಯಾಸ ಮಾಡಿ ಅವರಿಗೆ ಆವಶ್ಯಕವಾಗಿರುವ ಮಾರ್ಗದರ್ಶನವನ್ನು ಮಾಡಬೇಕು. ಸಾಧಕರಿಗೆ ಮಾರ್ಗದರ್ಶನ ಮಾಡಿದ ರೀತಿಯಲ್ಲಿ ಅವರಿಂದ ಕೃತಿಯಾಗುತ್ತಿದೆಯಲ್ಲ, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

೪. ವೃದ್ಧರು, ರೋಗಿಗಳು, ಪ್ರಾಣಶಕ್ತಿ ಕಡಿಮೆ ಇದ್ದವರು ಅಥವಾ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವ ಸಾಧಕರು ತಮ್ಮ ಕ್ಷಮತೆಗನುಸಾರ ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಜವಾಬ್ದಾರ ಸಾಧಕರು ‘ಇಂತಹ ಸಾಧಕರ ನಿಯೋಜನೆಯನ್ನು ಅವರ ಕ್ಷಮತೆಗನುಸಾರ ಈಶ್ವರನಿಗೆ ಅಪೇಕ್ಷಿತವಿದ್ದಂತೆ ಆಗುತ್ತಿದೆಯಲ್ಲ ?’, ಎಂದು ಅಧ್ಯಯನ ಮಾಡುವುದೂ ಅಪೇಕ್ಷಿತವಿದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೯.೬.೨೦೨೧)