ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯ ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಜುಲೈ ೨೩ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಈ ನಿಮಿತ್ತ ಗುರು ಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರ ಪಟ್ಟು ಹೆಚ್ಚಾಗುತ್ತದೆ. ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು ಅತ್ಯುತ್ತಮ ಅರ್ಪಣೆಯಾಗಿದೆ. ಆದ್ದರಿಂದ, ಧರ್ಮಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ. ಗುರು ಪೂರ್ಣಿಮೆಗಾಗಿ ಮನೆಯಲ್ಲಿಯೇ ‘ಆನ್‌ಲೈನ್ ಅರ್ಪಣೆ ಮಾಡುವ ಸೌಲಭ್ಯವಿದೆ. ಅದಕ್ಕಾಗಿ ಭೇಟಿ ನೀಡಿ.

www.HinduJagruti.org/donate