ಸೌಭಾಗ್ಯಾಲಂಕಾರಗಳ ಆಧ್ಯಾತ್ಮಿಕ ಮಹತ್ವ

ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿ ಜಾಗೃತವಾದರೆ ಆ ಶಕ್ತಿಯಲ್ಲಿಯೂ ಕಾರ್ಯಾನುರೂಪ ತಾರಕ ಅಥವಾ ಮಾರಕ ದೇವಿತತ್ತ್ವ ಆಕರ್ಷಿಸುವ ಪ್ರಚಂಡ ಕ್ಷಮತೆ ನಿರ್ಮಾಣವಾಗುತ್ತದೆ

ಸ್ತ್ರೀಯರು ಆಭರಣಗಳನ್ನು ಧರಿಸುವುದೆಂದರೆ, ತಮ್ಮಲ್ಲಿರುವ ದೇವತ್ವವನ್ನು ಜಾಗೃತಗೊಳಿಸುವುದು ಎಂಬುದನ್ನರಿತುಕೊಳ್ಳಿ !

ಶಾಸ್ತ್ರೀಯ ಪದ್ಧತಿಯಿಂದ ಆಭರಣಗಳನ್ನು ಧರಿಸುವುದೆಂದರೆ, ಆ ಶಕ್ತಿರೂಪದ ಪೂಜೆಯನ್ನು ಮಾಡುವುದಾಗಿದೆ. ಆಭರಣಗಳಿಂದ ತನ್ನಲ್ಲಿನ ಶಕ್ತಿಯನ್ನು ಪ್ರಕಟಗೊಳಿಸಿ ತನ್ನೊಂದಿಗೆ ಇತರರಿಗೂ ಅದರ ಲಾಭವನ್ನು ಮಾಡಿಕೊಡುವುದು ಅವಳ ಕಾರ್ಯವಾಗಿದೆ.

ಕಾಲ್ಗೆಜ್ಜೆ, ಕಾಲುಂಗುರ ಮತ್ತು ಮಾಸೋಳಿ (ಮೀನಿನ ಆಕಾರದ ಕಾಲುಂಗುರ) ಇವುಗಳನ್ನು ಬೆಳ್ಳಿಯಿಂದಲೇ ಏಕೆ ತಯಾರಿಸುತ್ತಾರೆ?

ರಜೋಗುಣೀ ಮತ್ತು ಚೈತನ್ಯಯುಕ್ತ ಇಚ್ಛಾಲಹರಿಗಳನ್ನು ಗ್ರಹಿಸುವ ಕ್ಷಮತೆಯು ಬೆಳ್ಳಿಯಲ್ಲಿ ಹೆಚ್ಚಿರುವುದರಿಂದ ಆಯಾಯ ಕಾರ್ಯಕ್ಕೆ ಪೂರಕವಾಗಿರುವ ಲೋಹದ ಆಭರಣಗಳನ್ನು ಆಯಾ ಅವಯವಗಳಿಗಾಗಿ ಉಪಯೋಗಿಸಲಾಗುತ್ತದೆ.

ಮೃತ್ತಿಕಾ ಪೂಜೆ, ಮಣ್ಣಿನಲ್ಲಿ ಹೊಂಡಗಳನ್ನು  ಮಾಡುವುದು, ಬೀಜಗಳ ಬಿತ್ತನೆ ಮತ್ತು ಗಿಡಗಳನ್ನು ನೆಡುವುದು

‘ಯುಗಾದಿಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತದಿಗೆಯ ಒಳಗೆ ಪೂರ್ಣಗೊಳಿಸಬೇಕು. ಅಕ್ಷಯ ತದಿಗೆಯಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು.

ಅಕ್ಷಯ ತದಿಗೆಯ ಮಹತ್ವ ಹಾಗೂ ಅದನ್ನು ಆಚರಿಸುವ ಪದ್ಧತಿ

ಪ್ರಸ್ತುತ ಲೇಖನದಲ್ಲಿ ಹೇಳಲಾದ ಅಧ್ಯಾತ್ಮಶಾಸ್ತ್ರವು, ಸರ್ವಸಾಮಾನ್ಯ ಕಾಲದಲ್ಲಿ ಪಾಲಿಸಬೇಕಾದ ಧರ್ಮದಲ್ಲಿ ಹೇಳಲಾದ ಶಾಸ್ತ್ರವಾಗಿದೆ. ಎಲ್ಲವೂ ಅನುಕೂಲಕರವಾಗಿದ್ದು ಧರ್ಮದಲ್ಲಿ ಹೇಳಿದಂತೆ ವರ್ತಿಸಬಹುದು, ಇದಕ್ಕೆ ‘ಸಂಪತ್ಕಾಲ’ ಎನ್ನಬಹುದು. ಇಲ್ಲಿ ಮಹತ್ವವಾದ ಅಂಶವೇನೆಂದರೆ, ಹಿಂದೂ ಧರ್ಮವು ಆಪತ್ಕಾಲಕ್ಕಾಗಿ ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ.

ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ ?

ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ

ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ ?

ಒಂದು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು.

ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ

ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.

ಸ್ತ್ರೀಯರಿಗೆ ಪ್ರಸನ್ನತೆ, ತೇಜ ಮತ್ತು ಸಾತ್ತ್ವಿಕತೆಯನ್ನು ನೀಡುವ ವಿವಿಧ ಆಭರಣಗಳು

‘ಕಾಲ್ಗೆಜ್ಜೆಯನಾದವು ಬ್ರಹ್ಮಾಂಡದಲ್ಲಿರುವ ಕ್ರಿಯಾಶಕ್ತಿಯನ್ನು ಆಕರ್ಷಿಸುವಂತಹದ್ದಾಗಿರುವುದರಿಂದ, ಕಾಲ್ಗೆಜ್ಜೆಗಳ ನಾದದಿಂದ ಪ್ರಕ್ಷೇಪಿತವಾಗುವ ಕ್ರಿಯೆಯ ಲಹರಿಗಳು ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ವಿರೋಧಿಸಿ ಅವುಗಳನ್ನು ವಿಭಜಿಸಿ ಅವುಗಳಲ್ಲಿರುವ ಶಕ್ತಿಯನ್ನು ಕಡಿಮೆಗೊಳಿಸುತ್ತವೆ

ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಬಹಳಷ್ಟು ಸಲ  ಆಭರಣಗಳಿಂದ ಮಾಯಾವೀ, ಅಂದರೆ ಒಳ್ಳೆಯದೆಂದು ಭಾಸವಾಗುವ ಸ್ಪಂದನಗಳು ಬರುತ್ತಿರುತ್ತವೆ. ಇದರಿಂದ ನಾವು ಮೋಸ ಹೋಗುವ ಸಾಧ್ಯತೆಯಿರುತ್ತದೆ. ಜಾಗರೂಕತೆಯ ಉಪಾಯವೆಂದು ಆಭರಣದಿಂದ ಒಳ್ಳೆಯ ಸ್ಪಂದನಗಳ ಅರಿವಾದ ಮೇಲೆಯೂ ೧೦ ನಿಮಿಷ ನಿಮ್ಮ ಕುಲದೇವಿ, ಕುಲದೇವ ಅಥವಾ ಉಪಾಸ್ಯದೇವತೆಯ ಪೈಕಿ ಯಾರಾದರೊಬ್ಬರ ನಾಮಜಪವನ್ನು ಮಾಡಿ.