ಉಂಗುರ

ಅ. ಉಪಯೋಗ

ಉಂಗುರ

೧. ಸಂರಕ್ಷಣೆ : ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ.

೨. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ. ವಿಶಿಷ್ಟ ಹರಳುಗಳ ಉಂಗುರವನ್ನು ಧರಿಸುವುದರಿಂದ ಗ್ರಹಪೀಡೆ ನಾಶವಾಗುತ್ತದೆ.

–  ಈಶ್ವರ (ಕು.ಮಧುರಾ ಭೋಸಲೆಯವರು ಈಶ್ವರ ಈ ಅಂಕಿತನಮದಿಂದ ಲೇಖನ ಬರೆಯುತ್ತರೆ, ೧೨.೧೧.೨೦೦೭, ರಾತ್ರಿ ೮.೧೫)

೨. ಸಾಧನೆಗೆ ಪೂರಕ : ಉಂಗುರದ ಮಾಧ್ಯಮದಿಂದ ಜೀವವು ಇಚ್ಛಾಶಕ್ತಿಯ ಅಧೀನವಾಗದೇ ನಿಯಂತ್ರಣದಲ್ಲಿರುತ್ತದೆ. ಉಂಗುರದ ಮಾಧ್ಯಮದಿಂದ ಜೀವಕ್ಕೆ ಪಂಚಜ್ಞಾನೇಂದ್ರಿಯಗಳ ಮೇಲೆ ನಿಯಂತ್ರಣವನ್ನಿರಿಸಲು ಸಾಧ್ಯವಾಗುತ್ತದೆ. – ಶ್ರೀಕೃಷ್ಣ (ಸೌ.ಪ್ರಾರ್ಥನಾ ಬುವಾ (ಪೂರ್ವಾಶ್ರಮದ ಕು.ಮೇಘಾ ನಕಾತೆ) ಇವರ ಮಾಧ್ಯಮದಿಂದ ೩.೯.೨೦೦೫, ರಾತ್ರಿ ೧೧.೪೦)

ಉಂಗುರವನ್ನು ಅನಾಮಿಕಾದಲ್ಲಿ ಏಕೆ ಧರಿಸಬೇಕು?

ಅ. ಉಂಗುರ ಅನಾಮಿಕಾದಲ್ಲಿ ಧರಿಸಿದಾಗ ಚೈತನ್ಯವನ್ನು ಗ್ರಹಿಸುವ ಪ್ರಮಾಣ ಅತ್ಯಧಿಕವಾಗಿರುತ್ತದೆ.

ಆ. ಉಂಗುರವನ್ನು ಪ್ರವಾಹದ ಪ್ರಾಬಲ್ಯವನ್ನು ತೋರಿಸುವ ಮತ್ತು ಆಪತತ್ತ್ವದ ದರ್ಶಕವಾಗಿರುವ ಅನಾಮಿಕಾದಲ್ಲಿ ಧರಿಸುತ್ತಾರೆ; ಏಕೆಂದರೆ ಜೀವದ ದೇಹವು ಸಹ ಪೃಥ್ವಿ ಮತ್ತು ಆಪತತ್ತ್ವಗಳ ಪ್ರಾಬಲ್ಯದಿಂದಲೇ ನಿರ್ಮಾಣವಾಗಿದ್ದರಿಂದ ಜೀವಕ್ಕೆ ಉಂಗುರದ ಪ್ರವಾಹಿತನದ ಲಾಭವು ಸಿಗಬಲ್ಲದು.

ಇ. ಜೀವದ ಮೂಲ ಪ್ರಕೃತಿಯು ಪೃಥ್ವಿ ಮತ್ತು ಆಪತತ್ತ್ವಗಳ ಮೇಲೆ ಆಧರಿಸಿದೆ, ಆದುದರಿಂದ ಆಪತತ್ತ್ವದ ಸಂಯೋಗದಿಂದ ಕಾರ್ಯವನ್ನು ಮಾಡುವ ಅನಾಮಿಕಾದಲ್ಲಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸಿದರೆ ಹೆಚ್ಚು ಲಾಭದಾಯಕವಾಗುತ್ತದೆ.

ಈ. ಆಪತತ್ತ್ವದ ಪ್ರಕ್ಷೇಪಣೆಯ ಮತ್ತು ಸಂವರ್ಧನೆಯ ಪ್ರತೀಕವಾಗಿರುವ  ಅನಾಮಿಕಾದಲ್ಲಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸುವುದು ಹೆಚ್ಚು ಲಾಭದಾಯಕವಾಗಿರುತ್ತದೆ.

ಪುರುಷರು ಬಲಗೈ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರ ಏಕೆ ಧರಿಸಬೇಕು?

ಪುರುಷರೂಪಿ ಕ್ರಿಯಾಧಾರಕತೆಯು ಸ್ವಯಂ ಕ್ರಿಯೆಯ ಪ್ರತೀಕವಾಗಿರುವುದರಿಂದ ಪುರುಷರು ಬಲಗೈಯ ನಾಡಿಯನ್ನು ಪ್ರತಿನಿಧಿಸುವ ಬಲಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ ಮತ್ತು ಸ್ತ್ರೀಯರು ಕರ್ಮಪ್ರಧಾನಸ್ವರೂಪದ ಪ್ರತೀಕವಾಗಿರುವುದರಿಂದ ಅವರು ಎಡನಾಡಿಯನ್ನು ಪ್ರತಿನಿಧಿಸುವ ಎಡಗೈಯ ಅನಾಮಿಕಾ ಬೆರಳಿನಲ್ಲಿ ಉಂಗುರವನ್ನು ಧರಿಸುತ್ತಾರೆ. ಎಡನಾಡಿಯು ತಾರಕ, ಅಂದರೆ ಕರ್ಮಪ್ರಧಾನವಾಗಿದೆ ಮತ್ತು ಬಲನಾಡಿಯು ಮಾರಕ ಅಂದರೆ ಕೃತಿಪ್ರಧಾನವಾಗಿದೆ.

– ಓರ್ವ ವಿದ್ವಾಂಸರು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ)

ಬಲಗೈಯು ಕರ್ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದಾಗಿದೆ; ಆದುದರಿಂದ ಪುರುಷರು ಬಲಗೈಯಲ್ಲಿ ಮತ್ತು ಸ್ತ್ರಿಯರು ಎಡಗೈಯಲ್ಲಿ ಉಂಗುರವನ್ನು ಧರಿಸುತ್ತಾರೆ.

೧. ಬಲಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸುವುದರಿಂದ ಪುರುಷರಲ್ಲಿರುವ ಮೂಲ ಕರ್ತವ್ಯಸ್ವರೂಪ ವಿಚಾರಕ್ಕೆ ತೇಜದ ಬಲವು ಪ್ರಾಪ್ತವಾಗಿ, ಬಲನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಇದರಿಂದ ಕಾರ್ಯವು ಕಡಿಮೆ ಸಮಯದಲ್ಲಾಗುತ್ತದೆ.

೨. ಯಾವುದೇ ಕಾರ್ಯದಲ್ಲಿ ಶಕ್ತಿಯು ಸಾಕ್ಷೀಭಾವದ ರೂಪದಲ್ಲಿ ಸಹಭಾಗಿಯಾಗುವುದರಿಂದ ಅಪ್ರಕಟಕಾರ್ಯದ ದರ್ಶಕವೆಂದು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸಬೇಕೆಂದು ಹೇಳಲಾಗಿದೆ.

– ಓರ್ವ ವಿದ್ವಾಂಸರು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ಆಷಾಢ ಶುಕ್ಲ ಏಕಾದಶಿ ಮತ್ತು ದ್ವಾದಶಿ, ಕಲಿಯುಗ ವರ್ಷ ೫೧೧೦ ೧೪.೭.೨೦೦೮)