ಅಕ್ಷಯ ತದಿಗೆಗೆ ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ಮನವಿ !

ಅರ್ಪಣೆ

‘೩.೫.೨೦೨೨ ರಂದು ‘ಅಕ್ಷಯ ತದಿಗೆ’ ಇದೆ. ‘ಅಕ್ಷಯ ತದಿಗೆ’ ಎಂದರೆ ಹಿಂದೂ ಧರ್ಮದಲ್ಲಿ ಹೇಳಿರುವ ಮೂರುವರೆ ಶುಭಮುಹೂರ್ತಗಳಲ್ಲೊಂದಾಗಿದೆ. ಈ ದಿನದ ಪ್ರತಿಯೊಂದು ಘಳಿಗೆಯು ಶುಭಮುಹೂರ್ತವೇ ಇರುತ್ತದೆ. ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕ ಜನರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ’.

೧. ‘ಸತ್ಪಾತ್ರೆ ದಾನ’ದ ಮಹತ್ವ !

‘ಸತ್ಪಾತ್ರೆ ದಾನ ಮಾಡುವುದು ಪ್ರತಿಯೊಬ್ಬ ಮನುಷ್ಯನ ಪರಮ ಕರ್ತವ್ಯವಾಗಿದೆ,’ ಎಂದು ಹಿಂದೂ ಧರ್ಮವು ಹೇಳುತ್ತದೆ. ‘ಸತ್ಪಾತ್ರೆ ದಾನ’ ಎಂದರೆ ಸತ್‌ನ ಕಾರ್ಯಾರ್ಥವಾಗಿ ದಾನ ಧರ್ಮವನ್ನು ಮಾಡುವುದು ! ದಾನವನ್ನು ಮಾಡುವುದರಿಂದ ಮನುಷ್ಯನ ಪುಣ್ಯಬಲ ಹೆಚ್ಚಾಗುತ್ತದೆ. ಆದರೆ ಅದೇ ‘ಸತ್ಪಾತ್ರೆ ದಾನ’ವನ್ನು ಮಾಡುವುದರಿಂದ ಪುಣ್ಯಸಂಚಯದೊಂದಿಗೆ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವೂ ಆಗುತ್ತದೆ. ಅಕ್ಷಯ ತದಿಗೆಯಂದು ಮುಂದಿನಂತೆ ‘ಸತ್ಪಾತ್ರೆ ದಾನ’ವನ್ನು ಮಾಡಬಹುದು.

೨. ದಾನದ ವಿಧಗಳು

೨ ಅ. ಧನದಾನ : ಸದ್ಯ ಧರ್ಮಗ್ಲಾನಿಯ ಕಾಲವಾಗಿದೆ. ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂ ಸಮಾಜವು ಅಧರ್ಮಾಚರಣಿಯಾಗಿದೆ. ಸೂಕ್ತ ಧರ್ಮಶಿಕ್ಷಣವನ್ನು ಕೊಡದಿದ್ದರಿಂದ ಹಿಂದೂಗಳಲ್ಲಿ ಧರ್ಮಾಭಿಮಾನವು ಇಲ್ಲವಾಗಿದೆ. ಧರ್ಮದ ಸ್ಥಿತಿ ಈ ರೀತಿ ಹದಗೆಟ್ಟಿರುವಾಗ ಧರ್ಮದ ಪುನರುತ್ಥಾನದ ಕಾರ್ಯ ಮಾಡುವುದು ಕಾಲಾನುಸಾರ ತುಂಬಾ ಅಗತ್ಯವಾಗಿದೆ. ಆದುದರಿಂದ ಧರ್ಮಪ್ರಸಾರ ಮಾಡುವ ಸಂತರು, ಹಾಗೆಯೇ ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಕಾರ್ಯ ಮಾಡುವ ಸಂಸ್ಥೆ ಅಥವಾ ಸಂಘಟನೆ ಇವುಗಳ ಕಾರ್ಯಕ್ಕಾಗಿ ದಾನ ಮಾಡುವುದು ಕಾಲಾನುಸಾರ ಸರ್ವಶ್ರೇಷ್ಠ ದಾನವಾಗಿದೆ. ಸನಾತನ ಸಂಸ್ಥೆಯು ಧರ್ಮಜಾಗೃತಿಯ ಇದೇ ಕಾರ್ಯ ಮಾಡುತ್ತಿದೆ. ದಾನಿಗಳು ಇಂತಹ ಸಂಸ್ಥೆ ಅಥವಾ ಸಂಘಟನೆಗಳಿಗೆ ಮಾಡಿದ ದಾನದ (ಅರ್ಪಣೆಯ) ವಿನಿಯೋಗ ಧರ್ಮದ ಪುನರುತ್ಥಾನಕ್ಕಾಗಿಯೇ ಆಗಲಿದೆ.

೨ ಆ. ಜ್ಞಾನದಾನ : ಸನಾತನದ ಬಹುವಿಧ ಮತ್ತು ಸರ್ವಾಂಗಸ್ಪರ್ಶಿ ಗ್ರಂಥ ಸಂಪತ್ತು ಅಂದರೆ ಚಿರಂತನ ಜ್ಞಾನದ ಅಮೂಲ್ಯ ಭಂಡಾರವಾಗಿದೆ. ಈ ಗ್ರಂಥಗಳು ಸಹಜ ಸುಲಭ ಭಾಷೆಗಳಲ್ಲಿ ವಾಚಕರಿಗೆ ಅಮೂಲ್ಯ ಜ್ಞಾನ ನೀಡುತ್ತವೆ, ಹಾಗೆಯೇ ಧರ್ಮದ ಬಗ್ಗೆ ಶ್ರದ್ಧೆಯನ್ನೂ ಹೆಚ್ಚಿಸುತ್ತವೆ. ಧರ್ಮದ ಶಾಶ್ವತ ಶಿಕ್ಷಣ ನೀಡುವ ಈ ಗ್ರಂಥ ಸಂಪತ್ತು ಅಂದರೆ ಜ್ಞಾನದಾನ ಮಾಡುವ ಸರ್ವೋತ್ತಮ ಮಾಧ್ಯಮ ಎಂದು ಹೇಳಬಹುದು. ಆದುದರಿಂದ ಅಕ್ಷಯ ತದಿಗೆಯಂದು ಇಂತಹ ಗ್ರಂಥಗಳ ಮೂಲಕ ಜ್ಞಾನದಾನ ಮಾಡುವ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನೂ ಮಾಡಿಕೊಳ್ಳಬೇಕು. ಗ್ರಂಥಗಳ ಮೂಲಕ ಅಧ್ಯಾತ್ಮ ಪ್ರಸಾರ ಮಾಡಲು ಈ ಗ್ರಂಥಗಳನ್ನು ಆಪ್ತ ಸಂಬಂಧಿಕರು, ಶಾಲೆ ಮಹಾವಿದ್ಯಾಲಯಗಳು ಇವುಗಳಲ್ಲಿನ ಗ್ರಂಥಾಲಯಗಳು ಹಾಗೆಯೇ ಸಾರ್ವಜನಿಕ ವಾಚನಾಲಯಗಳಿಗೆ ಕೊಡಬಹುದು. ಅಕ್ಷಯ ತದಿಗೆಯ ನಿಮಿತ್ತದಿಂದ ದಾನ ಮಾಡಲು ಬಯಸುವ ದಾನಿಗಳು ತಮ್ಮ ಮಾಹಿತಿ ತಿಳಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ  ೭೦೫೮೮೮೫೬೧೦

ವಿ-ಅಂಚೆ ವಿಳಾಸ : [email protected]

ಅಂಚೆಯ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. – ೪೦೩೪೦೧

https://www.sanatan.org/en/donate ಇಲ್ಲಿಯೂ ದಾನ (ಅರ್ಪಣೆ) ಮಾಡುವ ಸೌಲಭ್ಯ ಇದೆ.’

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೩೧.೩.೨೦೨೨)