ಕರ್ಣಾಭರಣಗಳನ್ನು ಏಕೆ ಧರಿಸಬೇಕು?

೧. ಕರ್ಣಾಭರಣಗಳಿಂದ ಪ್ರಕ್ಷೇಪಿಸಲ್ಪಡುವ ಆನಂದದ ಲಹರಿಗಳಿಂದ ಮನಸ್ಸು ಉತ್ಸಾಹಭರಿತ ಮತ್ತು ವೃತ್ತಿಯು ಸಾತ್ತ್ವಿಕವಾಗುತ್ತದೆ.

೨. ಕಿವಿಗಳ ಸುತ್ತಲೂ ಚೈತನ್ಯದ ರಕ್ಷಣಾಕವಚವು ನಿರ್ಮಾಣವಾಗಿ ಕೆಟ್ಟ ಶಕ್ತಿಗಳಿಂದ ಕಿವಿ ಮತ್ತು ಶ್ರವಣ ವ್ಯವಸ್ಥೆಯ ರಕ್ಷಣೆಯಾಗುತ್ತದೆ.

೩. ಕಿವಿಗಳ ಹಾಲೆಗಳ ಮೇಲೆ ಒತ್ತಡವುಂಟಾಗಿ ಸ್ತ್ರೀಯರಿಗೆ ಬಿಂದುಒತ್ತಡದ (ಆಕ್ಯುಪ್ರೆಶರ್) ಲಾಭವೂ ಸಿಗುತ್ತದೆ.

ಅಶಾಸ್ತ್ರೀಯ ಕೃತಿಗಳನ್ನು ಮಾಡಬೇಡಿ : ಕಿವಿಯ ಹಾಲೆಗಳನ್ನು ಬಿಟ್ಟು ಕಿವಿಯ ಇನ್ನಿತರ ಕಡೆಗಳಲ್ಲಿ ಚುಚ್ಚಿಸಿಕೊಂಡು ಆಭರಣಗಳನ್ನು ಧರಿಸಬೇಡಿ !

ಸ್ತ್ರೀಯರು ಕಾಲ್ಗೆಜ್ಜೆಗಳನ್ನು ಏಕೆ ಧರಿಸಬೇಕು?

೧. ಕಾಲ್ಗೆಜ್ಜೆಗಳಲ್ಲಿನ ಗೆಜ್ಜೆಗಳ ಸಾತ್ತ್ವಿಕ ನಾದಲಹರಿಗಳ ಕಡೆಗೆ ಈಶ್ವರೀ ತತ್ತ್ವವು ಆಕರ್ಷಿತವಾಗುತ್ತದೆ. ಇದರಿಂದ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಸ್ತ್ರೀಯರ ರಕ್ಷಣೆ ಯಾಗುತ್ತದೆ. ಕಾಲ್ಗೆಜ್ಜೆಗಳ ನಾದದಿಂದ ವಾತಾವರಣವೂ ಶುದ್ಧವಾಗುತ್ತದೆ.

೨. ಕಾರಣವಿಲ್ಲದೇ ಪಾದಗಳು ಊದಿಕೊಳ್ಳುವುದು, ಹಿಮ್ಮಡಿಗಳು ನೋಯುವುದು ಮುಂತಾದ ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ನಿರ್ಮಾಣವಾಗುತ್ತವೆ. ಆದುದರಿಂದ ಪ್ರತಿದಿನ ಕಾಲ್ಗೆಜ್ಜೆಗಳನ್ನು ಧರಿಸಿದರೆ ಇಂತಹ ಸಮಸ್ಯೆಗಳು ದೂರವಾಗಲು ಸಹಾಯವಾಗುತ್ತದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.