ಮೂರೂವರೆ ಮುಹೂರ್ತಗಳಲ್ಲಿ ಒಂದು ಮುಹೂರ್ತವಾದ ಮತ್ತು ಸುಖ-ಸಮೃದ್ಧಿ ಪ್ರದಾನಿಸುವ ಅಕ್ಷಯ ತದಿಗೆ

ಅಸ್ಯಾಂ ತಿಥೌ ಕ್ಷಯ ಮುಪೈತಿ ಹುತಂ ನ ದತ್ತಂ

ತೇನಾಕ್ಷಯೇತಿ ಕಥಿತಾ ಮುನಿಭಿಸ್ತೃತೀಯಾ

ಉದ್ದಿಶ್ಯ ದೈವತಪಿತೃಂಕ್ರಿಯತೇ ಮನುಷ್ಯೈಃ

ತಚ್ಚಾಕ್ಷಯಂ ಭವತಿ ಭಾರತ ಸರ್ವಮೇವ  – ಮದನರತ್ನ

ಅರ್ಥ : (ಶ್ರೀಕೃಷ್ಣ ಹೇಳುತ್ತಾನೆ) ಹೇ ಯುಧಿಷ್ಠಿರಾ, ಈ ತಿಥಿಯಂದು ನೀಡಿದ ದಾನ ಹಾಗೂ ಮಾಡಲಾದ ಹವನವು ಕ್ಷಯ ವಾಗುವುದಿಲ್ಲ. ಆದುದರಿಂದ ಈ ದಿನಕ್ಕೆ ಮುನಿಗಳು ‘ಅಕ್ಷಯ ತೃತೀಯಾ ಎಂದು ಹೇಳಿದ್ದಾರೆ. ದೇವತೆ ಹಾಗೂ ಪಿತೃಗಳಿಗಾಗಿ ಈ ತಿಥಿಯಂದು ಯಾವ ಕರ್ಮವನ್ನು ಮಾಡಲಾಗುತ್ತದೆಯೋ, ಅದು ಅಕ್ಷಯ ಅಂದರೆ ಅವಿನಾಶಿಯಾಗುತ್ತದೆ.

೧ ಅ. ಅಕ್ಷಯ ತೃತೀಯಾ ‘ಮೂರೂವರೆ ಮುಹೂರ್ತಗಳಲ್ಲಿನ ಒಂದು ಮುಹೂರ್ತ’

‘ಅಕ್ಷಯ ತೃತೀಯಾ ಮೂರೂವರೇ ಮುಹೂರ್ತಗಳ ಪೈಕಿ ಒಂದಾಗಿದೆ. ಈ ದಿನವೇ ತ್ರೇತಾಯುಗದ ಪ್ರಾರಂಭವಾಯಿತು. ಈ ದಿನದಿಂದ ಒಂದು ಕಲಹ ಕಾಲದ ಅಂತ್ಯ ಮತ್ತು ಎರಡನೇ ಯುಗದ ಅಂದರೆ ಸತ್ಯಯುಗದ ಆರಂಭ ಇಂತಹ ಸಂಧಿಯನ್ನು ಸಾಧಿಸಿದ್ದರಿಂದ ಅಕ್ಷಯ ತೃತೀಯಾದ ಸಂಪೂರ್ಣ ದಿನಕ್ಕೆ ‘ಮುಹೂರ್ತ’ವೆನ್ನುತ್ತಾರೆ. ಮುಹೂರ್ತವು ಕೇವಲ ಒಂದು ಕ್ಷಣದಷ್ಟು ಕಾಲ ಸಾಧಿಸಿದ್ದರೂ, ಸಂಧಿಕಾಲ ದಿಂದಾಗಿ ಅದರ ಪರಿಣಾಮ ೨೪ ಗಂಟೆಗಳ ವರೆಗೆ ಕಾರ್ಯನಿರತವಿರುವುದರಿಂದ ಅದು ಸಂಪೂರ್ಣ ದಿನವನ್ನು ಶುಭವೆಂದು ಪರಿಗಣಿಸ ಲಾಗುತ್ತದೆ; ಆದುದರಿಂದ (ಅಕ್ಷಯ) ತೃತೀಯಾ ಈ ದಿನಕ್ಕೆ ‘ಮೂರೂವರೆ ಮುಹೂರ್ತದಲ್ಲಿನ ಒಂದು ಮುಹೂರ್ತ’ ವೆಂದು ತಿಳಿಯಲಾಗುತ್ತದೆ.

೧ ಆ. ಅವತಾರ ತಾಳುವುದು

ಅಕ್ಷಯ (ಅಕ್ಷಯ) ತೃತೀಯಾ ಈ ತಿಥಿಯಂದೇ ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಯಿತು. ಇದರಿಂದ ಅಕ್ಷಯ ತೃತೀಯಾದ ಮಹತ್ವ ತಿಳಿಯುತ್ತದೆ.

೧ ಇ. ಧಾರ್ಮಿಕ ಕೃತಿಗಳಿಂದ ಹೆಚ್ಚು ಲಾಭ

‘ಈ ತಿಥಿಯಂದು ವಿಷ್ಣುಪೂಜೆ, ಜಪ, ಹೋಮ ಹವನ, ದಾನ ಮುಂತಾದ ಧಾರ್ಮಿಕ ಕೃತಿಗಳನ್ನು ಮಾಡಿದರೆ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ತಿಳಿಯಲಾಗುತ್ತದೆ.