ಕುಂಕುಮ :
ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿ ಜಾಗೃತವಾದರೆ ಆ ಶಕ್ತಿಯಲ್ಲಿಯೂ ಕಾರ್ಯಾನುರೂಪ ತಾರಕ ಅಥವಾ ಮಾರಕ ದೇವಿತತ್ತ್ವ ಆಕರ್ಷಿಸುವ ಪ್ರಚಂಡ ಕ್ಷಮತೆ ನಿರ್ಮಾಣವಾಗುತ್ತದೆ ದೇವಿಯ ಕೃಪಾಶೀರ್ವಾದ ದೊರೆಯಲು ಸ್ತ್ರೀಯ ಭ್ರೂಮಧ್ಯದಲ್ಲಿ ಅಥವಾ ಇನ್ನೋರ್ವ ಸ್ತ್ರೀ ಕುಂಕುಮ ಹಚ್ಚುವುದರಿಂದ ಸ್ತ್ರೀಯಲ್ಲಿರುವ ತಾರಕ ಶಕ್ತಿ ತತ್ತ್ವದ ಸ್ಪಂದನ ಜಾಗೃತವಾಗಿ ವಾತಾವರಣದಲ್ಲಿರುವ ಶಕ್ತಿತತ್ತ್ವದ ಪಾವಿತ್ರ್ಯ ಆ ಸ್ತ್ರೀಯಲ್ಲಿ ಆಕರ್ಷಿತವಾಗುತ್ತದೆ.
ಮಂಗಳಸೂತ್ರ :
‘೨ ಬಟ್ಟಲುಗಳ ರಚನೆಯಿಂದಾಗಿ ಮಂಗಳಸೂತ್ರದ ಹಿಂದಿನ ಟೊಳ್ಳಿನಲ್ಲಿ ನಿರ್ಮಾಣವಾಗುವ ಆಕರ್ಷಣಾಲಹರಿಯಿಂದಾಗಿ ಇತರ ಯಾವುದೇ ಅಲಂಕಾರದ ತುಲನೆಯಲ್ಲಿ ಮಂಗಳಸೂತ್ರದಲ್ಲಿ ಈಶ್ವರೀತತ್ತ್ವ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ’.
ಕಾಲುಂಗುರ :
‘ಕಾಲುಂಗುರದ ಅಲಂಕಾರ ದಿಂದಾಗಿ ಸ್ತ್ರೀಗೆ ಅವಳ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮದ ಬಗ್ಗೆ ಸತತ ಅರಿವಿರುತ್ತದೆ ಆದ್ದರಿಂದ ಸ್ತ್ರೀಯು ಸ್ವೇಚ್ಛಾಚಾರ ಮಾಡದೇ ಬಂಧನದಲ್ಲಿ ಸಿಲುಕಿರುತ್ತಾಳೆ ಮತ್ತು ಧರ್ಮಪಾಲನೆ ಮಾಡುತ್ತಾಳೆ’. (ಆಧಾರ : ಸನಾತನದ ಗ್ರಂಥ ಸ್ತ್ರೀಯರ ಆಭರಣಗಳ ಶಾಸ್ತ್ರ)
ಬಳೆ :
ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆ ಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿಯಲಾಗುತ್ತದೆ. ‘ಹಸಿರು ಬಳೆ ತೊಡುವುದು ಸುವಾಸಿನಿಯರ ಪತಿವ್ರತಾ ದರ್ಶಕ ಪ್ರಕಟ ಶಕ್ತಿರೂಪದ ಸಾಲಂಕೃತ ಪೂಜೆ ಮಾಡುವ ಪ್ರತೀಕವಾಗಿದೆ. ಬಳೆಯಲ್ಲಿ ಕಾರ್ಯನಿರತವಿರುವ ದೇವಿತತ್ತ್ವದ ಶಕ್ತಿಲಹರಿ ಮಣಿಗಂಟಿನಲ್ಲಿ ಗ್ರಹಣವಾಗಿ ಸಂಪೂರ್ಣ ಕೈಯಲ್ಲಿ ಹರಡುವುದರಿಂದ ಕೈಗೆ ಕಾರ್ಯ ಮಾಡುವ ಶಕ್ತಿ ದೊರೆಯುತ್ತದೆ. ವಿಧವಾಸ್ತ್ರೀಯರು ಬಳೆಗಳನ್ನು ಧರಿಸುವುದು ನಿಷಿದ್ಧವಾಗಿದೆ.
ಅಕ್ಷಯ ತೃತೀಯಾಗೆ ಅನೇಕರು ಹೊಸ ಕಾರ್ಯಾಲಯ ಇತ್ಯಾದಿ ಉದ್ಘಾಟನೆ ಮಾಡುತ್ತಾರೆ. ಆಗ ರಿಬ್ಬನ್ ಕತ್ತರಿಸದೇ ತೆಂಗಿನಕಾಯಿ ಒಡೆದು ಉದ್ಘಾಟಿಸಿ. ರಿಬ್ಬನ್ ಕತ್ತರಿಸಿ ಉದ್ಘಾಟಿಸುವುದರಿಂದ ವಾಸ್ತು ತೊಂದರೆದಾಯಕವಾಗುತ್ತದೆ. ತೆಂಗಿನಕಾಯಿಯನ್ನು ಒಡೆದು ಉದ್ಘಾಟನೆ ಮಾಡುವುದರಿಂದ ವಾಸ್ತು ಶುದ್ಧವಾಗುತ್ತದೆ. |