ಆಭರಣಗಳ ಶುದ್ಧಿಕರಣವನ್ನು ಹೇಗೆ ಮಾಡಬೇಕು ಮತ್ತು ಅದರ ಶುದ್ಧಿಕರಣ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಲಾಭಗಳೇನು ?

ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳ ಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.

‘ಆರನಮುಳಾ ಕಣ್ಣಾಡಿ ಎಂದರೆ ‘ದೇವರ ಮುಖವನ್ನು ನೋಡುವ ಸಲುವಾಗಿ ಮಾಡಿದ ವೈಶಿಷ್ಟ್ಯ ಪೂರ್ಣ ಕನ್ನಡಿ !

ದೇವಸ್ಥಾನಗಳಲ್ಲಿ ಮಾಡುವ ದೇವರ ವಿವಿಧ ಪೂಜಾವಿಧಿಗಳಲ್ಲಿ ‘ದರ್ಪಣ ಪೂಜಾವಿಧಿಯಲ್ಲಿ ದೇವರಿಗೆ ಕನ್ನಡಿಯನ್ನು ತೋರಿಸುತ್ತಾರೆ ಅಥವಾ ಕನ್ನಡಿಯಿಂದ ಸೂರ್ಯನ ಕಿರಣವನ್ನು ದೇವರ ಕಡೆಗೆ ಪರಿವರ್ತಿಸುತ್ತಾರೆ. ಅದಕ್ಕಾಗಿ ಕೇರಳದಲ್ಲಿ ಧಾತುವಿನಿಂದ ಮಾಡಿದ ವೈಶಿಷ್ಟ್ಯಪೂರ್ಣ ಕನ್ನಡಿಯನ್ನು ಉಪಯೋಗಿಸುವ ಪರಂಪರೆಯಿದೆ.