ಕಾಲುಂಗುರದ ಬಗ್ಗೆ ನಿಮಗಿವು ತಿಳಿದಿವೆಯೇ ?

ಕಾಲುಂಗುರ

ಅ. ಕಾಲುಂಗುರಗಳನ್ನು ಸ್ತ್ರೀಯರು ಸುಮಾರು ೮ ಸಾವಿರ ವರ್ಷಗಳಿಂದ ಧರಿಸುತ್ತಿದ್ದಾರೆ.

ಆ. ಕಾಲುಂಗುರಗಳು ಕಾಲುಗಳಲ್ಲಿ ಧರಿಸಲು ನಿರ್ಮಿಸಲಾದ ಮೊದಲನೆಯ ಆಭರಣವಾಗಿವೆ. ಅನಂತರ ಕಾಲುಗಳಲ್ಲಿ ಧರಿಸುವ ಇತರ ಆಭರಣಗಳ ನಿರ್ಮಿತಿಯಾಯಿತು.

ಇ. ಕಾಲುಂಗುರಗಳನ್ನು ಧರಿಸುವುದರಿಂದ ಪೂಜೆ ಮತ್ತು ಧಾರ್ಮಿಕ ವಿಧಿಗಳ ಸಮಯದಲ್ಲಿ ಹೆಚ್ಚೆಚ್ಚು ಸಾತ್ತ್ವಿಕತೆ ಆಕರ್ಷಿಸುವುದರಿಂದ ಅವು ಇನ್ನೂ ಸಾತ್ತ್ವಿಕವಾಗುತ್ತವೆ.

ಈ. ಕಾಲುಂಗುರಗಳನ್ನು ಕಾಲಿನ ಹೆಬ್ಬೆರಳಿನ ಹತ್ತಿರದ ಬೆರಳಿಗೆ ಹಾಕುವುದು ಯೋಗ್ಯವಾಗಿದೆ. ಈ ಬೆರಳಿಗೆ ಕಾಲುಂಗುರವನ್ನು ಹಾಕುವುದರಿಂದ ಕಾಲುಗಳಲ್ಲಿ ಹೆಚ್ಚು ಸಾತ್ತ್ವಿಕತೆ ನಿರ್ಮಾಣವಾಗುತ್ತದೆ. ಹಾಗೆಯೇ ಅಲ್ಲಿ ಒಳ್ಳೆಯ ಶಕ್ತಿಯು ಆಕರ್ಷಿತವಾಗಿ ಅದು ಭೌತಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯನಿರತವಾಗುತ್ತದೆ. ಹಾಗೆಯೇ ಒಳ್ಳೆಯ ಶಕ್ತಿಯು ದೇಹದಲ್ಲಿನ ಚಕ್ರಗಳ ಕಡೆಗೆ ಪ್ರವಹಿಸುವುದರಿಂದ ಸ್ತ್ರೀಯರ ದೇಹದ ಶುದ್ಧಿಯೂ ಆಗುತ್ತದೆ.

ಉ. ‘ಕಾಲುಗಳಲ್ಲಿ ಕಾಲುಂಗುರಗಳನ್ನು ಧರಿಸಿದ ಸ್ತ್ರೀಯರು ನಡೆದಾಡುವಾಗ ಆ ಕಾಲುಂಗುರಗಳಿಂದ ತಾರಕ ಶಕ್ತಿಯ ಕಣಗಳು ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾತಾವರಣದಲ್ಲಿನ ರಜ-ತಮದ ಉಚ್ಚಾಟನೆಯಾಗುತ್ತದೆ.’

– (ಪೂ.) ಸೌ. ಯೋಯಾ ವಾಲೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ಕಾರ್ತಿಕ ಶು.೧೪, ಕಲಿಯುಗ ವರ್ಷ ೫೧೧೨, (೨೦.೧೧.೨೦೧೦)