ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
‘ನಾಮಜಪ, ಸತ್ಸೇವೆಗಳಂತಹ ಆಧ್ಯಾತ್ಮಿಕ ಕೃತಿಗಳಿಂದ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯವಾಗುವುದು, ತನು-ಮನ-ಧನಗಳ ತ್ಯಾಗ, ಇವುಗಳಂತಹ ಲಾಭಗಳಾಗುತ್ತವೆ. ಇದರಿಂದ ‘ಈಶ್ವರಪ್ರಾಪ್ತಿ’ ಮಾಡಿಕೊಳ್ಳುವುದು’ ಎಂಬ ಮಾನವ ಜನ್ಮದ ಮೂಲ ಉದ್ದೇಶವನ್ನು ಸಾಧಿಸಲು ಸಹಾಯವಾಗುತ್ತದೆ. ಇತ್ತೀಚಿನ ಶಿಕ್ಷಣದಲ್ಲಿ ಇಂತಹ ಯಾವ ಕೃತಿಗಳನ್ನೂ ಕಲಿಸಲಾಗುತ್ತಿಲ್ಲ. ಯಾವುದನ್ನು ಕಲಿಸಲಾಗುತ್ತಿದೆಯೋ, ಅದರಿಂದ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯವೇ ಇಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಶಾಲಾ ಶಿಕ್ಷಣದಲ್ಲಿ ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಅವಶ್ಯಕ ಕೃತಿಗಳನ್ನು ಕಲಿಸಲಾಗುತ್ತಿಲ್ಲ.’
ಹಿಂದೂಗಳೇ ಇದನ್ನು ಗಮನದಲ್ಲಿಡಿ !
ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ರಾಜಕಾರಣಿಗಳ ಬಗ್ಗೆ ಅವಾಚ್ಯ ಪದಗಳಲ್ಲಿ ಮಾತನಾಡುವಂತಿಲ್ಲ; ಆದರೆ ದೇವತೆಗಳ ವಿಷಯದಲ್ಲಿ ಮಾತನಾಡುತ್ತಾರೆ. ನಾವು ಇದನ್ನು ಬದಲಾಯಿಸಬೇಕಾಗಿದೆ !
ಪಾರತಂತ್ರ್ಯದ ಲಜ್ಜಾಸ್ಪದ ಇತಿಹಾಸವನ್ನು ಅಳಿಸಿ !
‘ಹಿಂದೂಗಳೇ, ಕಳೆದ ೯೦೦ ವರ್ಷಗಳ ಪಾರತಂತ್ರ್ಯದ ಲಜ್ಜಾಸ್ಪದ ಇತಿಹಾಸವನ್ನು ಅಳಿಸಿ ಹಾಕಲು ಈಗ ಜಾಗೃತರಾಗಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ