ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯೆಂದು ಪತಂಜಲಿಯ ‘ಕೊರೊನಿಲ್’ಗೆ ಆಯುಷ್ ಸಚಿವಾಲಯದಿಂದ ಮಾನ್ಯತೆ

ಕೊನೆಗೂ ಯೋಗಋಷಿ ರಾಮದೇವ ಬಾಬಾರವರ ‘ಪತಂಜಲಿ ಯೋಗಪೀಠ’ದಿಂದ ತಯಾರಿಸಲಾದ ‘ಕೊರೊನಿಲ್’ಗೆ ಕೇಂದ್ರ ಸರಕಾರದಿಂದ ಮಾನ್ಯತೆ ಸಿಕ್ಕಿದೆ. ‘ಈ ಔಷಧಿಯನ್ನು ಕೊರೋನಾ ಪೀಡಿತರಿಗೆ ಗುಣಮುಖರನ್ನಾಗಿಸುತ್ತದೆ ಎಂದು ಮಾರಾಟ ಮಾಡದೇ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯೆಂದು ಮಾರಾಟ ಮಾಡಬಹುದು’,

ಬಳ್ಳಾರಿಯಲ್ಲಿ ಕೊರೋನಾದಿಂದ ಮೃತಪಟ್ಟ ೮ ರೋಗಿಗಳ ಶವವನ್ನು ಒಂದೇ ಗುಂಡಿಯಲ್ಲಿ ಹಾಕಲಾಯಿತು

ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಮೃತದೇಹವನ್ನು ಈ ರೀತಿಯಲ್ಲಿ ಎಸೆಯುವುದು ಅಮಾನವೀಯ ಹಾಗೂ ದುಃಖದಾಯಕವಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೊಂದು ಧರ್ಮವಿಲ್ಲ, ಎಂಬುದು ಆರೋಗ್ಯ ಕಾರ್ಯಕರ್ತರು ಗಮನದಲ್ಲಿಡಬೇಕು. ಇದರಿಂದಾಗಿ ಇಂತಹವರ ಅಂತಿಮಸಂಸ್ಕಾರವನ್ನು ಗೌರವದಿಂದ ಮಾಡಬೇಕು’ ಎಂದು ಹೇಳಿದ್ದಾರೆ.

ಚೀನಾದಿಂದ ೨ ದಿನಗಳ ಹಿಂದೆಯೇ ಭಾರತೀಯ ದಿನಪತ್ರಿಕೆ ಹಾಗೂ ವಾರ್ತಾವಾಹಿನಿಗಳ ಮೇಲೆ ನಿರ್ಬಂಧ

ಭಾರತವು ಚೀನಾದ ೫೯ ‘ಆಪ್ಸ್’ಗಳನ್ನು ನಿಷೇಧಿಸುವ ೨ ದಿನಗಳ ಮೊದಲೇ ಚೀನಾವು ಭಾರತದ ದಿನಪತ್ರಿಕೆ ಹಾಗೂ ವಾರ್ತಾವಾಹಿನಿಯ ಜಾಲತಾಣವನ್ನು ನಿಷೇಧಿಸಿದೆ. ಆದ್ದರಿಂದ ಚೀನಾದಲ್ಲಿ ಈ ಜಾಲತಾಣಗಳನ್ನು ನೋಡಲು ಸಾಧ್ಯವಿಲ್ಲ. ಭಾರತೀಯ ವಾರ್ತಾವಾಹಿನಿಯನ್ನು ನೋಡಲು ಚೀನಾದಲ್ಲಿ ‘ಐ.ಪಿ. ಟಿವಿ’ಯನ್ನು ಉಪಯೋಗಿಸಲಾಗುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿಡಿಯೊ ಕಾನ್ಫರೆನ್ಸಿಂಗ್’ ಮೂಲಕ ಅಲ್ಲ, ಅಯೋಧ್ಯೆಗೆ ಬಂದು ರಾಮಮಂದಿರದ ಭೂಮಿ ಪೂಜೆಯನ್ನು ಮಾಡಬೇಕು ! – ಸಾಧು-ಸಂತರ ಬೇಡಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿಡಿಯೊ ಕಾನ್ಫರೆನ್ಸಿಂಗ್’ ಮೂಲಕ ಅಲ್ಲ, ಅಯೋಧ್ಯೆಗೆ ಬಂದು ರಾಮಮಂದಿರದ ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನು ಮಾಡಬೇಕು, ಎಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ಹಾಗೂ ಸಾಧು-ಸಂತರು ಒತ್ತಾಯಿಸಿದ್ದಾರೆ.

‘ಚೀನಾ ಸಂಸ್ಥೆಯಿಂದ ಪಿ.ಎಮ್. ಕೇರ್ ಫಂಡ್’ಗಾಗಿ ನೀಡಿದ ನಿಧಿಯನ್ನು ಕೇಂದ್ರ ಸರಕಾರವು ಹಿಂದಿರುಗಿಸಬೇಕು !’ (ಅಂತೆ) – ಕಾಂಗ್ರೆಸ್ ಆಡಳಿತವಿರುವ ಪಂಜಾಬನ ಮುಖ್ಯಮಂತ್ರಿ ಅಮರಿಂದರ ಸಿಂಗ್ ಆಗ್ರಹ

ಗಡಿರೇಖೆಯ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಯಿಂದ ‘ಪಿ.ಎಮ್. ಕೇರ್ ಫಂಡ್’ಗಾಗಿ ಪಡೆದ ನಿಧಿಯನ್ನು ಹಿಂದಿರುಗಿಸಬೇಕು, ಎಂದು ಪಂಜಾಬ್‌ನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇವರು ಭಾರತವು ಚೀನಾದ ೫೯ ‘ಆಪ್ಸ’ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ವಿದೇಶಿ ಮಹಿಳೆಯ ಹೊಟ್ಟೆಯಿಂದ ಹುಟ್ಟಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ ! – ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕುರರಿಂದ ರಾಹುಲ್ ಗಾಂಧಿಯ ಮೇಲೆ ಟೀಕೆ

ವಿದೇಶಿ ಮಹಿಳೆಯ ಹೊಟ್ಟೆಯಿಂದ ಹುಟ್ಟಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯರು ‘ಕೇವಲ ಭೂಮಿ ಪುತ್ರರೇ ಸ್ವಂತ ಮಾತೃಭೂಮಿಯ ರಕ್ಷಣೆ ಮಾಡಲು ಸಾಧ್ಯ’, ಎಂದು ಹೇಳಿದ್ದಾರೆ ಎಂಬ ಮಾತುಗಳಲ್ಲಿ ಭಾಜಪದ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕುರವರು ರಾಹುಲ್ ಗಾಂಧಿಯ ಹೆಸರನ್ನು ಹೇಳದೇ ಅವರನ್ನು ಟೀಕಿಸಿದ್ದಾರೆ.

ಪಾಕಿಸ್ತಾನದ ಕರಾಚಿಯ ‘ಸ್ಟಾಕ್ ಎಕ್ಸೆಂಜ್’ ಮೇಲೆ ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯಿಂದ ದಾಳಿ

‘ಸ್ಟಾಕ್ ಎಕ್ಸೆಂಜ್’ ಮೇಲೆ (‘ಶೇರ್ ಮಾರುಕಟ್ಟೆ’ ಮೇಲೆ) ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯ ಸೈನಿಕರು ಮಾಡಿದ ದಾಳಿಯಲ್ಲಿ ಓರ್ವ ಪೊಲೀಸ್ ಉಪನಿರೀಕ್ಷಕರ ಸಹಿತ ೫ ಭದ್ರತಾರಕ್ಷಕರು ಮೃತಪಟ್ಟಿದ್ದು ದಾಳಿ ಮಾಡಿದ ೪ ಬಲುಚಿ ಸೈನಿಕರು ಹತರಾದರು. ಪಾಕಿಸ್ತಾನವು ಇದನ್ನು ‘ಭಯೋತ್ಪಾದನಾ ದಾಳಿ’ ಎಂದು ಹೇಳಿದೆ. ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಪಂಜಾಬನಲ್ಲಿ ಹಿಂದುತ್ವನಿಷ್ಠ ನಾಯಕರನ್ನು ಹತ್ಯೆ ಮಾಡಲು ಖಲಿಸ್ತಾನಿ ಭಯೋತ್ಪಾದಕರ ಸಂಚು

ಪಂಜಾಬನ ಖಲಿಸ್ತಾನವಾದಿ ಭಯೋತ್ಪಾದಕರು ಹಿಂದುತ್ವನಿಷ್ಠರ ಮೇಲೆ ದಾಳಿ ಮಾಡುವ ಯತ್ನದ ತಯಾರಿಯಲ್ಲಿದ್ದಾರೆಂಬ ಮಾಹಿತಿಯು ದೆಹಲಿಯಲ್ಲಿ ಬಂಧಿತ ‘ಖಲಿಸ್ತಾನ ಲಿಬರೇಶನ್ ಫ್ರಂಟ್’ನ ೩ ಭಯೋತ್ಪಾದಕರ ವಿಚಾರಣೆಯ ಸಮಯದಲ್ಲಿ ಬಹಿರಂಗವಾಗಿದೆ.

ನಿಜವಾದ ಆನಂದವು ಸುಖದಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ

ಸ್ವಾಮಿ ವಿವೇಕಾನಂದರು, ‘ಜೀವನದಲ್ಲಿ ವಿಜ್ಞಾನ ಮತ್ತು ಧರ್ಮ ಇವುಗಳ ಯೋಗ್ಯ ಸಮನ್ವಯಯ ಇರುವುದು ಮಹತ್ವದ್ದಾಗಿದೆ ಎನ್ನುತ್ತಿದ್ದರು. ನಿಜವಾದ ಆನಂದವು ಸುಖದಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ.

ಅನೇಕ ರೋಗಗಳ ತವರುಮನೆಯಾಗಿರುವ ಚಾಕಲೇಟ್

ಸ್ಯಾಕ್ರೀನದಿಂದಾಗಿ ಅರ್ಬುದರೋಗವೂ ಆಗುವ ಸಾಧ್ಯತೆ ಇದೆ. ಆರೋಗ್ಯವು ಉತ್ತಮವಾಗಿಡಬೇಕಿದ್ದರೆ, ಸ್ಯಾಕ್ರೀನ್‌ದಂತಹ ಪದಾರ್ಥಗಳಿಂದ ತಯಾರಿಸಿದ ಚಾಕಲೇಟನಿಂದ ದೂರ ಇರುವುದೇ ಉತ್ತಮ.