ಪ್ರಸಾದದ ಪಾವಿತ್ಯ್ರತೆ ಕಾಪಾಡುವುದು ದೇವಸ್ಥಾನದ ಕೆಲಸ, ನನ್ನದಲ್ಲ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ

‘ನಾನು ಎಂದಿಗೂ ತಿರುಮಲ ತಿರುಪತಿ ದೇವಸ್ಥಾನದ ಕಾರ್ಯಕಲಾಪದಲ್ಲಿ ಹಸ್ತಕ್ಷೇಪ ಮಾಡಿಲ್ಲ !’ (ಅಂತೆ) – ಜಗನ್ಮೋಹನ ರೆಡ್ಡಿ

ರಾಜ್ಯದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರು, ನಾನು ತಿರುಪತಿ ತಿರುಮಲ ದೇವಸ್ಥಾನದ ದೈನಂದಿನ ಕಾರ್ಯಕ್ರಮದಲ್ಲಿ ಎಂದು ಹಸ್ತಕ್ಷೇಪ ಮಾಡಿಲ್ಲ. (ಜಗನ್ಮೋಹನ ರೆಡ್ಡಿ ಇವರು ಅವರ ಇಷ್ಟದ ವ್ಯಕ್ತಿಗಳಿಗೆ ದೇವಸ್ಥಾನ ಮಂಡಳಿಯ ಸದಸ್ಯರನ್ನಾಗಿ ಮಾಡಿದರು. ಅವರು ಅವರ ವ್ಯಕ್ತಿಗಳನ್ನು ದೇವಸ್ಥಾನ ಮಂಡಳಿಯಲ್ಲಿ ಕೂರಿಸಿ ದೇವಸ್ಥಾನದ ಕಾರ್ಯಕಲಾಪದಲ್ಲಿ ಹಸ್ತಕ್ಷೇಪ ಮಾಡಿದರು. ಜನರಿಗೆ ಇದೆಲ್ಲವೂ ತಿಳಿದಿದೆ ! – ಸಂಪಾದಕರು) ಪ್ರಸಾದದ ಪಾವೀತ್ಯ್ರತೆ ಕಾಪಾಡುವುದು ಇದು ಕೇವಲ ದೇವಸ್ಥಾನದ ಕಾರ್ಯವಾಗಿದೆ, ನನ್ನದಲ್ಲ. ಕೊರೊನಾ ಮಹಾಮಾರಿಯ ಕಾಲದಲ್ಲಿ ಎಲ್ಲಾ ಸಂಸ್ಥೆಗಳಿಗೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ದೇವಸ್ಥಾನವೇ ದೇವಸ್ಥಾನದ ಕಾರ್ಯಕಲಾಪ ನೋಡಿಕೊಳ್ಳುವ ನಿರ್ಣಯ ತೆಗೆದುಕೊಂಡಿತು. ಇದರಲ್ಲಿ ನನ್ನ ವೈಯಕ್ತಿಕ ಸಹಭಾಗವಿಲ್ಲ. ದೇವಸ್ಥಾನದ ಇಬ್ಬರು ಮಾಜಿ ಅಧ್ಯಕ್ಷರು ವೈ.ವ್ಹಿ .ಸುಬ್ಬಾ ರೆಡ್ಡಿ ಮತ್ತು ಭೂಮ್ಮ ಕರುಣಾಕರ ರೆಡ್ಡಿ ಇವರು ಪರೀಕ್ಷಣೆಯನ್ನು ಸ್ವಾಗತಿಸಿದ್ದಾರೆ. ಅವರಿಗೆ ತಮ್ಮ ಉಸ್ತುವಾರಿಯಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಅವರಿಗೆ ಖಾತ್ರಿ ಇದೆ, ಎಂದು ಅವರು ಹೇಳಿದರು.

ಜಗನ್ಮೋಹನ ರೆಡ್ಡಿ ಕೆಂಡಾಮಂಡಲ

‘ನಾನು ಬೇರೆ ಧರ್ಮದವನಾಗಿರುವುದರಿಂದ ನನ್ನನ್ನು ಗುರಿ ಮಾಡಲಾಗುತ್ತಿದೆ !'(ಅಂತೆ)

ಜಗನಮೋಹನ ರೆಡ್ಡಿ ಇವರು ಮಾತು ಮುಂದುವರಿಸುತ್ತಾ, ಚಂದ್ರಬಾಬು ನಾಯ್ಡು ಇವರು ರಾಜಕಾರಣಕ್ಕಾಗಿ ಧರ್ಮದ ಸಹಾಯ ಪಡೆದಿರುವುದು ಇದೇನು ಮೊದಲೇನು ಅಲ್ಲ. ನಾನು ಬೇರೆ ಧರ್ಮದವನು (ಕ್ರೈಸ್ತ) ಆಗಿದ್ದೇನೆ. ಆದ್ದರಿಂದ ನಾಯ್ಡು ಮತ್ತು ಅವರ ಪಕ್ಷ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕಳಂಕಿತ ಗೋಳಿಸುವ ಪ್ರಯತ್ನ ಮಾಡುತಿದ್ದಾರೆ. ಅವರು ನನ್ನ ತಂದೆಯ ವಿರುದ್ಧ ಕೂಡ ಸುಳ್ಳು ಮಾಹಿತಿ ಹಬ್ಬಿಸಿದ್ದರು; ಆದರೆ ಪ್ರತಿಯೊಂದು ಬಾರಿ ಅವರ ಪ್ರಯತ್ನ ವಿಫಲವಾಗಿದೆ. ಈ ಬಾರಿಯೂ ಕೂಡ ಅವರ ಪ್ರಯತ್ನ ವಿರುದ್ಧವಾಗಿಯೇ ಪ್ರತಿಧ್ವನಿಸುತ್ತದೆ; ಕಾರಣ ಜನರಿಗೆ ಸತ್ಯ ತಿಳಿದಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದಾದರೊಂದು ಅಪರಾಧ ಮಾಡಿದರೆ ಮತ್ತು ಅದು ಅವರನ್ನು ಸುತ್ತುತ್ತದೆ ಎಂದಾಗ ಅವರು ಯಾವ ರೀತಿ ತಮ್ಮನ್ನು ಸಂತ್ರಸ್ತರೆಂದು ಹೇಳುತ್ತಾ ಸಹಾನುಭೂತಿ ಪಡೆಯುವ ಪ್ರಯತ್ನ ಮಾಡುತ್ತಾರೆ, ಇದು ಇದರ ಒಂದು ಉದಾಹರಣೆ !