ಕಾನಪೂರ (ಉತ್ತರ ಪ್ರದೇಶ)ರೈಲ್ವೆ ಹಳಿಯ ಮೇಲೆ ಸಿಲಿಂಡರ್ ಪತ್ತೆ

  • ರೈಲನ್ನು ಹಳಿಯಿಂದ ತಪ್ಪಿಸಲು ಸಂಚು

  • 57 ದಿನಗಳಲ್ಲಿ ದೇಶದಲ್ಲಿ ನಡೆದ 22ನೇ ಘಟನೆಯಿದು

ಕಾನಪೂರ (ಉತ್ತರ ಪ್ರದೇಶ) – ರೈಲುಗಾಡಿಗಳ ಅಪಘಾತವನ್ನು ನಡೆಸುವ ಸಂಚು ನಿರಂತರವಾಗಿ ಬಹಿರಂಗವಾಗುತ್ತಿದೆ. ಕಾನಪೂರದಲ್ಲಿಯೇ ಇಂತಹ ಕೆಲವು ಪ್ರಕರಣಗಳು ಇಲ್ಲಿಯವರೆಗೆ ಬಹಿರಂಗವಾಗಿದೆ. ಕಾನಪೂರದ ಪ್ರೇಮಪೂರ ರೇಲ್ವೆ ನಿಲ್ದಾಣದ ಹತ್ತಿರ ಜೆ.ಟಿ.ಟಿ.ಎನ್. ಗೂಡ್ಸ ರೇಲ್ವೆಗಾಡಿಯನ್ನು ಹಳಿಯಿಂದ ತಪ್ಪಿಸಲು ಸಂಚು ರೂಪಿಸಲಾಗಿದೆ. ಹಳಿಯ ಮೇಲೆ ಒಂದು ಸಣ್ಣ ಸಿಲಿಂಡರ್ ಇಟ್ಟಿರುವುದು ಪತ್ತೆಯಾಗಿದೆ. ಲೊಕೊ ಪೈಲಟ್ (ರೈಲ್ವೆ ಚಾಲಕ) ಸಿಲಿಂಡರ್ ನೋಡುತ್ತಲೇ ತುರ್ತು ಬ್ರೇಕ್ ಹಾಕಿದ್ದಕ್ಕೆ ಸಿಲಿಂಡರ್‌ನಿಂದ 10 ಅಡಿ ದೂರದಲ್ಲಿ ರೈಲು ನಿಂತು ದೊಡ್ಡ ಅಪಘಾತ ತಪ್ಪಿತು.

1. ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಗೂಡ್ಸ್ ರೈಲು ಕಾನಪೂರದಿಂದ ಪ್ರಯಾಗರಾಜಗೆ ಹೋಗುತ್ತಿತ್ತು . ಹಳಿಯ ಮೇಲೆ ಇಟ್ಟಿದ್ದ 5 ಕೆ.ಜಿ.ಸಿಲಿಂಡರ್ ಖಾಲಿಯಾಗಿತ್ತು. ಉತ್ತರಪ್ರದೇಶದಲ್ಲಿ ಕಳೆದ 38 ದಿನಗಳಲ್ಲಿ ರೈಲು ಗಾಡಿಯನ್ನು ಹಳಿಯಿಂದ ತಪ್ಪಿಸಲು ನಡೆದ ಇದು 5ನೇ ಸಂಚಾಗಿದೆ. ಈ ಹಿಂದೆ ಸಪ್ಟೆಂಬರ 8 ರಂದು ಕಾನಪೂರದಲ್ಲಿಯೇ ತುಂಬಿದ ಸಿಲಿಂಡರ್ ಅನ್ನು ಇಟ್ಟು ಕಾಲಿಂದಿ ಎಕ್ಸಪ್ರೆಸ್ ರೈಲನ್ನು ಹಳಿಯಿಂದ ತಪ್ಪಿಸುವ ಸಂಚು ರಚಿಸಲಾಗಿತ್ತು.

2. ಕಳೆದ 57 ದಿನಗಳಲ್ಲಿ ದೇಶದ ವಿವಿಧೆಡೆ ರೈಲುಗಳನ್ನು ಹಳಿಯಿಂದ ತಪ್ಪಿಸುವ 22 ನೇ ಪ್ರಯತ್ನ ಇದಾಗಿದೆ. ಈ ಹಿಂದೆ ಸೆಪ್ಟೆಂಬರ್ 20 ರಂದು ಗುಜರಾತ್ ಮತ್ತು ಸೂರತ್ ನಡುವಿನ ರೈಲ್ವೆ ಹಳಿಗಳಲ್ಲಿ ಹಾನಿಯುಂಟು ಮಾಡಲು ಪ್ರಯತ್ನಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ವ್ಯವಸ್ಥೆಗೆ ವಹಿಸಲಾಗಿದೆ.

ರೈಲ್ವೇ ಕಾಯಿದೆಯನ್ನು ಸುಧಾರಿಸುವ ಮೂಲಕ ಜೀವಾವಧಿ ಕಾರಾಗೃಹ ಶಿಕ್ಷೆಯಿಂದ ಗಲ್ಲುಶಿಕ್ಷೆಯವರೆಗೆ ನಿಯಮಗಳನ್ನು ರೂಪಿಸಲಿದೆ.

ಈಗಿರುವ ರೈಲ್ವೇ ಕಾಯಿದೆಯಡಿ, ರೈಲ್ವೇ ಅಪಘಾತ ನಡೆಸಲು ಸಂಚು ರೂಪಿಸಿದವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ. ಈಗ ಈ ಕಾನೂನಿನ ಉಪನಿಬಂಧನೆಗಳನ್ನು ಸೇರಿಸಿ ಅದನ್ನು ದೇಶದ್ರೋಹದ ಅಡಿಯಲ್ಲಿ ತರುವ ಸಿದ್ಧತೆ ಮಾಡಲಾಗುತ್ತಿದೆ. ಗೃಹ ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿಯನುಸಾರ ಇದು ರೇಲ್ವೆ ಹಳಿಗಳ ಮೇಲೆ ವಸ್ತುಗಳನ್ನಿಟ್ಟು ಅಪಘಾತವನ್ನು ಮಾಡುವ ಸಂಚಾಗಿದೆ. ಇದರಿಂದ ಅಪಘಾತಗಳಾಗಿ ಜೀವಹಾನಿ, ಆರ್ಥಿಕ ನಷ್ಟ ಸಂಭವಿಸಿದರೆ, ಆರೋಪಿಗಳ ವಿರುದ್ಧ ಸಾಮೂಹಿಕ ಹತ್ಯೆಯ ಕಾನೂನು ಕ್ರಮವನ್ನು ಕೈಗೊಳ್ಳಬಹುದು. ಇದರಡಿಯಲ್ಲಿ ಜೀವಾವಧಿ ಶಿಕ್ಷೆಯಿಂದ ಗಲ್ಲುಶಿಕ್ಷೆಯವರೆಗೆ ಕಾನೂನಿನ ತಿದ್ದುಪಡಿ ತರಬಹುದು. ಈ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತಿದೆ. ಈ ಹೊಸ ತಿದ್ದುಪಡಿಗಳ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು.

ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು

ರೈಲ್ವೇ ಮಂಡಳಿಯ ಅಧಿಕಾರಿಗಳು ಈ ಕುರಿತು ಮಾತನಾಡಿ, ರೇಲ್ವೆ ಹಳಿಯ ಮೇಲೆ ಪೊಲೀಸರು ಮತ್ತು ಗ್ಯಾಂಗ್ ಮ್ಯಾನ್ ಗಳ ತಪಾಸಣೆಯನ್ನು ಹೆಚ್ಚಿಸಿದ್ದಾರೆ. ಹಾಗೆಯೇ ಮುಂಬರುವ ಕೆಲವು ದಿನಗಳಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ರೈಲ್ವೆ ಇಂಜಿನ್‌ಗಳಲ್ಲಿಯೂ ಕೂಡ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ, ಇದರಿಂದ ಪ್ರತ್ಯಕ್ಷ ಮೇಲ್ವಿಚಾರಣೆ ಮಾಡಬಹುದು ಮತ್ತು ಹಳಿಯ ಮೇಲೆ ವಸ್ತುಗಳು ಅಥವಾ ಅಡಚಣೆ ಕಂಡುಬಂದರೆ ಚಾಲಕರಿಗೆ ಮೊದಲೇ ಅದರ ಮಾಹಿತಿ ದೊರಕಿ ರೈಲನ್ನು ಸಮಯಕ್ಕೆ ನಿಲ್ಲಿಸಲು ಸಾಧ್ಯವಾಗಲಿದೆ.

ಸಂಪಾದಕೀಯ ನಿಲುವು

ಇದು ‘ರೈಲ್ವೆ ಜಿಹಾದ್’ ಆಗಿದ್ದು ಎಲ್ಲಿಯವರೆಗೆ ಜಿಹಾದಿ ಮನಃಸ್ಥಿತಿ ಇರುತ್ತದೆಯೋ, ಅಲ್ಲಿಯವರೆಗೆ ದೇಶದಲ್ಲಿ ಈ ರೀತಿಯ ಜಿಹಾದ್ ನಡೆಯುತ್ತಲೇ ಇರುತ್ತದೆ. ಜಿಹಾದಿ ಮನಃಸ್ಥಿತಿಯನ್ನು ನಾಶಮಾಡಲು ಭಾರತವು ಚೀನಾದ ನೀತಿಯನ್ನು ಅನುಸರಿಸಬೇಕು!