ತಿರುಪತಿ ದೇವಸ್ಥಾನದ ಲಡ್ಡುವಿನ ಪ್ರಕರಣ
ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ಬಾಲಾಜಿ ದೇವಸ್ಥಾನದ ಪಾವಿತ್ರಕ್ಕೆ ಧಕ್ಕೆ ತಂದಿರುವ ಮತ್ತು ಲಡ್ಡು ಪ್ರಸಾದದಲ್ಲಿ ಬಳಸಲಾದ ಕಲೆಬೆರಕೆ ತುಪ್ಪದಿಂದ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದು ಆರೋಪಿಸಲಾಗಿದೆ. ತೆಲಂಗಾಣದ ಭಾಗ್ಯನಗರದಲ್ಲಿನ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಓರ್ವ ನ್ಯಾಯವಾದಿಯು ದೂರು ನೀಡಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Tirupati Laddu Case: Case registered against former Chief Minister #JaganMohanReddy
Tirupati Temple Prasad Laddu Case#TirupatiControversy #TirupatiLadduControversy #jaganmohan pic.twitter.com/g29xTygAWp
— Sanatan Prabhat (@SanatanPrabhat) September 22, 2024
ನ್ಯಾಯಾಲಯದಲ್ಲಿ ಅರ್ಜಿ
೧. ಹಿಂದೂ ಸೇನಾ ಸಮಿತಿಯ ಅಧ್ಯಕ್ಷ ಸುರಜಿತ ಸಿಂಹ ಯಾದವ್ ಅವರು ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವ ಪ್ರಕರಣವನ್ನು ವಿಶೇಷ ತನಿಖಾ ತಂಡದ ಮೂಲಕ ವಿಚಾರಣೆ ನಡೆಸಲು ಆಗ್ರಹಿಸಿದ್ದಾರೆ. ಸುರಜಿತ ಸಿಂಹ ಯಾದವ ಅವರು ಸಪ್ಟೆಂಬರ್ ೨೧ ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಇದಲ್ಲದೆ ನ್ಯಾಯವಾದಿ ಸತ್ಯಂ ಸಿಂಹ ಅವರು ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ
೨. ಇನ್ನೊಂದೆಡೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಪ್ರಸ್ತುತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ವಿಚಾರಣೆ ನಡೆಸುವಂತೆ ಜಗನ್ಮೋಹನ ರೆಡ್ಡಿ ಅವರು ವಿನಂತಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಸಪ್ಟೆಂಬರ್ ೨೫ ರಂದು ನಡೆಯಲಿದೆ.
೩. ಆಂಧ್ರಪ್ರದೇಶ ಸರಕಾರದಿಂದ ಕೇಂದ್ರ ಆರೋಗ್ಯ ಸಚಿವಾಲಯವು ಲಡ್ಡುವಿನ ವರದಿ ಕೇಳಿದೆ. ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರು, ನಾನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜೊತೆಗೆ ಮಾತನಾಡಿದ್ದೇನೆ. ದೇವಸ್ಥಾನದ ಪ್ರಸಾದದ ಲಡ್ಡುವಿನ ಪರೀಕ್ಷಣೆ ನಡೆಸಲಾಗುವುದೆಂದು ಹೇಳಿದರು.
೪. ತೆಲುಗು ದೇಸಮ್ ಪಕ್ಷ, ಕಾಂಗ್ರೆಸ್ ಮತ್ತು ಭಾಜಪ ಪಕ್ಷಗಳು ಈ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಆಗ್ರಹಿಸಿದ್ದಾರೆ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ! – ಶ್ರೀ ಶ್ರೀ ರವಿಶಂಕರ್
ಹಿಂದುಗಳ ಭಾವನೆಗೆ ನೋವುಂಟಾಗಿದೆ, ಇದನ್ನು ಕ್ಷಮಿಸಲಾಗುವುದಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅವರೆಲ್ಲರ ಆಸ್ತಿಪಾಸ್ತಿ ವಶಪಡಿಸಿಕೊಳ್ಳಬೇಕು ಮತ್ತು ಯಾರೆಲ್ಲಾ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಅವರನ್ನು ಜೈಲಿಗೆ ಅಟ್ಟಬೇಕೆಂದು ಶ್ರೀ ಶ್ರೀ ರವಿಶಂಕರ್ ಅವರು ಆಗ್ರಹಿಸಿದ್ದಾರೆ.
ಪ್ರಾಯಶ್ಚಿತ್ತವೆಂದು ೧೧ ದಿನಗಳ ಉಪವಾಸ ಮಾಡಲಿರುವ ಉಪಮುಖ್ಯಮಂತ್ರಿ ಪವನ ಕಲ್ಯಾಣ
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಶ್ರೀ ಬಾಲಾಜಿ ದೇವಸ್ಥಾನದ ಪ್ರಸಾದದಲ್ಲಿ ಕಲೆಬರಿಕೆ ಮಾಡಿ ಅಪವಿತ್ರತೆ ಹರಡುವ ಏನು ಪ್ರಯತ್ನ ಮಾಡಿದ್ದಾರೆ ಅದರಿಂದ ನನ್ನ ಮನಸ್ಸಿಗೆ ಬಹಳ ದುಃಖವಾಗಿದೆ. ನಿಜವಾಗಿಯೂ ನನಗೆ ‘ನನಗೆ ಮೋಸವಾಗಿದೆ’ ಎಂದು ಅನಿಸುತ್ತಿದೆ. ಆದ್ದರಿಂದ ಪ್ರಭು ವೆಂಕಟೇಶ್ವರನಿಗೆ ನಾನು ಪ್ರಾರ್ಥನೆ ಮಾಡುತ್ತೇನೆ, ಅವನ ಕೃಪಾ ದೃಷ್ಟಿ ನಮ್ಮ ಮೇಲೆ ಮತ್ತು ಎಲ್ಲಾ ಸನಾತನಿಗಳ ಮೇಲೆ ಶಾಶ್ವತವಾಗಿ ಇರಲಿ. ನಾನು ಈ ಕ್ಷಣದಿಂದ ದೇವರೆದುರು ಪ್ರಾಯಶ್ಚಿತ ತೆಗೆದುಕೊಂಡು ಕ್ಷಮೆ ಯಾಚಿಸುತ್ತೇನೆ. ಇದಕ್ಕಾಗಿ ನಾನು ೧೧ ದಿನಗಳ ಉಪವಾಸ ಮಾಡಲು ಧರ್ಮ ಸಂಕಲ್ಪ ಮಾಡುತ್ತಿದ್ದೇನೆ. ಉಪವಾಸದ ಕೊನೆಯ ದಿನ ಅಕ್ಟೋಬರ್ ೧ ಅಥವಾ ೨ ರಂದು ನಾನು ಸ್ವತಃ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ದೇವರೆದುರು ಕ್ಷಮೆಯನ್ನು ಯಾಚಿಸುತ್ತೇನೆ ಎಂದು ತಿಳಿಸಿದರು.