ಮುಂಬಯಿ – ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಲೆಜೆಂಡ್ ಆಫ್ ಮೌಲಾ ಜಟ್’ ಸಿನಿಮಾ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಯಾವುದೇ ಸಂದರ್ಭದಲ್ಲೂ ಮಹಾರಾಷ್ಟ್ರದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಸಂಬಂಧಪಟ್ಟ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.
RAJ THACKERAY WARNS MUMBAI THEATRES! 🚨
Don’t screen Pakistani films, or face consequences!🔥
– @RajThackeray@mnsadhikrut chief stands firm against Pakistan’s anti-India stance.👉Art does not have national borders, this is all right in other cases, but in the case of… pic.twitter.com/BvZocAWRvZ
— Sanatan Prabhat (@SanatanPrabhat) September 22, 2024
ಈ ಬಗ್ಗೆ ರಾಜ್ ಠಾಕ್ರೆ ಅವರು ‘ಎಕ್ಸ್’ ಖಾತೆಯ ಮೂಲಕ ಪ್ರಸಾರ ಮಾಡಿದ ಸಂದೇಶದಲ್ಲಿ, ಪಾಕಿಸ್ತಾನಿ ನಟರ ಚಿತ್ರಗಳನ್ನು ಮೂಲತಃ ಭಾರತದಲ್ಲಿ ಬಿಡುಗಡೆ ಮಾಡಲು ಏಕೆ ಅನುಮತಿಸಲಾಗಿದೆ? ಕಲೆಗೆ ಯಾವುದೇ ರಾಷ್ಟ್ರೀಯ ಗಡಿ ಇರುವುದಿಲ್ಲ, ಇವೆಲ್ಲವೂ ಇತರ ವಿಷಯಗಳ ಸಂದರ್ಭದಲ್ಲಿ ಸರಿ ಇದೆ; ಆದರೆ ಪಾಕಿಸ್ತಾನದ ಸಂದರ್ಭದಲ್ಲಿ ಇದು ಕೆಲಸ ಮಾಡುವುದಿಲ್ಲ. ‘ಭಾರತದ ದ್ವೇಷ’ ಎಂಬ ಒಂದೇ ಸೂತ್ರದ ಮೇಲೆ ಯಾವ ದೇಶ ಗಟ್ಟಿಯಾಗಿ ನಿಂತಿದೆಯೋ, ಆ ದೇಶದಲ್ಲಿನ ಕಲಾವಿದರನ್ನು ಇಲ್ಲಿಗೆ ತಂದು ಕುಣಿಸುವುದು, ಅವರ ಚಿತ್ರಗಳನ್ನು ಪ್ರದರ್ಶಿಸುವುದು ಇದು ಒಪ್ಪುವಂತಲ್ಲ ? ಮಹಾರಾಷ್ಟ್ರ ಬಿಡಿ; ಈ ಚಿತ್ರವನ್ನು ದೇಶದ ಯಾವುದೇ ರಾಜ್ಯದಲ್ಲಿ ಬಿಡುಗಡೆ ಮಾಡಲು ಸರಕಾರ ಅವಕಾಶ ನೀಡಬಾರದು. ಅಂದರೆ, ಬೇರೆ ರಾಜ್ಯಗಳು ಏನು ಮಾಡಬೇಕು ?, ಇದು ಅವರ ಪ್ರಶ್ನೆ. ಈ ಚಿತ್ರವನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ, ಇದು ಮಾತ್ರ ನಿಶ್ಚಿತ! ಯಾವುದೇ ಪಾಕಿಸ್ತಾನಿ ಚಿತ್ರಕ್ಕಾಗಿ ರಾಜ್ಯದಲ್ಲಿ ಹೋರಾಟ ನಡೆಯಬಾರದು, ಎಂಬುದು ನನ್ನ ಆಶಯವಾಗಿದೆ ಮತ್ತು ಸರಕಾರ ಅದರ ಕಡೆಗೆ ಯೋಗ್ಯ ಗಮನ ಹರಿಸುವುದು, ನನಗೆ ನಿಶ್ಚಿತವಾಗಿದೆ ಎಂದು ಹೇಳಿದ್ದಾರೆ.