ಚೀನಾದಿಂದ ೨ ದಿನಗಳ ಹಿಂದೆಯೇ ಭಾರತೀಯ ದಿನಪತ್ರಿಕೆ ಹಾಗೂ ವಾರ್ತಾವಾಹಿನಿಗಳ ಮೇಲೆ ನಿರ್ಬಂಧ

ಭಾರತಕ್ಕಿಂತ ೨ ಹೆಜ್ಜೆ ಮುಂದಿರುವ ಚೀನಾ ! ಚೀನಾಗೆ ಪಾಠ ಕಲಿಸಲು ಅವರಿಂದ ರಫ್ತಾಗುವ ಎಲ್ಲ ವಸ್ತುಗಳನ್ನು ನಿಷೇಧಿಸಿದರೇ ಸಾಧ್ಯವಾಗುವುದು !

ಬೀಜಿಂಗ್ (ಚೀನಾ) – ಭಾರತವು ಚೀನಾದ ೫೯ ‘ಆಪ್ಸ್’ಗಳನ್ನು ನಿಷೇಧಿಸುವ ೨ ದಿನಗಳ ಮೊದಲೇ ಚೀನಾವು ಭಾರತದ ದಿನಪತ್ರಿಕೆ ಹಾಗೂ ವಾರ್ತಾವಾಹಿನಿಯ ಜಾಲತಾಣವನ್ನು ನಿಷೇಧಿಸಿದೆ. ಆದ್ದರಿಂದ ಚೀನಾದಲ್ಲಿ ಈ ಜಾಲತಾಣಗಳನ್ನು ನೋಡಲು ಸಾಧ್ಯವಿಲ್ಲ. ಭಾರತೀಯ ವಾರ್ತಾವಾಹಿನಿಯನ್ನು ನೋಡಲು ಚೀನಾದಲ್ಲಿ ‘ಐ.ಪಿ. ಟಿವಿ’ಯನ್ನು ಉಪಯೋಗಿಸಲಾಗುತ್ತದೆ. ಇನ್ನೊಂದೆಡೆ ಭಾರತದಲ್ಲಿ ಮಾತ್ರ ಚೀನಾದ ದಿನಪತ್ರಿಕೆ ಹಾಗೂ ಜಾಲತಾಣಗಳನ್ನು ನೋಡಬಹುದಾಗಿದೆ. (ಇನ್ನು ಸರಕಾರವು ಇದನ್ನೂ ನಿಷೇಧಿಸುವುದು ಅಗತ್ಯವಿದೆ ! – ಸಂಪಾದಕರು)

ಭಾರತೀಯ ಪ್ರಸಾರ ಮಾಧ್ಯಮಗಳಿಂದಾಗಿ ಚೀನಾದ ನಾಗರಿಕರಿಗೆ ಚೀನಾದ ಬಗ್ಗೆ ನಿಜವಾದ ಮಾಹಿತಿ ಸಿಗುತ್ತಿದ್ದರಿಂದಲೇ ಚೀನಾವು ಇದನ್ನು ನಿಷೇಧಿಸಿದೆ ಎಂದು ಹೇಳಲಾಗುತ್ತಿದೆ. ಚೀನಾದಲ್ಲಿ ಕೇವಲ ಸರಕಾರಿ ಪ್ರಸಾರ ಮಾಧ್ಯಮಗಳಿವೆ. ಆದ್ದರಿಂದ ಸರಕಾರದ ವಿರುದ್ಧ ಅವು ಏನನ್ನೂ ಮುದ್ರಿಸಲು ಸಾಧ್ಯವಿಲ್ಲ.