ಸಂಯುಕ್ತ ಸಂಸದೀಯ ಸಮಿತಿಯ ಸಭೆಯಲ್ಲಿ ಮುಸಲ್ಮಾನ ಸಂಘಟನೆಗಳಲ್ಲಿಯೇ ವಿವಾದ
ನವದೆಹಲಿ – ವಕ್ಫ್ ಕಾನೂನಿನಲ್ಲಿ ಸುಧಾರಣೆ ಮಾಡುವ ಮಸೂದೆ ಸಂಯುಕ್ತ ಸಂಸದೀಯ ಸಮಿತಿಗೆ ಕಳುಹಿಸಿದ ನಂತರ ಈ ಸಮಿತಿಯ ಕೆಲವು ಸಭೆಗಳು ನೆರವೇರಿದವು. ಸಪ್ಟೆಂಬರ್ ೨೦ ರಂದು ನಡೆದಿರುವ ಸಮಿತಿಯ ಸಭೆಯಲ್ಲಿ ಮುಸಲ್ಮಾನ ಸಂಘಟನೆಗಳಲ್ಲಿ ಪರಸ್ಪರ ಮತಭೇದ ಇರುವುದು ಕಂಡುಬಂದಿತು.
೧. ಎರಡು ದಿನದ ಸಭೆಯಲ್ಲಿ ವಿವಿಧ ಸಂಘಟನೆಗಳು ಅವರ ಅಭಿಪ್ರಾಯ ಮಂಡಿಸಿದರು. ಇದರಲ್ಲಿನ ಕೆಲವರು ವಕ್ಫ್ ಸುಧಾರಣಾ ಮಸೂದೆಯ ವಿರುದ್ಧ ದೃಢವಾಗಿದ್ದರು; ಆದರೆ ಪಸಮಂದಾ ಮುಸಲ್ಮಾನ ನಾಯಕರು ಈ ವಿಧೇಯಕಕ್ಕೆ ಬೆಂಬಲ ನೀಡಿದರು. ‘ದೇಶ ಕುರಾನ್ ಅಥವಾ ಶರಿಯಾ ಕಾನೂನಿನ ಪ್ರಕಾರ ನಡೆಯುವುದಿಲ್ಲ, ಅದು ಭಾರತದ ಕಾನೂನಿನ ಆಧಾರದಲ್ಲಿ ನಡೆಯುತ್ತದೆ. ಆದ್ದರಿಂದ ವಕ್ಫ್ ಮಂಡಳಿ ಕಾನೂನಿನಲ್ಲಿ ಬದಲಾವಣೆ ಆಗಲೇಬೇಕು’, ಎಂದು ಪಸಮಂದಾ ಮುಸಲ್ಮಾನ ನಾಯಕರು ಸಭೆಯಲ್ಲಿ ದೃಢವಾದ ಬೆಂಬಲ ಮಂಡಿಸಿರುವುದು ತಿಳಿದಿದೆ. ‘ಪಸಮಂದಾ ಮುಸಲ್ಮಾನರನ್ನು ವಕ್ಫ್ ಮಂಡಳಿಗಳು ಬಹಳ ಕೀಳಾಗಿ ನೋಡುತ್ತವೆ’, ಎಂದು ಓರ್ವ ನಾಯಕರು ಈ ಸಭೆಯಲ್ಲಿ ಹೇಳಿರುವುದಾಗಿ ಹೇಳಲಾಗುತ್ತಿದೆ.
೨. ರಾಜ್ಯದಲ್ಲಿನ ವಕ್ಫ್ ಮಂಡಳಿಯ ಉಸ್ತುವಾರಿಯಲ್ಲಿ ಅನೇಕ ಆಸ್ತಿಪಾಸ್ತಿ ದಾಖಲೆಗಳು ಲಭ್ಯ ಇಲ್ಲದಿದ್ದರೂ ಅಂತಹ ಆಸ್ತಿಪಾಸ್ತಿಯ ಮಾಲೀಕತ್ವ ಏನು ಮಾಡುವುದು ? ಇದು ಸಮಿತಿಯ ಸಭೆಯಲ್ಲಿ ವಿವಾದದ ಮುಖ್ಯ ಅಂಶವಾಯಿತು. ಆಸ್ತಿಪಾಸ್ತಿಯ ಮಾಲಿಕತ್ವದ ನಿರ್ಣಯದ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಿದ್ದರೆ, ಆಗ ಮುಸಲ್ಮಾನ ಸಂಘಟನೆಗಳು ವಿರೋಧಿಸಿದ್ದಾರೆ. ಆದ್ದರಿಂದ ವಿವಿಧ ವಕ್ಫ್ ಮಂಡಳಿಗಳು ಮತ್ತು ಮುಸಲ್ಮಾನ ಸಂಘಟನೆಯವರ ಜೊತೆಗೆ ಅನೌಪಚಾರಿಕ ಚರ್ಚೆ ನಡೆಸಲು ಸಮಿತಿಯ ಸದಸ್ಯರು ಸೆಪ್ಟೆಂಬರ್ ೨೬ ರಿಂದ ಅಕ್ಟೋಬರ್ ೧ ವರೆಗಿನ ಕಾಲದಲ್ಲಿ ಕರ್ಣಾವತಿ, ಮುಂಬಯಿ, ಭಾಗ್ಯನಗರ, ಬೆಂಗಳೂರು, ಮತ್ತು ಚೆನ್ನೈ ಈ ಐದು ನಗರಗಳಿಗೆ ಭೇಟಿ ನೀಡುವರು.