ಪ್ರಸಾದದ ಲಡ್ಡು ಈಗ ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರ ! – ತಿರುಮಲ ತಿರುಪತಿ ದೇವಸ್ಥಾನಂ

ಅಮರಾವತಿ (ಆಂಧ್ರಪ್ರದೇಶ) – ಪ್ರಸಾದಂ ಎಂದರೆ ಪ್ರಸಾದದ ಲಡ್ಡು ಈಗ ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರವಾಗಿದೆ. ಹಾಗೂ ಮುಂದೆ ಕೂಡ ಹಾಗೆಯೇ ಇರುವುದಕ್ಕಾಗಿ ನಾವು ಕಟಿಬದ್ಧವಾಗಿದ್ದೇವೆ, ಎಂದು ತಿರುಪತಿ ಬಾಲಾಜಿ ದೇವಸ್ಥಾನದ ವ್ಯವಸ್ಥಾಪನೆ ನೋಡಿಕೊಳ್ಳುವ ‘ತಿರುಮಲ ತಿರುಪತಿ ದೇವಸ್ಥಾನಂ’ಯಿಂದ ಹೇಳಲಾಗಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಉಪಯೋಗಿಸುತ್ತಿದ್ದಾರೆ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರ ಆರೋಪ

ಪ್ರಸಾದದ ಲಡ್ಡುವಿನ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರು ಸರಕಾರದ ಮೇಲೆ ಆರೋಪ ಹೊರಿಸುತ್ತಾ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಜುಲೈ ತಿಂಗಳಲ್ಲಿನ ಪ್ರಯೋಗ ಶಾಲೆಯ ವರದಿ ತೋರಿಸಿದ್ದಾರೆ. ಆಗ ಅವರೇ ಮುಖ್ಯಮಂತ್ರಿಗಳಾಗಿದ್ದರು. ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಉಪಯೋಗಿಸುತ್ತಿದ್ದಾರೆ. ಅವರು ವಸ್ತುಸ್ಥಿತಿಯನ್ನು ವಿಪರೀತಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರಿಗೆ ಪತ್ರ ಬರೆದು ನಾಯ್ಡು ಇವರ ಮೇಲೆ ಕ್ರಮ ಕೈಗೊಳ್ಳಲು ನಾನು ಆಗ್ರಹಿಸುವೆ ಎಂದು ಹೇಳಿದರು.

ನಾವು ತಿರುಪತಿ ದೇವಸ್ಥಾನಕ್ಕೆ ಎಂದಿಗೂ ತುಪ್ಪ ಪೂರೈಸಿಲ್ಲ ! – ಅಮೂಲ್ ಕಂಪನಿಯ ಸ್ಪಷ್ಟನೆ

ಈ ಪ್ರಕರಣದಲ್ಲಿ ಅಮೂಲ್ ಕಂಪನಿಯು ಕೂಡ ಸ್ಪಷ್ಟೀಕರಣ ನೀಡಿದೆ. ಕಂಪನಿಯು, ‘ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮೂಲ್ ತುಪ್ಪ ಪೂರೈಸಲಾಗುತ್ತಿತ್ತು’, ಎಂದು ಕೆಲವು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುತ್ತಿದೆ, ಆದರೆ ನಾವು ತಿಳಿಸಲು ಬಯಸುವುದು ಏನೆಂದರೆ ನಾವು ತಿರುಪತಿ ದೇವಸ್ಥಾನಕ್ಕೆ ಎಂದಿಗೂ ತುಪ್ಪ ಪೂರೈಸಿಲ್ಲ. ನಾವು ಅಮೂಲ ತುಪ್ಪ ನಮ್ಮ ಅತ್ಯಾಧುನಿಕ ಉತ್ಪಾದನೆ ಯಂತ್ರಗಳಿಂದ ಹಾಲಿನಿಂದ ತಯಾರಿಸುತ್ತೇವೆ. ಅದು ‘ಐ.ಎಸ್.ಓ.’ (ಅಂತರಾಷ್ಟ್ರೀಯ ಮಾನದಂಡ ಸಂಸ್ಥೆ) ಪ್ರಮಾಣಿತವಾಗಿದೆ. ಅಮೂಲ್ ತುಪ್ಪ ಉನ್ನತ ಮಟ್ಟದ ಶುದ್ಧ ಹಾಲಿನ ಪ್ಯಾಟ್ ನಿಂದ ತಯಾರಿಸುತ್ತೇವೆ.

ತುಪ್ಪದ ಪೂರೈಕೆ ಮಾಡುವ ೫ ಕಂಪನಿಗಳ ಜೊತೆಗಿನ ಒಪ್ಪಂದ ರದ್ದು !

‘ತಿರುಮಲ ತಿರುಪತಿ ದೇವಸ್ಥಾನಮ್’ ಗೆ ತುಪ್ಪ ಪೂರೈಸುವ ೫ ಕಂಪನಿಗಳ ಜೊತೆಗಿನ ಒಪ್ಪಂದ ರದ್ದುಪಡಿಸಲಾಗಿದೆ. ಇದರಲ್ಲಿ ಪ್ರೀಮಿಯಂ ಗ್ರೀ ಫುಡ್ಸ್, ಕೃಪಾರಾಮ ಡೈರಿ, ವೈಷ್ಣವಿ, ಶ್ರೀ ಪರಾಗ ಮಿಲ್ಕ್ ಮತ್ತು ಎ.ಆರ್ ಫುಡ್ ಕಂಪನಿ ಇವುಗಳ ಸಮಾವೇಶವಿದೆ. ಇದರಲ್ಲಿ ಕೇವಲ ಎ.ಆರ್ ಡೈರಿ ತುಪ್ಪದಲ್ಲಿ ಗೋಮಾಂಸದಿಂದ ತಯಾರಿಸಿರುವ ಕೊಬ್ಬು ಕಂಡು ಬಂದಿದೆ. ಇದರ ನಂತರ ದೇವಸ್ಥಾನ ಕಳೆದ ಅನೇಕ ವರ್ಷಗಳಿಂದ ತುಪ್ಪ ಪೂರೈಕೆ ಮಾಡುವ ಕರ್ನಾಟಕದಲ್ಲಿನ ‘ಕರ್ನಾಟಕ ಸಹಕಾರಿ ಮಹಾಸಂಘ’ದ ಜೊತೆಗೆ ಹೊಸ ಒಪ್ಪಂದ ಮಾಡಿಕೊಂಡಿದೆ. ಈ ಮಹಾಸಂಘದ ಜೊತೆಗಿನ ಒಪ್ಪಂದ ರದ್ದು ಪಡಿಸಲಾಗಿತ್ತು; ಕಾರಣ ಅವರ ತುಪ್ಪದ ಬೆಲೆ ಹೆಚ್ಚಾಗಿತ್ತು ಎಂದು ಹೇಳಿದೆ.