-
ಚೀನಾದ ಕಂಪನಿಗಳು ಈ ರೀತಿಯ ನಿಧಿ ನೀಡಿದ್ದಲ್ಲಿ, ಅದನ್ನು ಹಿಂದಿರುಗಿಸುವ ಅಗತ್ಯವೇನಿದೆ ? ಈ ಸಂಸ್ಥೆಗಳು ನಿಧಿ ನೀಡಿ ಭಾರತದ ಮೇಲೆ ಉಪಕಾರ ಮಾಡಿಲ್ಲ. ಅವು ಭಾರತದಿಂದ ಕೋಟಿಗಟ್ಟಲೆ ರೂಪಾಯಿಗಳ ಲಾಭವನ್ನು ಗಳಿಸಿವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !
-
ಕಾಂಗ್ರೆಸ್‌ನ ಮುಖ್ಯಮಂತ್ರಿಗೆ ಇಷ್ಟು ಅನಿಸುತ್ತಿದ್ದರೆ, ಅವರು ‘ರಾಜೀವ್ ಗಾಂಧಿ ಫೌಂಡೇಶನ್’ಗೆ ಚೀನಾದಿಂದ ಸಿಕ್ಕಿದ ದೇಣಿಗೆಯನ್ನು ಹಿಂತಿರುಗಿಸಿ ತೋರಿಸಲಿ !
ನವ ದೆಹಲಿ – ಗಡಿರೇಖೆಯ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಯಿಂದ ‘ಪಿ.ಎಮ್. ಕೇರ್ ಫಂಡ್’ಗಾಗಿ ಪಡೆದ ನಿಧಿಯನ್ನು ಹಿಂದಿರುಗಿಸಬೇಕು, ಎಂದು ಪಂಜಾಬ್‌ನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇವರು ಭಾರತವು ಚೀನಾದ ೫೯ ‘ಆಪ್ಸ’ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತವು ಸಕ್ಷಮವಾಗಿದ್ದು ಚೀನಾದ ಸಹಾಯವಿಲ್ಲದೇ ಭಾರತ ಹೋರಾಡಬಹುದು, ಎಂದೂ ಹೇಳಿದ್ದಾರೆ.
ಕೊರೋನಾದ ಸಂಕಟದೊಂದಿಗೆ ಹೋರಾಡಲು ‘ಪಿ.ಎಮ್. ಕೇರ್ ಫಂಡ್’ಅನ್ನು ಸ್ಥಾಪಿಸಲಾಗಿದೆ. ಅದಕ್ಕಾಗಿ ವಿವಿಧ ಕಂಪನಿಗಳು ಹಾಗೂ ವ್ಯಕ್ತಿಗಳಿಂದ ಕೋಟಿಗಟ್ಟಲೆ ರೂಪಾಯಿಗಳ ನಿಧಿಯನ್ನು ನೀಡಿದೆ. ಅದರಲ್ಲಿ ಚೀನಾದ ಕಂಪನಿಯೂ ಸೇರಿದೆ. ಇದರಲ್ಲಿ ಚೀನಾದ ‘ಹುವೈ’ ಕಂಪನಿಯು ೭ ಕೋಟಿ, ಟಿಕ್-ಟಾಕ್ ೩೦ ಕೋಟಿ, ಶಾವೋಮಿ ೧೦ ಕೋಟಿ ಹಾಗೂ ಒಪ್ಪೊ ೧ ಕೋಟಿ ರೂಪಾಯಿ ಸಹಾಯ ಮಾಡಿದೆ.
‘ನಾವು ಚೀನಾಗೆ ಮಾಹಿತಿ ನೀಡಿಲ್ಲ !’(ವಂತೆ) – ಟಿಕ್ ಟಾಕ್‌ನಿಂದ ಸ್ಪಷ್ಟೀಕರಣ
ಭಾರತವು ‘ಆಪ್ಸ್’ ಮೇಲೆ ನಿರ್ಬಂಧ ಹೇರಿದ ನಂತರ ಟಿಕ್-ಟಾಕ್ ಪತ್ರಿಕಾಪ್ರಕರಣೆ ಹೊರಡಿಸಿದ್ದು ಅದರಲ್ಲಿ, ‘ನಾವು ಚೀನಾ ಸರಕಾರಕ್ಕೆ ಭಾರತೀಯರ ಮಾಹಿತಿ ನೀಡಿಲ್ಲ’ ಎಂದು ಹೇಳಿದೆ. ಚೀನಾದ ‘ಆಪ್ಸ್’ನಿಂದ ಭಾರತೀಯರ ಮಾಹಿತಿ ಚೀನಾಗೆ ಹೋಗಿದ್ದರಿಂದ ಭಾರತದ ಭದ್ರತೆಗೆ ಅಪಾಯ ಉಂಟಾದ ಕಾರಣ ಭಾರತವು ಈ ‘ಆಪ್ಸ್’ ಮೇಲೆ ನಿರ್ಬಂದ ಹೇರಿದೆ. ಅದಕ್ಕೆ ಟಿಕ್-ಟಾಕ್ ಇಂಡಿಯಾದ ಅಧ್ಯಕ್ಷ ನಿಖಿಲ ಗಾಂಧಿಯವರು, ‘ಭಾರತ ಸರಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ನಮಗೆ ಇದರ ಬಗ್ಗೆ ಸರಕಾರದ ಸಂಬಂಧಪಟ್ಟ ವಿಭಾಗದ ಅಧಿಕಾರಿಯೊಂದಿಗೆ ಸಭೆಯ ಆಮಂತ್ರಣ ಸಿಕ್ಕಿದೆ. ಈ ಸಭೆಯಲ್ಲಿ ನಮಗೆ ನಮ್ಮ ಮಾತನ್ನು ಮಂಡಿಸುವ ಹಾಗೂ ಸ್ಪಷ್ಟೀಕರಣ ನೀಡುವ ಅವಕಾಶ ಸಿಗಲಿದೆ’ ಎಂದು ಹೇಳಿದ್ದಾರೆ.
Punjab CM urges Centre to return donations made by Chinese firms to PM-CARES Fundhttps://t.co/cEGP7fGRUW pic.twitter.com/yiUJYi16oG
— HT Punjab (@HTPunjab) June 29, 2020