ಪಂಜಾಬನಲ್ಲಿ ಹಿಂದುತ್ವನಿಷ್ಠ ನಾಯಕರನ್ನು ಹತ್ಯೆ ಮಾಡಲು ಖಲಿಸ್ತಾನಿ ಭಯೋತ್ಪಾದಕರ ಸಂಚು

ಪೊಲೀಸರಿಂದ ಅನೇಕ ಹಿಂದುತ್ವನಿಷ್ಠ ನಾಯಕರ ರಕ್ಷಣೆ

ಜಿಹಾದಿಗಳಿರಲಿ ಅಥವಾ ಖಲಿಸ್ತಾನೀ ಎಲ್ಲರ ಗುರಿ ಕೇವಲ ಹಿಂದೂಗಳೇ ಇದ್ದಾರೆ, ಎಂಬುದನ್ನು ಗಮನದಲ್ಲಿಟ್ಟು ಇನ್ನಾದರೂ ಹಿಂದೂಗಳು ಎಚ್ಚತ್ತುಕೊಳ್ಳುವರೇ ?

ಅಮೃತಸರ (ಪಂಜಾಬ) – ಪಂಜಾಬನ ಖಲಿಸ್ತಾನವಾದಿ ಭಯೋತ್ಪಾದಕರು ಹಿಂದುತ್ವನಿಷ್ಠರ ಮೇಲೆ ದಾಳಿ ಮಾಡುವ ಯತ್ನದ ತಯಾರಿಯಲ್ಲಿದ್ದಾರೆಂಬ ಮಾಹಿತಿಯು ದೆಹಲಿಯಲ್ಲಿ ಬಂಧಿತ ‘ಖಲಿಸ್ತಾನ ಲಿಬರೇಶನ್ ಫ್ರಂಟ್’ನ ೩ ಭಯೋತ್ಪಾದಕರ ವಿಚಾರಣೆಯ ಸಮಯದಲ್ಲಿ ಬಹಿರಂಗವಾಗಿದೆ. ಈ ಮಾಹಿತಿಯ ನಂತರ ಪಂಜಾಬ ಪೊಲೀಸರು ಹಿಂದುತ್ವನಿಷ್ಠ ನಾಯಕರನ್ನು, ಅದರಲ್ಲೂ ವಿಶೇಷವಾಗಿ ಅಮೃತಸರದ ಹಿಂದುತ್ವನಿಷ್ಠರ ಸುರಕ್ಷೆಯನ್ನು ಹೆಚ್ಚಿಸಿದ್ದಾರೆ. ಅದೇರೀತಿ ಗುಪ್ತಚರ ವಿಭಾಗದಿಂದ ನಿಗಾ ವಹಿಸಲಾಗುತ್ತಿದೆ.

೧. ದೆಹಲಿ ಪೊಲೀಸರು ಮೊಹಿಂದರ ಪಾಲ ಸಿಂಗ್, ಗುರುತೇಜ ಸಿಂಗ್ ಹಾಗೂ ಲವಪ್ರಿತ್ ಸಿಂಗ್ ಇವರನ್ನು ಬಂಧಿಸಿದ್ದರು. ವಿಚಾರಣೆಯ ಸಮಯದಲ್ಲಿ ಅವರು ಅಮೃತಸರದ ಶಿವಸೇನೆಯ ನಾಯಕ ಹಾಗೂ ಡೆರಾ ಸಚ್ಚಾ ಸೌದಾದ ಮುಖ್ಯಸ್ಥ ಗುರುಮಿತ ರಾಮ ರಹಿಮ್ ಇವರ ಓರ್ವ ಅನುಯಾಯಿಯ ಹತ್ಯೆ ಮಾಡುವ ಸಂಚನ್ನು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದರು.

೨. ಪಂಜಾಬನಲ್ಲಿಯ ಹಿಂದುತ್ವನಿಷ್ಠ ನಾಯಕ ಸುಧೀರ ಸುರಿಯವನು ಜಾಮೀನಿನ ಮೇಲೆ ನಿಡುಗಡೆಯಾದ ನಂತರ ಖಲಿಸ್ತಾನಿ ಭಯೋತ್ಪಾದಕರಿಂದ ಆತನಿಗೆ ಹತ್ಯೆ ಮಾಡುವ ಬೆದರಿಕೆಗಳು ಸಿಗುತ್ತಿದ್ದವು. ಅವರ ಸುರಕ್ಷೆಗಾಗಿ ೧೨ ರಕ್ಷಕರನ್ನು ಒದಗಿಸಿದ್ದಾರೆ. ‘ಬ್ರಾಹ್ಮಣ ಕಲ್ಯಾಣ ಮಂಚ್’ ಇದರ ಸಂಸ್ಥಾಪಕ ನರೇಶ ಧಾಮಿ ಹಾಗೂ ‘ಹಿಂದೂ ಧರ್ಮ ಸತ್ಕಾರ ಕಮಿಟಿ’ಯ ಮುಖ್ಯಸ್ಥರಿಗೂ ಸುರಕ್ಷೆ ಪೂರೈಸಲಾಗಿದೆ.