ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರ ಘೋಷಣೆ
ಅಮರಾವತಿ (ಆಂಧ್ರಪ್ರದೇಶ) – ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಕಲಬೆರೆಕೆಯ ತುಪ್ಪ ಪೂರೈಸಿರುವವರನ್ನು ರಾಜ್ಯ ಸರಕಾರ ಸುಮ್ಮನೆ ಬಿಡುವುದಿಲ್ಲ, ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಘೋಷಿಸಿದ್ದಾರೆ.
ವೈ.ಎಸ್.ಆರ್ ಕಾಂಗ್ರೆಸ್ಸನ್ನು ಟೀಕಿಸುತ್ತಾ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು, ಹಸುವಿನ ತುಪ್ಪದ ಬೆಲೆ ಕಿಲೋಗೆ ೩೨೦ ರೂಪಾಯಿ ಹೇಗೆ ಸಾಧ್ಯ ? ತಮ್ಮ ತಪ್ಪು ಒಪ್ಪಿಕೊಳ್ಳುವ ಬದಲು ಅವರು (ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ) ನಾಚಿಕೆ ಇಲ್ಲದೆ ಇದನ್ನು ರಾಜಕಾರಣ ಎಂದು ಹೇಳುತ್ತಿದ್ದಾರೆ ? ಅವರು ತುಪ್ಪದ ಗುಣಮಟ್ಟದ ಜೊತೆಗೆ ಹೇಗೆ ರಾಜಿ ಮಾಡಿಕೊಂಡರು ? ಗುಣಮಟ್ಟದ ಜೊತೆಗೆ ಪವಿತ್ರ ಆಚರಣೆ ಮತ್ತು ಕೋಟ್ಯಾಂತರ ಭಕ್ತರ ಭಾವನೆ ಕಾಪಾಡುವದು ಮತ್ತು ಶಾಶ್ವತವಾಗಿ ಇರಿಸುವ ವಿಷಯವಾಗಿದೆ. ಯಾರು ಕೂಡ ಭಾವನೆ, ಪರಂಪರೆ ಮತ್ತು ಧಾರ್ಮಿಕ ಪದ್ಧತಿಯ ಜೊತೆಗೆ ಚೆಲ್ಲಾಟ ಆಡಬಾರದು. ನಮ್ಮ ಸರಕಾರ ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ಭಾವನೆ ಕಾಪಾಡುವುದಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಪ್ರತಿಯೊಂದು ಧರ್ಮಕ್ಕೆ ತನ್ನದೇ ಆದ ಪರಂಪರೆ ಮತ್ತು ಪದ್ಧತಿಗಳು ಇರುತ್ತವೆ. ಅದರ ಸಂರಕ್ಷಣೆ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು.