ದೇಶದಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪ್ರಸಾದವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು ! – ಆಲ್ ಫುಡ್ ಅಂಡ್ ಡ್ರಗ್ ಲೈಸೆನ್ಸ್ ಹೋಲ್ಡರ ಫೆಡರೆಶನ

ಮುಂಬಯಿ – ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಹಾಗೆಯೇ ಯೋಗ್ಯ ಮಾರ್ಗ ಸೂಚಿಗಳನ್ನು ರೂಪಿಸಬೇಕು ಹಾಗೂ ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದ ಉನ್ನತ ಮಟ್ಟದ ಪರಿಶೀಲನೆ ಮಾಡಬೇಕು ಎಂದು ‘ಆಲ್ ಫುಡ್ ಅಂಡ್ ಡ್ರಗ್ಸ್ ಲೈಸೆನ್ಸ್ ಹೋಲ್ಡರ್ ಫೆಡರೇಶನ್’ ಆಗ್ರಹಿಸಿದೆ. ಈ ಕುರಿತು ‘ಆಲ್ ಫುಡ್ ಅಂಡ್ ಡ್ರಗ್ಸ್ ಲೈಸೆನ್ಸ್ ಹೋಲ್ಡರ್ಸ್ ಫೆಡರೇಶನ್’ ಅಧ್ಯಕ್ಷ ಅಭಯ ಪಾಂಡೆ ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (‘ಎಫ್.ಎಸ್ ಎಸ್.ಎ.ಐ.’) ಪತ್ರ ಕಳುಹಿಸಿದ್ದಾರೆ.