ಹಿಂದೂ ಮತ್ತು ಬೌದ್ಧರ 200 ಮನೆಗಳು ಮತ್ತು ಅಂಗಡಿಗಳು ಬೆಂಕಿಗಾಹುತಿ: 3 ಜನರ ಸಾವು
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿಲ್ಲುತ್ತಿಲ್ಲ. ಸೆಪ್ಟೆಂಬರ್ 19 ರಂದು, ಮತಾಂಧ ಮುಸ್ಲಿಮರು ಚಿತ್ತಗಾಂವನ ದಿಘಿನಾಲಾ ಮತ್ತು ಖಗರಾಚರಿ ಪ್ರದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 200ಕ್ಕೂ ಹೆಚ್ಚು ಮನೆಗಳು, ಅಂಗಡಿಗಳನ್ನು ಸುಡಲಾಗಿದೆ. ಹಾಗೆಯೇ ಒಂದು ಬೌದ್ಧ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಈ ಹಿಂಸಾಚಾರದಲ್ಲಿ 3 ಜನರು ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ 18 ರಂದು, ಖಾಗರಾಚರಿ ಪ್ರದೇಶದಲ್ಲಿ ಮಹಮ್ಮದ್ ಮಾಮುನ್ ಹೆಸರಿನ ಅಪರಾಧಿಯನ್ನು ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಮಾಮೂನ ದ್ವಿಚಕ್ರವಾಹನವನ್ನು ಕದಿಯಲು ಪ್ರಯತ್ನಿಸುತ್ತಿರುವಾಗ ಈ ಕೊಲೆ ನಡೆಯಿತು. ತದನಂತರ ಆದಿವಾಸಿಗಳು ಬೆಂಗಾಲಿಗಳ ಮೇಲೆ ದಾಳಿ ಮಾಡಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ವದಂತಿ ಹಬ್ಬಿಸಲಾಗಿತ್ತು. ಈ ವದಂತಿ ಹರಡಲು ಮಸೀದಿಯ ದುರುಪಯೋಗ ಪಡಿಸಲಾಯಿತು. ಮಾಮೂನನ ಕೊಲೆಯನ್ನು ವಿರೋಧಿಸಿ ‘ಬಂಗಾಳಿ ವಿದ್ಯಾರ್ಥಿ ಪರಿಷತ್ತು’ ಹೆಸರಿನ ಸಂಘಟನೆಯು ಸೆಪ್ಟೆಂಬರ 19ರಂದು ಮೋರ್ಚಾವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಭಾಗವಹಿಸಿದ್ದ ಜನರು ಬೌದ್ಧ ಚಕ್ಮಾ ಮತ್ತು ಹಿಂದೂ ತ್ರಿಪುರಿ ಸಮುದಾಯದ ಜನರ ಮೇಲೆ ದಾಳಿ ಮಾಡಿದರು. ಅವರ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಚಿಕ್ಕ ಮಕ್ಕಳು, ವೃದ್ಧರು ಮತ್ತು ಮಹಿಳೆಯರನ್ನು ಥಳಿಸಿದ್ದಾರೆ. ಈ ಹಿಂಸಾಚಾರದಲ್ಲಿ 20 ವರ್ಷದ ಜುನನ ಚಕ್ಮಾ, 60 ವರ್ಷದ ಧನಂಜಯ ಮತ್ತು 30 ವರ್ಷದ ರುಬೆಲ ತ್ರಿಪುರಾ ಇವರು ಮರಣ ಹೊಂದಿದ್ದಾರೆ. ಇದಕ್ಕಿಂತ ಹೆಚ್ಚು ಜನರು ಮರಣಿಸಿದ್ದಾರೆಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಈ ಹಿಂದೆಯೂ ಇದೇ ನಡೆದಿತ್ತು, ಈಗಲೂ ನಡೆಯುತ್ತಿದೆ ಮತ್ತು ಮುಂದೆಯೂ ನಡೆಯುತ್ತಲೇ ಇರುತ್ತದೆ ! ಭವಿಷ್ಯದಲ್ಲಿ ಈ ಸ್ಥಿತಿ ಭಾರತದಲ್ಲಿ ನಿರ್ಮಾಣವಾದರೆ ಆಶ್ಚರ್ಯಪಡಬಾರದು ! |