ತಿರುಪತಿ ದೇವಸ್ಥಾನದ ಲಾಡು ಪ್ರಕರಣದ ನಂತರ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಆದೇಶ
ಬೆಂಗಳೂರು – ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಾಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸುವಂತೆ ಕರ್ನಾಟಕದ ದತ್ತಿ ಇಲಾಖೆ ಆದೇಶಿಸಿದೆ. ಈ ಸಂಬಂಧ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ದತ್ತಿ ವಿಭಾಗದ ಅಡಿಯಲ್ಲಿರುವ ದೇವಸ್ಥಾನಗಳ ದೀಪಗಳಲ್ಲಿ, ಪ್ರಸಾದ ತಯಾರಿಸಲು ಮತ್ತು ಅನ್ನದಾನ ಭವನದಲ್ಲಿ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸಬೇಕು ಎನ್ನಲಾಗಿದೆ.
ನಂದಿನಿ ತುಪ್ಪದ ನಿರ್ಮಿತಿಯನ್ನು ‘ಕರ್ನಾಟಕ ಸಹಕಾರ ಮಹಾಸಂಘ’ ನಿರ್ಮಿಸಿದೆ. ಈ ತುಪ್ಪವನ್ನು ಹಸುವಿನ ಹಾಲಿನಿಂದ ತಯಾರಿಸಲಾಗಿದೆ. ಈ ತುಪ್ಪವನ್ನು ಸಾಂಪ್ರದಾಯಿಕ ವಿಧಾನದ ಪ್ರಕಾರ ತಯಾರಿಸಲಾಗುತ್ತದೆ. ಅದಕ್ಕೆ ‘ಎಗ್‌ಮಾರ್ಕ್’ (ಕೃಷಿ ಇಲಾಖೆಯಿಂದ ನೀಡಿರುವ ಪ್ರಮಾಣಪತ್ರ) ಪ್ರಮಾಣಪತ್ರ ಇದೆ ಮತ್ತು ಅದರಲ್ಲಿ ಯಾವುದೇ ಕೃತಕ ಬಣ್ಣ ಸೇರಿಸಿರುವುದಿಲ್ಲ.