ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯೆಂದು ಪತಂಜಲಿಯ ‘ಕೊರೊನಿಲ್’ಗೆ ಆಯುಷ್ ಸಚಿವಾಲಯದಿಂದ ಮಾನ್ಯತೆ

ನವ ದೆಹಲಿ – ಕೊನೆಗೂ ಯೋಗಋಷಿ ರಾಮದೇವ ಬಾಬಾರವರ ‘ಪತಂಜಲಿ ಯೋಗಪೀಠ’ದಿಂದ ತಯಾರಿಸಲಾದ ‘ಕೊರೊನಿಲ್’ಗೆ ಕೇಂದ್ರ ಸರಕಾರದಿಂದ ಮಾನ್ಯತೆ ಸಿಕ್ಕಿದೆ. ‘ಈ ಔಷಧಿಯನ್ನು ಕೊರೋನಾ ಪೀಡಿತರಿಗೆ ಗುಣಮುಖರನ್ನಾಗಿಸುತ್ತದೆ ಎಂದು ಮಾರಾಟ ಮಾಡದೇ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯೆಂದು ಮಾರಾಟ ಮಾಡಬಹುದು’, ಎಂದು ಹೇಳುವ ಮೂಲಕ ಸರಕಾರ ಅನುಮತಿ ನೀಡಿದೆ ಎಂದು ಆಯುಷ ಸಚಿವಾಲಯವು ಹೇಳಿದೆ. ಪತಂಜಲಿಯು ಈ ಹಿಂದೆ ‘ಕೊರೊನಿಲ್ ಔಷಧಿಯಿಂದ ಕೊರೋನಾ ರೋಗಿ ಗುಣಮುಖವಾಗುತ್ತಾನೆ’, ಎಂದು ಹೇಳಿಕೊಂಡಿತ್ತು.

(ಸೌಜನ್ಯ : N D ಟಿವಿ)