ದೇಶದಲ್ಲಿನ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಹಿಂದುಗಳಿಗೆ ಒಪ್ಪಿಸಿ ! – ವಿಶ್ವ ಹಿಂದೂ ಪರಿಷತ್

ಶೀರ್ಘದಲ್ಲೇ ಬೃಹತ್ ಅಭಿಯಾನ ನಡೆಯಲಿದೆ

ನವ ದೆಹಲಿ – ಕೇವಲ ತಿರುಪತಿ ಬಾಲಾಜಿ ದೇವಸ್ಥಾನದ ಮೇಲೆ ಸರಕಾರದ ಅಧಿಕಾರ ಇಲ್ಲ, ಬದಲಾಗಿ ದೇಶಾದ್ಯಂತ ೪ ಲಕ್ಷಕ್ಕಿಂತಲೂ ಹೆಚ್ಚಿನ ದೇವಸ್ಥಾನಗಳು ಸರಕಾರದ ಆಧೀನದಲ್ಲಿ ಇವೆ. ಈ ಅಂಶಗಳ ಕುರಿತು, ಸರಕಾರವು ದೇವಸ್ಥಾನಗಳು ಮತ್ತು ಅದರ ಆಸ್ತಿ ಹಿಂದೂ ಸಮಾಜದ ಅಧೀನಕ್ಕೆ ನೀಡಬೇಕು ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ. ದೇವಸ್ಥಾನ ನಿಜವಾದ ಟ್ರಸ್ಟಿಗಳು ಹಿಂದುಗಳಾಗಿದ್ದಾರೆ, ಹೊರತು ಸರಕಾರವಲ್ಲ. ಹಿಂದುಗಳ ದೇವಸ್ಥಾನ ಮತ್ತು ಇತರ ಧಾರ್ಮಿಕ ಸ್ಥಳಗಳು ಇವುಗಳ ಮೇಲಿನ ಸರಕಾರಿ ಆಡಳಿತದ ವಿರುದ್ಧ ವಿಶ್ವ ಹಿಂದೂ ಪರಿಷತ್ ಶೀರ್ಘದಲ್ಲೇ ಬೃಹತ್ ಅಭಿಯಾನ ಆರಂಭಿಸುವುದು ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ ಬನ್ಸಲ ಇವರು ಘೋಷಿಸಿದರು. ತಿರುಪತಿ ದೇವಸ್ಥಾನದಲ್ಲಿನ ಪ್ರಸಾದದ ಲಡ್ಡುವಿನಲ್ಲಿ ಹಂದಿಯ ಕೊಬ್ಬು, ಮೀನಿನ ಎಣ್ಣೆ ಮತ್ತು ಗೋಮಾಂಸದಿಂದ ನಿರ್ಮಾಣ ಮಾಡಿರುವ ಕೊಬ್ಬಿನ ಬಳಕೆ ಮಾಡಿರುವುದರಿಂದ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇದರಿಂದ ಬನ್ಸಲ್ ಇವರು ಮೇಲಿನ ಬೇಡಿಕೆ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಮಹಾ ಸಚಿವ ಭಜರಂಗ ಭಾಗರಾ ಇವರು ಒಂದು ವಿಡಿಯೋ ಪ್ರಸಾರ ಮಾಡಿ,

೧. ತಿರುಪತಿಯ ಘಟನೆಯಿಂದ ವಿಶ್ವ ಹಿಂದೂ ಪರಿಷತ್ತಿನ, ದೇವಸ್ಥಾನಗಳ ಮೇಲೆ ಸರಕಾರದ ಆಡಳಿತದಿಂದ ದೇವಸ್ಥಾನದ ವ್ಯವಹಾರಗಳಲ್ಲಿ ರಾಜಕೀಯ ಪ್ರವೇಶವಾಗುತ್ತದೆ. ಅಲ್ಲಿ (ಸರಕಾರದ ಅಧೀನ ಇರುವ ದೇವಸ್ಥಾನಗಳಲ್ಲಿ) ಅಹಿಂದೂ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಉದ್ದೇಶಪೂರ್ವಕವಾಗಿ ಪ್ರಸಾದವನ್ನು ಅಪವಿತ್ರ ಗೊಳಿಸಲಾಗುತ್ತದೆ ಎಂಬ ವಿಶ್ವಾಸವು ದೃಢವಾಗುತ್ತದೆ.

೨. ಹಿಂದುಗಳ ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಸರಕಾರಿ ವ್ಯಾಪ್ತಿಯಲ್ಲಿ ಇರಬಾರದು, ಎಂದು ವಿಶ್ವ ಹಿಂದೂ ಪರಿಷತ್ತು ಅನೇಕ ದಿನಗಳಿಂದ ಬೇಡಿಕೆ ಮಾಡುತ್ತಿದೆ. ತಿರುಪತಿಯ ಲಡ್ಡುವಿನ ಪ್ರಸಾದದಲ್ಲಿನ ಪ್ರಾಣಿಗಳ ಕೊಬ್ಬಿನ ಬಳಕೆ, ಇದು ಸಹನೇಯ ಮಿತಿ ಮೀರಿದೆ ಹಾಗೂ ಹೇಯ ಕೃತ್ಯವಾಗಿದೆ. ಇದರಿಂದ ಸಂಪೂರ್ಣ ಹಿಂದೂ ಸಮಾಜ ದುಃಖಿತವಾಗಿದೆ ಮತ್ತು ನೋವು ಉಂಟಾಗಿದೆ. ಹಿಂದೂ ಜನಾಂಗ ಅವರ ಶ್ರದ್ಧೆಯ ಮೇಲೆ ಮೇಲಿಂದ ಮೇಲೆ ಆಗುವ ದಾಳಿಗಳು ಸಹಿಸುವುದಿಲ್ಲ.

೩. ಈ ಪ್ರಕರಣದ ಗಂಭೀರತೆ ಗಮನಿಸಿ ಆಂಧ್ರಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರ ಇದರ ಕುರಿತು ಗಂಭೀರವಾಗಿ ಯೋಚನೆ ಮಾಡುವರು ಎಂದು ನಮಗೆ ವಿಶ್ವಾಸವಿದೆ. ತಿರುಪತಿಯಲ್ಲಿನ ಲಡ್ಡುವಿನ ಪ್ರಕರಣವನ್ನು ಕುಲಂಕುಶವಾಗಿ ಸಮೀಕ್ಷೆ ನಡೆಸಿ ಅದರಲ್ಲಿ ಭಾಗಿಯಾಗಿರುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇಂದ್ರದಲ್ಲಿ ಮತ್ತು ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಭಾಜಪದ ಸರಕಾರ ಇರುವಾಗ ಮೊದಲು ಆ ರಾಜ್ಯಗಳಲ್ಲಿನ ಹಿಂದುಗಳ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರ ಕೈಗೆ ನೀಡಬೇಕು. ಇದಕ್ಕಾಗಿ ಹಿಂದುಗಳು ಒತ್ತಾಯ ಪಡಿಸುವಂತೆ ಆಗಬಾರದು ಎಂದು ಹಿಂದುಗಳಿಗೆ ಅನಿಸುತ್ತದೆ !