ಬಳ್ಳಾರಿಯಲ್ಲಿ ಕೊರೋನಾದಿಂದ ಮೃತಪಟ್ಟ ೮ ರೋಗಿಗಳ ಶವವನ್ನು ಒಂದೇ ಗುಂಡಿಯಲ್ಲಿ ಹಾಕಲಾಯಿತು

ಸರಕಾರವು ಇಂತಹ ಸಂವೇದನಾಶೂನ್ಯ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಬಳ್ಳಾರಿ – ಇಲ್ಲಿ ಕೊರೋನಾದಿಂದ ಬಳಲುತ್ತಿದ್ದ ೮ ರೋಗಿಗಳು ಮೃತಪಟ್ಟ ನಂತರ ಅವರ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಗುಂಡಿಯಲ್ಲಿ ಎಸೆದಿರುವ ‘ವಿಡಿಯೋ’ ಒಂದು ಪ್ರಸಾರಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ಮಾಡುವಂತೆ ಆದೇಶ ನೀಡಿದೆ. ಈ ಘಟನೆಯ ಬಗ್ಗೆ ರಾಜ್ಯದ ವಿರೋಧಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆ.ಡಿಎಸ್. ಪಕ್ಷಗಳು ಸರಕಾರವನ್ನು ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಇವರು, ‘ಬಳ್ಳಾರಿಯಲ್ಲಿ ಕೊರೋನಾದಿಂದಾಗಿ ಮೃತಪಟ್ಟ ರೋಗಿಗಳ ಮೃತದೇಹವನ್ನು ಅತ್ಯಂತ ಅಮಾನವೀಯ ಪದ್ದತಿಯಿಂದ ಗುಂಡಿಯಲ್ಲಿ ಎಸೆಯಲಾಗಿದೆ. ಈ ದೃಶ್ಯ ಮನಸ್ಸಿಗೆ ಘಾಸಿ ಉಂಟು ಮಾಡುವಂತಿದೆ, ಇದರಿಂದ ‘ಸರಕಾರ ಕೊರೋನಾದ ಸಂಕಟವನ್ನು ಹೇಗೆ ನಿಭಾಯಿಸುತ್ತಿದೆ’, ಎಂಬುದು ಕಂಡು ಬರುತ್ತಿದೆ. ಭಾಜಪ ಇದರತ್ತ ಗಮನ ಹರಿಸಬೇಕು.’ ಎಂದು ಹೇಳಿದ್ದಾರೆ.

ಸಂಬಂಧಪಟ್ಟ ಆರೋಗ್ಯ ಸಿಬ್ಬಂದಿ ಅಮಾನತು

ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇವರು, ‘ಈ ಘಟನೆಯಲ್ಲಿ ಸಹಭಾಗಿಯಾಗಿದ್ದ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಅಮಾನತ್ತುಗೊಳಿಸಲಾಗಿದೆ. ಕೊರೋನಾ ಪೀಡಿತ ರೋಗಿಗಳ ಮೃತದೇಹದ ಅಂತಿಮಸಂಸ್ಕಾರವನ್ನು ಮಾಡುವಾಗ ಹಾಕಿದ ನಿಯಮಗಳ ಪಾಲನೆ ಮಾಡಬೇಕು’ ಎಂದು ಹೇಳಿದ್ದಾರೆ
ಅಮಾನವೀಯ ಹಾಗೂ ದುಃಖಕರ ಘಟನೆ ! – ಮುಖ್ಯಮಂತ್ರಿ
ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಮೃತದೇಹವನ್ನು ಈ ರೀತಿಯಲ್ಲಿ ಎಸೆಯುವುದು ಅಮಾನವೀಯ ಹಾಗೂ ದುಃಖದಾಯಕವಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೊಂದು ಧರ್ಮವಿಲ್ಲ, ಎಂಬುದು ಆರೋಗ್ಯ ಕಾರ್ಯಕರ್ತರು ಗಮನದಲ್ಲಿಡಬೇಕು. ಇದರಿಂದಾಗಿ ಇಂತಹವರ ಅಂತಿಮಸಂಸ್ಕಾರವನ್ನು ಗೌರವದಿಂದ ಮಾಡಬೇಕು’ ಎಂದು ಹೇಳಿದ್ದಾರೆ.ಬಳ್ಳಾರಿಯಲ್ಲಿ ಕೊರೋನಾದಿಂದ ಮೃತಪಟ್ಟ ೮ ರೋಗಿಗಳ ಶವವನ್ನು ಒಂದೇ ಗುಂಡಿಯಲ್ಲಿ ಹಾಕಲಾಯಿತು

ಸರಕಾರವು ಇಂತಹ ಸಂವೇದನಾಶೂನ್ಯ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಬಳ್ಳಾರಿ – ಇಲ್ಲಿ ಕೊರೋನಾದಿಂದ ಬಳಲುತ್ತಿದ್ದ ೮ ರೋಗಿಗಳು ಮೃತಪಟ್ಟ ನಂತರ ಅವರ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಗುಂಡಿಯಲ್ಲಿ ಎಸೆದಿರುವ ‘ವಿಡಿಯೋ’ ಒಂದು ಪ್ರಸಾರಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ಮಾಡುವಂತೆ ಆದೇಶ ನೀಡಿದೆ.
ಈ ಘಟನೆಯ ಬಗ್ಗೆ ರಾಜ್ಯದ ವಿರೋಧಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆ.ಡಿಎಸ್. ಪಕ್ಷಗಳು ಸರಕಾರವನ್ನು ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಇವರು, ‘ಬಳ್ಳಾರಿಯಲ್ಲಿ ಕೊರೋನಾದಿಂದಾಗಿ ಮೃತಪಟ್ಟ ರೋಗಿಗಳ ಮೃತದೇಹವನ್ನು ಅತ್ಯಂತ ಅಮಾನವೀಯ ಪದ್ದತಿಯಿಂದ ಗುಂಡಿಯಲ್ಲಿ ಎಸೆಯಲಾಗಿದೆ. ಈ ದೃಶ್ಯ ಮನಸ್ಸಿಗೆ ಘಾಸಿ ಉಂಟು ಮಾಡುವಂತಿದೆ, ಇದರಿಂದ ‘ಸರಕಾರ ಕೊರೋನಾದ ಸಂಕಟವನ್ನು ಹೇಗೆ ನಿಭಾಯಿಸುತ್ತಿದೆ’, ಎಂಬುದು ಕಂಡು ಬರುತ್ತಿದೆ. ಭಾಜಪ ಇದರತ್ತ ಗಮನ ಹರಿಸಬೇಕು.’ ಎಂದು ಹೇಳಿದ್ದಾರೆ.

ಸಂಬಂಧಪಟ್ಟ ಆರೋಗ್ಯ ಸಿಬ್ಬಂದಿ ಅಮಾನತು

ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇವರು, ‘ಈ ಘಟನೆಯಲ್ಲಿ ಸಹಭಾಗಿಯಾಗಿದ್ದ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಅಮಾನತ್ತುಗೊಳಿಸಲಾಗಿದೆ. ಕೊರೋನಾ ಪೀಡಿತ ರೋಗಿಗಳ ಮೃತದೇಹದ ಅಂತಿಮಸಂಸ್ಕಾರವನ್ನು ಮಾಡುವಾಗ ಹಾಕಿದ ನಿಯಮಗಳ ಪಾಲನೆ ಮಾಡಬೇಕು’ ಎಂದು ಹೇಳಿದ್ದಾರೆ

ಅಮಾನವೀಯ ಹಾಗೂ ದುಃಖಕರ ಘಟನೆ ! – ಮುಖ್ಯಮಂತ್ರಿ

ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಮೃತದೇಹವನ್ನು ಈ ರೀತಿಯಲ್ಲಿ ಎಸೆಯುವುದು ಅಮಾನವೀಯ ಹಾಗೂ ದುಃಖದಾಯಕವಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೊಂದು ಧರ್ಮವಿಲ್ಲ, ಎಂಬುದು ಆರೋಗ್ಯ ಕಾರ್ಯಕರ್ತರು ಗಮನದಲ್ಲಿಡಬೇಕು. ಇದರಿಂದಾಗಿ ಇಂತಹವರ ಅಂತಿಮಸಂಸ್ಕಾರವನ್ನು ಗೌರವದಿಂದ ಮಾಡಬೇಕು’ ಎಂದು ಹೇಳಿದ್ದಾರೆ.